ಈ ವಾರ ಯಾವೆಲ್ಲಾ ಚಿತ್ರಗಳು ರಿಲೀಸ್ ಆಗ್ತಿವೆ? ಇಲ್ಲಿದೆ ಕಂಪ್ಲಿಟ್ ಲಿಸ್ಟ್
ದಸರಾ ಸಂಭ್ರಮ ಕಳೆದಿದೆ. ಆಯುಧ ಪೂಜೆ, ವಿಜಯದಶಮಿ ಸಂಭ್ರಮದಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಲ ಸಿನಿಮಾಗಳು ತೆರೆಗೆ ಬಂದಿತ್ತು. ಮುಖ್ಯವಾಗಿ ಕನ್ನಡದಲ್ಲಿ 'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಆರ್ಭಟವೂ ಜೋರಾಗಿದೆ.
ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ 'ಜಿಗ್ರಾ' ಸಿನಿಮಾ ತೆರೆಗೆ ಬಂದಿದೆ. ತೆಲುಗಿನಲ್ಲಿ 'ವಿಶ್ವಂ' ಎನ್ನುವ ಆಕ್ಷನ್ ಎಂಟರ್‌ಟೈನರ್ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಒಟ್ಟಾರೆ 'ವೆಟ್ಟೆಯಾನ್' ಸಿನಿಮಾ ದಸರಾ ವಿನ್ನರ್ ಎನಿಸಿಕೊಂಡಿದ್ದಾನೆ. ಮುಂದೆ ದೀಪಾವಳಿವರೆಗೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರುತ್ತಿಲ್ಲ.

ಒಂದಷ್ಟು ಹೊಸಬರ ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರಲಿವೆ. ಕೆಲ ಚಿತ್ರಗಳು ರೀ-ರಿಲೀಸ್ ಆಗಲು ಅಣಿಯಾಗುತ್ತಿವೆ. ಈ ವಾರ ಚಿತ್ರಮಂದಿರಗಳಲ್ಲಿ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗುತ್ತವೆ. ಮುಂದೆ ಓದಿ.
ಕನ್ನಡ
1. ಪೊರ್ಕಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ದಾಸನ ಕೆಲ ಚಿತ್ರಗಳು ರೀ-ರಿಲೀಸ್ ಆಗಿವೆ. 'ಶಾಸ್ತ್ರಿ' ಬಳಿಕ 'ಕರಿಯ' ಸಿನಿಮಾ ಮತ್ತೆ ತೆರೆಗೆ ಬಂದಿತ್ತು. ಮತ್ತಷ್ಟು ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಈ ವಾರ 'ಪೊರ್ಕಿ' ಸಿನಿಮಾ ಮರುಬಿಡುಗಡೆ ಆಗುತ್ತಿದೆ. ಎಂ. ಡಿ ಶ್ರೀಧರ್ ನಿರ್ದೇಶನ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ದರ್ಶನ್ ಜೊತೆ ಪ್ರಣೀತಾ ಮಿಂಚಿದ್ದಾರೆ. ತೆಲುಗಿನ 'ಪೋಕಿರಿ' ಚಿತ್ರದ ರೀಮೆಕ್ ಇದು.

2. ಮರ್ಫಿ
ಪ್ರಭು ಮುಂಡ್ಕೂರು ಮತ್ತು ರೋಶಿನಿ ಪ್ರಕಾಶ್ ನಟನೆಯ 'ಮರ್ಫಿ' ಸಿನಿಮಾ ಈ ವಾರ ತೆರೆಗೆ ಬರಲಿದೆ. ಬಿಎಸ್‌ಪಿ ವರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಚಿತ್ರಕ್ಕೆ ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಆದರ್ಶ ಆರ್ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ನೋಡುಗರ ಗಮನ ಸೆಳೆದಿದೆ.
3. ಸಿಂಹರೂಪಿಣಿ
ಖ್ಯಾತ ಗೀತರಚನೆಕಾರ ಕಿನ್ನಲ್ ರಾಜ್ ನಿರ್ದೇಶನದ ಭಕ್ತಿಪ್ರಧಾನ ಚಿತ್ರ ಸಿಂಹರೂಪಿಣಿ ಬಿಡುಗಡೆಗೆ ಸಜ್ಜಾಗಿದೆ. ಅಂಕಿತಾ ಗೌಡ, ಯಶ್ ಶೆಟ್ಟಿ, ದಿವ್ಯಾ ಆಲೂರು, ಹರೀಶ್ ರಾಯ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಆಕಾಶ್ ಪರ್ವ ಸಂಗೀತ, ಕಿರಣ್ ಛಾಯಾಗ್ರಹಣ ಚಿತ್ರಕ್ಕಿದೆ.
4. ಮಾಂತ್ರಿಕ
ವ್ಯಾನವರ್ಣ ಜಮ್ಮುಲ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಮಾಂತ್ರಿಕ' ಚಿತ್ರ ಕೂಡ ಈ ವಾರ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದೆ. ಟೈಮ್ ಟ್ರಾವೆಲ್ ಸಂಗತಿ ಕೂಡ ಈ ಚಿತ್ರದಲ್ಲಿದೆ. ರಾಧಿಕಾ ಮಾಲಿ ಪಾಟೀಲ ಮತ್ತು ಮೈಥಿಲಿ ನಾಯಕ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.
ತೆಲುಗಿನಲ್ಲಿ ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ತಮಿಳಿನಲ್ಲಿ 'ಸರ್', 'ಆಳನ್' ಹಾಗೂ 'ರಾಕೆಟ್ ಡ್ರೈವರ್' ಎನ್ನುವ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಬಾಲಿವುಡ್‌ನಲ್ಲಿ 'ಆಯುಷ್ಮತಿ ಗೀತಾ ಮೆಟ್ರಿಕ್ ಪಾಸ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮಲಯಾಳಂನಲ್ಲಿ 'ಬೌಗೆನ್ವಿಲ್ಲಾ' ಹಾಗೂ 'ಪೊರಟ್ಟು ನಾಡಕಂ' ಎನ್ನುವ ಸಿನಿಮಾಗಳು ಲಿಸ್ಟ್‌ನಲ್ಲಿವೆ.
ಹಾಲಿವುಡ್‌ನಲ್ಲಿ 'ದಿ ವೈಲ್ಡ್ ರೋಬೋಟ್' ಸಿನಿಮಾ ಬಿಡುಗಡೆ ಆಗಲಿದೆ. ಒಟ್ಟಾರೆ ಯಾವುದೇ ದೊಡ್ಡ ಚಿತ್ರಗಳಿಲ್ಲದೇ ಕಳೆದ ವಾರ ತೆರೆಗೆ ಬಂದಿರುವ ಸಿನಿಮಾಗಳೇ ಇನ್ನೆರಡು ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಲಿವೆ. 'ದೀಪಾವಳಿ' ಸಂಭ್ರಮಕ್ಕೆ ಕನ್ನಡದಲ್ಲಿ 'ಬಘೀರ' ಸೇರಿದಂತೆ ಹಲವು ಚಿತ್ರಗಳು ರಿಲೀಸ್ ಆಗಲಿವೆ.


Click it and Unblock the Notifications











