'ಟಾಕ್ಸಿಕ್‌' ಬರೋವರ್ಗೂ ಕಾಯಬೇಡಿ; ಜುಲೈನಲ್ಲಿ ಬರ್ತಿವೆ ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು

ವರ್ಷದ 6 ತಿಂಗಳು ಮುಗಿದು 7ನೇ ತಿಂಗಳು ಆರಂಭವಾಗಿದೆ. ಮೊದಲ 6 ತಿಂಗಳಲ್ಲಿ ಕನ್ನಡ ಸಿನಿಮಾಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. 100ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದ್ರು ಗೆದ್ದಿದ್ದು ಎರಡು ಸಿನಿಮಾ ಮಾತ್ರ. ಮುಂದೆ 'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇನ್ನು ಜುಲೈ ತಿಂಗಳಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಬಿಡುಗಡೆಗೆ ಅಣಿಯಾಗುತ್ತಿವೆ.

ಕಿಚ್ಚು ಸುದೀಪ್, ದುನಿಯಾ ವಿಜಯ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಉಪೇಂದ್ರ ಸೇರಿದಂತೆ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಜ್ಜಾಗಿಲ್ಲ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಮೂಲಕ ಯಶ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದಕ್ಕಾಗಿ ರಾಕಿಂಗ್ ಸ್ಟಾರ್ 4 ವರ್ಷ ವ್ಯಯಿಸಿದ್ದಾರೆ. 'ಲ್ಯಾಂಡ್‌ಲಾರ್ಡ್' ಆಗಿ ವರ್ಷದ ಆರಂಭದಲ್ಲೇ ದುನಿಯಾ ವಿಜಯ್ ಚಿತ್ರಮಂದಿರಕ್ಕೆ ಬಂದಿದ್ದರು. 'ಸಿಟಿಲೈಟ್ಸ್' ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ.

From Graamaayana to karavali July 2026 Release kannada movies list

ಗಣೇಶ್ ನಟನೆಯ ಯಾವುದಾದರೂ ಒಂದು ಸಿನಿಮಾ ಈ ವರ್ಷ ತೆರೆಗೆ ಬರಲಿದೆ. ಶಿವಣ್ಣನ 2 ಸಿನಿಮಾ ಬಿಡುಗಡೆಯಾದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಜುಲೈ ರಿಲೀಸ್ ಕನ್ನಡ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ.

ಗ್ರಾಮಾಯಣ

ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ 'ಗ್ರಾಮಾಯಣ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಹಳ್ಳಿ ಸೊಗಡಿನ ರಗಡ್ ಲವ್ ಸ್ಟೋರಿ ಚಿತ್ರದಲ್ಲಿದೆ. ಜುಲೈ 3ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ದೇವನೂರು ಚಂದ್ರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಭರ್ಜರಿಯಾಗಿ ನಡೀತಿದೆ.

From Graamaayana to karavali July 2026 Release kannada movies list

ಮದರ್ ಪ್ರಾಮಿಸ್

ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಜುಲೈ 10ರಂದು ಬಿಡುಗಡೆ ಆಗಲಿದೆ. ಚಿತ್ರಕ್ಕೆ ಪೂರ್ಣಚಂದ್ರ ಮೈಸೂರು ಸಾರಥ್ಯ ವಹಿಸಿದ್ದಾರೆ. ಇದೊಂದು ಫನ್ ಎಂಟರ್‌ಟೈನರ್ ಸಿನಿಮಾ. ಟ್ರೈಲರ್ ನೋಡಿ ಸಿನಿಮಾ ನೋಡಲೇಬೇಕು ಎಂದು ಸಾಕಷ್ಟು ಜನ ಕಾಯುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರತಂಡ ಪ್ರಚಾರ ಮಾಡುತ್ತಿಲ್ಲ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು 2 ಗಂಟೆ 46 ನಿಮಿಷ ಕಾಲಾವಧಿಯ ಸಿನಿಮಾ ಇದು.

ಕರಾವಳಿ

ಪ್ರಜ್ವಲ್ ದೇವರಾಜ್ ಹಾಗೂ ರಾಜ್‌ ಬಿ ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ಜುಲೈ 24ಕ್ಕೆ ತೆರೆಗೆ ಬರ್ತಿದೆ. ಕಳೆದ ವರ್ಷ ಅದೇ ದಿನ 'ಸು ಫ್ರಂ ಸೋ' ಸಿನಿಮಾ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಕರಾವಳಿ ಭಾಗದ ಕಂಬಳಿ ಕ್ರೀಡೆಯನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಪಿಕ್ಚರ್

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಟ ಗಣೇಶ್ ಹಾಗೂ ಪತ್ನಿ ಶಿಲ್ಪಾ ದಂಪತಿ ನಿರ್ಮಾಣದ ತುಳು ಸಿನಿಮಾ ಇದು. ಸಂದೀಪ ಬೆದ್ರೆ 'ಪಿಕ್ಚರ್' ಕಥೆಯನ್ನು ತೆರೆಗೆ ತರುತ್ತಿದ್ದಾರೆ. ನಿತ್ಯ ಪ್ರಕಾಶ್ ಹೀರೊ ಆಗಿ ನಟಿಸಿದ್ದಾರೆ. ಕೌಟುಂಬಿಕ ಕಥಾಹಂದರದ ಫನ್ ಎಂಟರ್‌ಟೈನರ್ ಸಿನಿಮಾ ಇದಾಗಿದ್ದು ಜುಲೈ 24ರಂದು ತೆರೆಗೆ ಬರಲಿದೆ. ಅಮೃತಾ ಸುದು ಚಿತ್ರದ ನಾಯಕಿ. ಇನ್ನುಳಿದಂತೆ ತುಳು ರಂಗಭೂಮಿ ಹಾಗೂ ಚಿತ್ರರಂಗದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ 'ಡೆಡ್ಲಿ ಕಿಲ್ಲರ್', 'ಲವ್ ಸೀಸನ್ಸ್', 'ನಾಗಬಂಧಂ' ಸೇರಿದಂತೆ ಹಲವು ಸಿನಿಮಾಗಳು ಜುಲೈನಲ್ಲಿ ತೆರೆಗೆ ಬರ್ತಿವೆ. ಜುಲೈ 24ರಂದು ಅಣ್ಣಾವ್ರ 'ನಾನೊಬ್ಬ ಕಳ್ಳ' ಸಿನಿಮಾ ರೀ-ರಿಲೀಸ್ ಆಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X