ಒಂದಲ್ಲ ಎರಡಲ್ಲ 6 ಸಿನಿಮಾಗಳು; 2025 ಪ್ರಜ್ವಲ್‌ಮಯ

ಒಂದು ಸಿನಿಮಾ ಶುರುವಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದು ಅಷ್ಟು ಸುಲಭವಲ್ಲ. ಹಾಗಾಗಿ ಪದೇ ಪದೆ ಸಿನಿಮಾಗಳು ರಿಲೀಸ್ ಡೇಟ್ ಮುಂದೂಡುವಂತಾಗುತ್ತದೆ. ಕಾರಣಾಂತರಗಳಿಂದ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವುದು ತಡವಾಗುತ್ತದೆ. ಕಳೆದ ವರ್ಷ ಪ್ರಜ್ವಲ್ ದೇವರಾಜ್ ನಟಿಸಿದ 2 ಸಿನಿಮಾ ತೆರೆಗೆ ಬಂದಿತ್ತು. ಈ ವರ್ಷ 6 ಸಿನಿಮಾಗಳು ಸಿದ್ಧವಾಗಿವೆ.

ತಂದೆ ಡೈನಾಮಿಕ್ ಸ್ಟಾರ್ ದೇವರಾಜ್ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪ್ರಜ್ವಲ್ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅದನ್ನೆಲ್ಲಾ ಮೀರಿ ಒಳ್ಳೆ ಸಿನಿಮಾ ಕೊಡಬೇಕು ಎನ್ನುವ ತಪಸ್ಸು ಮುಂದುವರೆಸಿದ್ದಾರೆ. ಈ ವರ್ಷ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

From Rakshasa to Karavali Prajwal Devaraj s six movies are set to release in 2025

1. ಕರಾವಳಿ

ಗುರುದರ್‌ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಪೋಸ್ಟರ್, ಟೀಸರ್‌ಗಳು ಬಿಡುಗಡೆಯಾಗಿ ಗಮನ ಸೆಳೆದಿದೆ. ಕಂಬಳ ಓಟದ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದೆ. ಹೊಸ ವರ್ಷದ ಸಂಭ್ರಮಲ್ಲಿ ಪಶಾಚಿ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಮಾರ್ಚ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

2. ಗಣ

ತೆಲುಗಿನ ಹರಿ ಪ್ರಸಾದ್ ಜಕ್ಕ ನಿರ್ದೇಶನದ 'ಗಣ' ಚಿತ್ರದಲ್ಲಿ ಕೂಡ ಪ್ರಜ್ವಲ್ ನಟಿಸಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. 'ಮೈ ನೇಮ್ ಈಸ್ ಸೋನಾ ಬೇಬಿ, ಕಣ್ಣಾಮುಚ್ಚಾಲೆ ನನ್ನ ಹಾಬಿ' ಎಂಬ ಸ್ಪೆಷಲ್ ಸಾಂಗ್ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು.

3. ಜಾತರ

ಉದಯ ನಂದನವನಂ ನಿರ್ದೇಶನದ 'ಜಾತರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಕಬ್ಬಡಿ ಆಟಗಾರನ ಅವತಾರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದ ಪೋಸ್ಟರ್‌ವೊಂದರು ಹಿಂದೆ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಬಹಳ ವಿಭಿನ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ಎಲ್ಲಾ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿದೆ.

From Rakshasa to Karavali Prajwal Devaraj s six movies are set to release in 2025

4. ಮಾಫಿಯಾ

ಬಹಳ ಹಿಂದೆ ಶುರುವಾಗಿದ್ದ 'ಮಾಫಿಯಾ' ಸಿನಿಮಾ ಕೂಡ ಈ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಕುಮಾರ್ ಬಿ ಹಣ ಹೂಡಿದ್ದಾರೆ. ಅದಿತಿ ಪ್ರಭುದೇವ, ದೇವರಾಜ್ , ಸಾಧು ಕೋಕಿಲ, ಶೈನ್ ಶೆಟ್ಟಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ.

5. ಚೀತಾ

ರಾಜಕಲೈ ನಿರ್ದೇಶನದಲ್ಲಿ 'ಚೀತಾ' ಎಂಬ ಮತ್ತೊಂದು ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ನಟಿಸುತ್ತಿದ್ದಾರೆ. ಒಂದು ಮಾರ್ಕೆಟ್ ಪ್ರದೇಶದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶ್ರುತಿ ಹರಿಹರನ್, ಗುರುರಾಜ್ ಜಗ್ಗೇಶ್, ಶಿವರಾಜ್ ಕೆ. ಆರ್ ಪೇಟೆ ತಾರಾಗಣದಲ್ಲಿದ್ದಾರೆ. ನಾಯಕ ಚಿರತೆಯಷ್ಟು ವೇಗ ಇರುವವನು, ಹಾಗಾಗಿ ಈ ಟೈಟಲ್ ಎಂದು ಚಿತ್ರತಂಡ ಹೇಳಿಕೊಂಡಿತ್ತು.

6. ರಾಕ್ಷಸ

ಹೊಸ ವರ್ಷದ ಸಂಭ್ರಮದಲ್ಲಿ ಪ್ರಜ್ವಲ್ ನಟನೆಯ 'ರಾಕ್ಷಸ' ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. ಲೋಹಿತ್ ಹೆಚ್ ನಿರ್ದೇಶನದ ಹಾರರ್ ಥ್ರಿಲ್ಲರ್ ಕಥಾಹಂದರದ ಸಿನಿಮಾ ಇದು. ದೀಪು ಬಿ.ಎಸ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಟೀಸರ್ ಗಮನ ಸೆಳೆಯುತ್ತಿದ್ದು ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಶಿವರಾತ್ರಿ ಸಂಭ್ರಮದಲ್ಲಿ 5 ಭಾಷೆಗಳಲ್ಲಿದೆ 'ರಾಕ್ಷಸ'ನ ಆರ್ಭಟ ಶುರುವಾಗಲಿದೆ.

More from Filmibeat

English summary
Prajwal Devaraj's six upcoming movies, from Rakshasa to Karavali, are slated for release in 2025;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X