ಇನ್ಮುಂದೆ 6 ತಿಂಗಳಿಗೊಂದು ಸುದೀಪ್ ಸಿನಿಮಾ ರಿಲೀಸ್ ಆಗೋದು ಫಿಕ್ಸ್!

ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿದ್ದು ಆಗಿದೆ. ಸಿನಿಮಾ ರಿಲೀಸ್ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬಂದ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದೆ.

ಸಿನಿಮಾ ಮಂದಿರದ ಬಳಿಕ ಈಗ ಚಿತ್ರ ಟಿವಿ ಮತ್ತು ಓಟಿಟಿಯಲ್ಲಿ ರಾಜಾಜಿಸುತ್ತಿದೆ. ಈ ಚಿತ್ರದ ಬಳಿಕಾ ಸುದೀಪ್ ಮುಂದಿನ ಹೆಜ್ಜೆಯ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಈಗಾಗಲೇ ಸುದೀಪ್ ಮುಂದಿನ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಹುಟ್ಟುಹಬ್ಬದಂದು ನಟ ಸುದೀಪ್ ತಮ್ಮ ಮುಂದಿನ ಸಿನಿಮಾಗಳ ಮಾತನಾಡಿದ್ದು, ಯಾವ ರೀತಿಯಲ್ಲಿ ಅವರ ಸಿನಿಮಾಗಳು ಬರಲಿವೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಬಗ್ಗೆನೂ ಹಿಂಟ್ ಕೊಟ್ಟಿದ್ದಾರೆ ಸುದೀಪ್.

ಸುದೀಪ್ 6 ತಿಂಗಳಿಗೊಂದು ಸಿನಿಮಾ!

ಸುದೀಪ್ 6 ತಿಂಗಳಿಗೊಂದು ಸಿನಿಮಾ!

ನಟ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಹೆಚ್ಚು ತಡವಾಗಿ ತೆರೆಗೆ ಬಂತು. ಈ ಸಿನಿಮಾ ಮೊದಲು 'ಫ್ಯಾಂಟಂ' ಎನ್ನುವ ಟೈಟಲ್‌ನಲ್ಲಿ ಶುರುವಾಯ್ತು. ಬಳಿಕ ಸಿನಿಮಾ ಟೈಟಲ್ 'ವಿಕ್ರಾಂತ್ ರೋಣ' ಎಂದು ಬದಲಾಯಿತು. ಸುಮಾರು 4 ವರ್ಷಗಳಿಂದ ಈ ಚಿತ್ರ ನಡೆಯುತ್ತಲ್ಲೇ ಇತ್ತು. ಕೊರೊನಾದಿಂದಾಗಿ ಅಂತರ ಮತ್ತಷ್ಟು ಹೆಚ್ಚಾಯ್ತು. ಹಾಗಾಗಿ ಇನ್ನು ಮುಂದೆ ಸುದೀಪ್ ಸಿನಿಮಾಗಳು ತಡವಾಗುವುದಿಲ್ಲ. 6 ತಿಂಗಳಿಗೊಂದು ಸಿನಿಮಾ ಮಾಡುವುದಾಗಿ ನಟ ಸುದೀಪ್ ಹೇಳಿಕೊಂಡಿದ್ದಾರೆ.

'ಲಾವಾ' ಟೈಟಲ್‌ನಲ್ಲಿ ಸುದೀಪ್ ಸಿನಿಮಾ!

'ಲಾವಾ' ಟೈಟಲ್‌ನಲ್ಲಿ ಸುದೀಪ್ ಸಿನಿಮಾ!

ಇನ್ನು ನಟ ಕಿಚ್ಚ ಸುದೀಪ್ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ 'ಲಾವಾ' ಎನ್ನುವ ಸಿನಿಮಾ ಬರಲಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. 'ಲಾವಾ' ಎನ್ನುವ ಚಿತ್ರದಲ್ಲಿ ನಟ ಸುದೀಪ್ ನಟಿಸಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಈ ಟೈಟಲ್‌ನಲ್ಲಿ ನಿಮ್ಮ ಸಿನಿಮಾ ಬರಲಿದೆಯಾ ಎಂದು ಕೇಳಿದ ಪ್ರಶ್ನೆಗೆ, ಸುದೀಪ್ ಕಾದು ನೋಡಿ ಎಂದಷ್ಟೇ ಉತ್ತರ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಬರಬಹುದು ಎನ್ನುವ ಸೂಚನೆ ಸಿಕ್ಕಿದೆ.

'ಬಿಲ್ಲ ರಂಗಾ ಬಾಷಾ' ಮಾಡ್ತಾರಾ?

'ಬಿಲ್ಲ ರಂಗಾ ಬಾಷಾ' ಮಾಡ್ತಾರಾ?

ಸದ್ಯಕ್ಕೆ ನಟ ಸುದೀಪ್ ಕೈಯಲ್ಲಿರುವ ಸಿನಿಮಾ ಎಂದರೆ 'ಬಿಲ್ಲ ರಂಗ ಬಾಷಾ'. ಹಲವು ದಿನಗಳಿಂದ ಈ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಸುದೀಪ್ ಮತ್ತು ನಿರ್ದೇಶಕ ಅನುಪ್ ಭಂಡಾರಿ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ ಬಹುತೇಕ 'ಬಿಲ್ಲಾ ರಂಗ ಬಾಷಾ' ಸಿನಿಮಾವೇ ಸುದೀಪ್ ಮುಂದಿನ ಸಿನಿಮಾ ಎನ್ನಲಾಗುತ್ತಿದೆ. ಈ ಟೈಟಲ್ ಕೊಂಚ ವಿಭಿನ್ನ ಎನಿಸುವ ಕಾರಣ, ಸುದೀಪ್ ಈ ಚಿತ್ರದಲ್ಲಿ ವಿಭಿನ್ನವಾಗಿ ಬರಲಿದ್ದಾರೆ ಎನ್ನುವುದರ ಜೊತೆಗೆ ಕಥೆಯು ಬೇರೆ ರೀತಿ ಇರಲಿದೆ ಎನ್ನುವ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇದರ ಜೊತೆಗೆ ' ಅಶ್ವತ್ಥಾಮ' ಸಿನಿಮಾ ಕೂಡ ಸುದ್ದಿಯಲ್ಲಿ ಇದೆ.

ಸದ್ಯ ಬಿಗ್ ಬಾಸ್‌ನಲ್ಲಿ ಬ್ಯುಸಿ!

ಸದ್ಯ ಬಿಗ್ ಬಾಸ್‌ನಲ್ಲಿ ಬ್ಯುಸಿ!

ಆದರೆ ಸದ್ಯಕ್ಕಂತೂ ನಟ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ನೀಡಿಲ್ಲ. ಯಾಕೆಂದರೆ ಸುದೀಪ್ ಬಿಗ್ ಬಾಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಓಟಿಟಿಯಲ್ಲಿ ಬಿಗ್ ಬಾಸ್ ಮೊದಲ ಸೀಸನ್ ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಬಳಿಕ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ 9ನೇ ಸೀಸನ್ ನಲ್ಲಿಯೂ ಕೂಡ ನಟ ಸುದೀಪ್ ಭಾಗಿಯಾಗಲಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಬಿಗ್ ಬಾಸ್ ಸೀಸನ್ ಮುಗಿಯುವ ತನಕ, ಸುದೀಪ್ ಮುಂದಿನ ಸಿನಿಮಾದ ಅಪ್ಡೇಟ್ ಸಿಗುವುದು ಅನುಮಾನವೇ.

More from Filmibeat

English summary
From Now Onwords Sudeep Starerr movies Will be Release for Every 6 Months, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X