ಕನಕಪುರ ಶ್ರೀನಿವಾಸ್ ವಿರುದ್ಧ ಕೆರಳಿ ಕೆಂಡವಾದ ಜೋಗಿ ಪ್ರೇಮ್ - ದೂರು ದಾಖಲು
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.
ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕೆ ಕನಕಪುರ ಶ್ರೀನಿವಾಸ್ ಮೊನ್ನೆ ಮೊನ್ನೆ ಮಾತನಾಡಿದ ಮಾತುಗಳೇ ಉದಾಹರಣೆ.

ಹೌದು. ಹೇಳಿಕೊಳ್ಳಲು ಕನ್ನಡ ಚಿತ್ರರಂಗದ ನಿರ್ಮಾಪಕನಾಗಿರುವ ಕನಕಪುರ ಶ್ರೀನಿವಾಸ್ ಮೊನ್ನೆ ಇರೋ ಬರೋ ಅವಾಚ್ಯ ಶಬ್ದಗಳನ್ನೆಲ್ಲಾ ಪಟಪಟಾಂತ ಉದುರಿಸುತ್ತಾ, ಥೇಟು ಗಲ್ಲಿ ರೌಡಿಯಂತೆ ಮಾತನಾಡಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಬಿಡದೇ ಥರ್ಡ್ ಗ್ರೇಡ್ ಭಾಷೆಯನ್ನು ಉಪಯೋಗಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತು ಕೂಡ ನಾಲಿಗೆ ಹರಿಬಿಟ್ಟಿದ್ದರು.
ಇಷ್ಟೇ ಅಲ್ಲ ಎ.ಪಿ.ಅರ್ಜುನ್ ಮತ್ತು ಜೋಗಿ ಪ್ರೇಮ್ ಅವರನ್ನು ಕೂಡ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಪ್ರೇಮ್ ಗಂಡಸಾದ್ರೆ, ಡೈರೆಕ್ಟರ್ ಆದ್ರೆ ನನ್ನ ಮುಂದೆ ನಿಂತುಕೊಳ್ಳೋಕೆ ಹೇಳಿ. ಅವನಪ್ಪನಿಗೇ ಹುಟ್ಟಿದ್ರೆ ಬರೋಕೆ ಹೇಳಿ. ಇಲ್ಲ ಧಮ್ ಇದ್ರೆ ಅವನೇ ಎಲ್ಲಿದ್ದಾನೋ ನಾನೇ ಅಲ್ಲಿಗೆ ಹೋಗ್ತೀನಿ" ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ, "ಕರಿಯ, ಜೋಗಿ, ಎಕ್ಸ್‌ಕ್ಯೂಸ್‌ಮಿ ಸಿನಿಮಾಗಳನ್ನು ಮಾಡಿ ಹಲವರನ್ನು ಮನೆಗೆ ಕಳಿಸಿದ್ದಾರೆ ಎಂದೆಲ್ಲಾ ಬಡಬಡಿಸಿದ್ದರು.
ಇಂಥಾ ಕನಕಪುರ ಶ್ರೀನಿವಾಸ್ ಅವರ ವಿರುದ್ಧ ಸದ್ಯ ಜೋಗಿ ಪ್ರೇಮ್ ಸಿಡಿದೆದ್ದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷೆ ಜಯಮಾಲಾ ಅವರನ್ನು ಇಂದು (ಫೆಬ್ರವರಿ 7 ) ಫಿಲ್ಮ್ ಚೇಂಬರ್ ನಲ್ಲಿ ಭೇಟಿಯಾದ ಪ್ರೇಮ್, ಕನಕಪುರ ಶ್ರೀನಿವಾಸ್ ತುಂಬಾನೇ ಕೀಳಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಅವರು ಅಮ್ಮನಿಗೆ ಹುಟ್ಟಿಲ್ವಾ..? ಅವರು ಅಪ್ಪನಿಗೆ ಹುಟ್ಟಿಲ್ವಾ..? ಎಂದು ಬೇಸರದಿಂದಲೇ ಪ್ರಶ್ನೆಯನ್ನು ಕೇಳಿರುವ ಜೋಗಿ ಪ್ರೇಮ್ ಮನಸಿಗೆ ತುಂಬಾನೇ ನೋವಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ಸಲ್ಲಿಸಿದ್ದೇನೆ, ಎನ್ ಸಿ ಆರ್ ಕೂಡ ದಾಖಲಾಗಿದೆ ಎಂದು ಹೇಳಿರುವ ಜೋಗಿ ಪ್ರೇಮ್, ಡಾ.ರಾಜ್ ಕುಮಾರ್ ಅವರ ಕಾಲದಿಂದ ಹಿಡಿದು ಇಲ್ಲಿಯವರೆಗೆ ಎಲ್ಲರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ, ಇಲ್ಲಿ ನಾನು ನನಗೋಸ್ಕರ ಬಂದಿಲ್ಲ, ಎಲ್ಲರ ಪರವಾಗಿ ಬಂದಿದ್ದೇನೆ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಂದುವರೆದು ಅಪ್ಪು ಅವರ ಬಗ್ಗೆ ಮಾತಾಡಿದಾರೆ, ಅಪ್ಪು ಅವರು ಅವರಿಗೇನು ಮಾಡಿದ್ದರು ? ಎಂದು ಪ್ರಶ್ನೆ ಮಾಡಿರುವ ಜೋಗಿ ಪ್ರೇಮ್ ಅಲ್ಲಿ ದರ್ಶನ್ ಪಾಪಾ ಒಳಗಡೆ ಇದಾರೆ, ಅವರ ಕಷ್ಟ ಅವರಿಗೆ ಗೊತ್ತಿರುತ್ತೆ, ಈ ಸಮಯದಲ್ಲಿ ಹೀಗೆ ಮಾತನಾಡುವುದು ಸರೀನಾ ಎಂದು ಕೇಳಿದ್ದಾರೆ. ಇದ್ದಾಗ ಮಾತನಾಡಬೇಕು ಇಲ್ಲದಿದ್ದಾಗ ಈ ತರಹದ ಮಾತುಗಳನ್ನಾಡಬಾರದು ಎಂದಿದ್ದಾರೆ.
ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಎಜುಕೇಶನ್ ಇಲ್ಲದೆ ಇರುವ ಹಾಗೇ ಮಾತನಾಡಿದ್ದಾರೆ ಎಂದು ಕೆಂಡ ಕಾರಿರುವ ಪ್ರೇಮ್, ಅವ್ರು ಮಾತನಾಡಿದ ಹಾಗೆ ನಮಗೂ ಮಾತನಾಡಲು ಬರುತ್ತದೆ. ಆದರೆ ನಾನು ಅವರಷ್ಟು ಕೀಳುಮಟ್ಟಕ್ಕೆ ಇಳಿಯಲ್ಲ ಎಂದಿದ್ದಾರೆ.
ಮಾನಹಾನಿ ಮೊಕದ್ದಮೆಯನ್ನು ಕೂಡ ಅವರ ಮೇಲೆ ನಾನು ಹೂಡುತ್ತೇನೆ ಎಂದು ಹೇಳಿರುವ ಪ್ರೇಮ್, ಎಷ್ಟು ಕೋಟಿ ಅಂತಾ ನಮ್ಮ ವಕೀಲರು ಹೇಳ್ತಾರೆ ಎಂದು ಹೇಳಿದ್ದಾರೆ. ವ್ಯೆಯಕ್ತಿಕವಾಗಿ ನಾನು ಹೋರಾಟ ಮಾಡುತ್ತೇನೆ, ಆದರೆ ಉಳಿದವರ ಬಗ್ಗೆಯೂ ಅವರು ಮಾತನಾಡಿದ್ದಾರೆ, ಅವರ ಪರವಾಗಿ ನೀವು ಕನಕಪುರ ಶ್ರೀನಿವಾಸ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರೇಮ್ ನೀಡಿದ ದೂರಿನಲ್ಲೇನಿದೆ..?
ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್. ಆರ್. 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತ ಕೆಲಸ ಮಾಡುತ್ತಾ ಬಂದಿರುತ್ತೇನೆ.
2004ರಲ್ಲಿ 9 ಲಕ್ಷ ನೀಡಿದ್ದರು
2004ರಲ್ಲಿ ಕೆ.ಪಿ.ಶ್ರೀಕಾಂತ್ ಅವರ ಮೂಲಕ ನಿರ್ಮಾಪಕ ಆರ್.ಎಸ್ ಶ್ರೀನಿವಾಸ್‌ರವರು ನನ್ನ ಬಳಿ ಚಿತ್ರ ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು. ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಆ ನಂತರ ನಾನು ಸಿನಿಮಾ ಮಾಡಲು ನನ್ನ ತಂಡದ ಜೊತೆ ಒಂದು ಆಫೀಸ್ ಮಾಡಿ ಒಂದು ಚಿತ್ರಕಥೆ ಬರೆಯಲು ಪ್ರಾರಂಭ ಮಾಡಿದೆ. ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ನಾನು ಸಂಪರ್ಕಿಸಿದೆ. ಆದರೆ ಅವರಿಮದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗಲಿಲ್ಲ.ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯ ವ್ಯರ್ಥ ಮಾಡಿದ್ದಲ್ಲದೇ, ನನ್ನ ಆಫೀಸ್‌ನ ವೆಚ್ಚಕ್ಕಾಗಾಲಿ, ನನ್ನ ಸಹ ನಿರ್ದೇಶಕರ ತಂಡಕ್ಕಾಗಲಿ ಯಾವುದೇ ರೀತಿಯ ಹಣ ಕಾಸನ್ನು ಅವರು ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್‌ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೆ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಆಗಿದೆ.
ಹಲವಾರು ಅವಕಾಶ ಕೈಬಿಟ್ಟೆ
ಈ ಸಮಯದಲ್ಲಿ ಹಲವು ನಿರ್ಮಾಪಕರು ಚಿತ್ರ ನಿರ್ದೇಶನ ಮಾಡಿಕೊಡುವಂತೆ ನನ್ನನ್ನೂ ಕೇಳಿಕೊಂಡಿದ್ದರು. ನಟಿಸುವ ಅವಕಾಶಗಳು ಕೂಡ ಬಂದಿದ್ದವು. ಆದರೆ ನಾನು ಇವರ ಚಿತ್ರ ನಿರ್ದೇಶನ ಮಾಡಬೇಕಿದ್ದ ಹಿನ್ನೆಲೆ ಬಂದ ಎಲ್ಲ ಅವಕಾಶಗಳನ್ನು ಕಳೆದುಕೊಂಡೆ. ಕೋಟಿಗಟ್ಟಲೆ ನಷ್ಟ ಅನುಭವಿಸಿದೆ.
ನಷ್ಟ ಆದರೂ 5ಲಕ್ಷ ಹಣ ಮರುಪಾವತಿ
ಇದಾದ ಸುಮಾರು ವರ್ಷಗಳ ನಂತರ ನಿರ್ಮಾಪಕ ಆರ್.ಎಸ್ ಶ್ರೀನಿವಾಸ್ ರವರು ನನ್ನನ್ನು ಸಂಪರ್ಕಿಸಿ ನನಗೆ ಹಣದ ಅವಶ್ಯಕತೆ ಇದೆ ಎಂದು ನೀಡಿದ ಮುಂಗಡ ಹಣವನ್ನು ವಾಪಸ್ ಕೇಳಿದ್ದರು. ನಾನು ಆ ಸಂದರ್ಭದಲ್ಲಿ ಅವರಿಗೆ ಈ ಮೇಲ್ಕಂಡ ವಿಷಯವನ್ನು ತಿಳಿಸಿ ನೀವು ಕೊಟ್ಟಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಚಿತ್ರಕಥೆಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳಿದೆ. ಆಗ ಆರ್ ಎಸ್ ಶ್ರೀನಿವಾಸ್ ಅವರು ತುಂಬ ಕಷ್ಟದಲ್ಲಿರುವೆ ಎಂದು ಹೇಳಿದಾಗ ನಿರ್ಮಾಪಕನ ಕಷ್ಟವನ್ನು ಅರಿತು ನನ್ನ ಸ್ವಂತ ಹಣದಿಂದ 5 ಲಕ್ಷ ಹಣವನ್ನು 2.5 ಲಕ್ಷಗಳನ್ನು ಚೆಕ್ ಮೂಲಕ ಹಾಗೂ 2.5 ಲಕ್ಷಗಳನ್ನು ನಗದು ರೂಪದಲ್ಲಿ ನಿರ್ಮಾಪಕರಾದ ಸಾ.ರ. ಗೋವಿಂದ್ ರವರ ಮದ್ಯಸ್ತಿಕೆಯಲ್ಲಿ ನೀಡಿದ್ದೇನೆ. ಆಗ ಅವರು ಹಣವನ್ನು ಸ್ವೀಕರಿಸಿ ಧನ್ಯವಾದ ತಿಳಿಸಿದ್ದರು.


Click it and Unblock the Notifications











