ಅಂದು 'ಗೋವಾದಲ್ಲಿ ಸಿಐಡಿ 999'.. ಈಗ '666 ಆಪರೇಷನ್ ಡ್ರೀಮ್ ಥಿಯೇಟರ್'.. ತೆಲುಗಿನಲ್ಲಿ ಅದೇ ಮ್ಯಾಜಿಕ್

ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗಿಗೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ. ಹೇಮಂತ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿ ಸಿನಿಮಾ ಮೂಡಿ ಬರಲಿದೆ.

70ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಅದಕ್ಕಾಗಿ ಭಾರೀ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ದಶಕಗಳ ಹಿಂದೆಯೇ ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಸ್ಪೈ ಸಿನಿಮಾಗಳು ಬಂದಿತ್ತು. 'ಜೇಡರಬಲೆ', ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999 ಹಾಗೂ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾಗಳಲ್ಲಿ ಸಿಐಡಿ 999 ಪ್ರಕಾಶ್ ಪಾತ್ರದಲ್ಲಿ ಅಣ್ಣಾವ್ರ ನಟನೆ ಮರೆಯೋಕೆ ಸಾಧ್ಯವಿಲ್ಲ. ವಿಶೇಷ ಅಂದ್ರೆ ಈಗ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಕೂಡ ಏಜೆಂಟ್ ಪ್ರಕಾಶ್ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.

From Goaalli CID 999 to 666 Operation Dream Theater Rajkumar Legacy Repeats in Telugu

ಸದ್ಯ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಅಚ್ಚರಿ ಅಂದ್ರೆ ದಶಕಗಳ ಹಿಂದೆ ಡಾ. ರಾಜ್‌ಕುಮಾರ್ ನಟನೆಯ 'ಗೋವಾದಲ್ಲಿ ಸಿಐಡಿ 999' ಸಿನಿಮಾ ಕೂಡ ತೆಲುಗಿಗೆ ಡಬ್ ಆಗಿ ತೆರೆಕಂಡಿತ್ತು. ಹಿಸ್ಟರಿ ರಿಪೀಟ್ಸ್ ಎನ್ನುವಂತೆ ಅದೇ ಹಾದಿಯಲ್ಲಿ ಶಿವಣ್ಣನ ಸಿನಿಮಾ ಸಾಗುತ್ತಿದೆ. 'ಪೆದ್ದಿ' ಸಿನಿಮಾ ಮೂಲಕ ಈಗಾಗಲೇ ಸೆಂಚುರಿ ಸ್ಟಾರ್ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಹಾಗಾಗಿ ಈಗ ಆಂಧ್ರ, ತೆಲಂಗಾಣದಲ್ಲಿ ಶಿವಣ್ಣನ ಕ್ರೇಜ್ ಶುರುವಾಗಿದೆ. ಇಂತಹ ಸಮಯದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುವುದು ಕುತೂಹಲ ಮೂಡಿಸಿದೆ.

1968ರಲ್ಲಿ 'ಗೋವಾದಲ್ಲಿ ಸಿಐಡಿ 999' ಸಿನಿಮಾ ತೆರೆಗೆ ಬಂದಿತ್ತು. ದೊರೆ-ಭಗವಾನ್ ಜೋಡಿ ಸಿನಿಮಾ ನಿರ್ದೇಶನ ಮಾಡಿ ಸ್ವತಃ ನಿರ್ಮಿಸಿದ್ದರು. ಸಿಐಡಿ 888 ಪಾತ್ರದಲ್ಲಿ ನರಸಿಂಹರಾಜು ಮಿಂಚಿದ್ದರು. ಲಕ್ಷ್ಮಿ, ಶಕ್ತಿಪ್ರಸಾದ್, ಜ್ಯೋತಿ ಲಕ್ಷ್ಮಿ ಚಿತ್ರದ ತಾರಾಗಣದಲ್ಲಿದ್ದರು. ಸಿಐಡಿ 999 ಸರಣಿಯಲ್ಲಿ ಬಂದಿದ್ದ 2ನೇ ಸಿನಿಮಾ ಇದಾಗಿತ್ತು. ಈ ಚಿತ್ರವನ್ನು ತೆಲುಗಿನಲ್ಲಿ ಆಂಧ್ರ ಜೇಮ್ಸ್ ಬಾಂಡ್ ಸಿನಿಮಾ ಎಂದೇ ಪ್ರಚಾರ ಮಾಡಿದ್ದರು.

ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ವಿಶ್ವಾಸ್‌ ಕಶ್ಯಪ್‌ ಮತ್ತವರ ತಂಡ ಭಾರೀ ಸೆಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ನೂರಾರು ಜನ ಅದಕ್ಕಾಗಿ ಹಗಳಿರುಳು ಶ್ರಮಿಸಿದ್ದಾರೆ. 70ರ ದಶಕದ ಬೆಂಗಳೂರು ಸಿಟಿ ನೆನಪಿಸುವ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ಮಾಡಿದ್ದಾರೆ. ಇದೇ ಸೆಟ್‌ನಲ್ಲಿ 100 ದಿನ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಕ್ಕಿದೆ. ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಏಜೆಂಟ್ ಶಂಕರ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಸೇರಿ ದೊಡ್ಡ ತಾರಾಗಣ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿದೆ. 'ಸಪ್ತಸಾಗರದಾಚೆ ಎಲ್ಲೊ' ಸರಣಿ ಸಿನಿಮಾಗಳ ಬಳಿಕ ಹೇಮಂತ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವರ್ಷದ ಕೊನೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

Read more about: shivarajkumar rajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X