''ಫ್ರೆಂಡ್‌ಶಿಪ್ ಅಂದ್ರೆ ಡಿ ಬಾಸ್" ಎಂದಿದ್ದ ಆಶಿಕಾ ರಂಗನಾಥ್ ಕಾಡೊಳಗೆ ಕ್ಯಾಮರಾ ಹಿಡಿದಾಗ ಏನಾಯ್ತು..?

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅಪಾರವಾದ ಪ್ರಾಣಿ ಪ್ರಿಯರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಬಗ್ಗೆ ಅವರ ಅಭಿಮಾನಿಗಳಿಗೆ ಇಂಚಿಂಚಾಗಿ ಗೊತ್ತಿದೆ. ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ನಾಗರಹೊಳೆ ಅಭಯಾರಣ್ಯ, ಬಂಡಿಪುರ, ಇಷ್ಟೇ ಯಾಕೆ ಕೀನ್ಯಾ ಕಾಡೊಳಗೆ ಕೂಡ ಕ್ಯಾಮರಾ ಹಿಡಿದುಕೊಂಡು ಓಡಾಡಿದವರು ದರ್ಶನ್.

ಪ್ರಾಣಿಗಳ ಮೇಲೆ ಅತೀವವಾದ ಪ್ರೀತಿ ಹೊಂದಿರುವ ದರ್ಶನ್ ಅವರಿಗೆ ಅವುಗಳ ಆವಾಸ ಸ್ಥಾನವಾದ ಕಾಡುಗಳೆಂದರೂ ಇಷ್ಟ. ಆಗಾಗ ದಟ್ಟಾರಣ್ಯದಲ್ಲಿ ಸಫಾರಿ ಮಾಡುತ್ತಾ ಅಪರೂಪದ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳುವುದು ಅವರ ಹವ್ಯಾಸಗಳಲ್ಲೊಂದು. ತಮ್ಮ ಫಾರ್ಮ್ ಹೌಸಿನಲ್ಲಿ ಪ್ರಾಣಿಗಳನ್ನು ಸಾಕಿಕೊಂಡು, ಮೈಸೂರು ಮೃಗಾಲಯದಲ್ಲಿರುವ ಕೆಲವು ಪ್ರಾಣಿಗಳನ್ನು ದತ್ತು ಪಡೆದು ಪೊರೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ಪ್ರಾಣಿ ಮತ್ತು ಪರಿಸರ ಪ್ರೇಮವನ್ನು ಸಿನಿಮಾದಷ್ಟೇ ತೀವ್ರವಾಗಿ ಹಚ್ಚಿಕೊಂಡಿದ್ದಾರೆ.

From safari rides to spotting wild animals Actress Ashika Rangnath Enjoys Her Weekend In Kabini

ಇಂಥಾ ದರ್ಶನ್ ಅವರ ಈ ಪ್ರಾಣಿ ಪ್ರೀತಿಯನ್ನು ಕನ್ನಡ ಚಿತ್ರರಂಗದ ಅನೇಕರು ಹಿಂದೆ ಮೆಚ್ಚಿಕೊಂಡಿದ್ದಾರೆ. ದರ್ಶನ್ ಅವರಿಂದ ಪ್ರೇರಣೆಗೊಂಡು ಪ್ರಾಣಿಗಳನ್ನು ದತ್ತು ಪಡೆಯುವುದಲ್ಲದೇ ದರ್ಶನ್ ಅವರಂತೆಯೇ ಕೊಂಚ ಬಿಡುವು ಸಿಕ್ಕರೂ ಸೀದಾ ಕಾಡಿನತ್ತ ಹೋಗಿ ಸಫಾರಿ ನಡೆಸುತ್ತಾರೆ. ಕನ್ನಡದ ಹಾಲುಬಣ್ಣದ ಸುಂದರಿ ಆಶಿಕಾ ರಂಗನಾಥ್ ಕೂಡ ದರ್ಶನ್ ಅವರಿಂದನೇ ಪ್ರೇರೆಪಿತರಾದವರಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಆಶಿಕಾ ಕಾಡು-ಮೇಡು ಸುತ್ತಾಡಿದ್ದಾರೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪ್ರಾಣಿಗಳ ಫೋಟೋಗಳನ್ನೂ ಕ್ಲಿಕಿಸಿ ಸಂಭ್ರಮಿಸಿದ್ದಾರೆ.

ಹೌದು.. ಕ್ರೇಜಿಬಾಯ್ ಅನ್ನೋ ಹೊಸಬರ ಸಿನಿಮಾದಿಂದ ಆರಂಭಿಸಿ, ನಂತರ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ-2, ಗರುಡ, ತಾಯಿಗೆ ತಕ್ಕ ಮಗ, ಅವತಾರ ಪುರುಷ ಭಾಗ 1 ಮತ್ತು ಭಾಗ 2, ಮದಗಜ, ರೆಮೋ, ಹೀಗೆ ಹೊಸಬರ ಮತ್ತು ಹಳಬರ ಚಿತ್ರಗಳಲ್ಲಿ ಅವಕಾಶ ಪಡೆಯುತ್ತಲೇ, ಕನ್ನಡದ ಬೇಡಿಕೆಯ ನಾಯಕಿಯಾಗಿ ಹೊರ ಹೊಮ್ಮಿ ಸದ್ಯಕ್ಕೆ ಅಕ್ಕ-ಪಕ್ಕದ ರಾಜ್ಯದಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಆಶಿಕಾ ರಂಗನಾಥ್, ಸದ್ಯಕ್ಕೆ... ಕಬಿನಿ ಫಾರೆಸ್ಟ್‌ನಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ಸುತ್ತಾಡಿದ್ದಾರೆ.

from-safari-rides-to-spotting-wild-animals-actress-ashika-rangnath-enjoys-her-weekend-in-kabini

ಮೂರು ದಿನ ಕಬಿನಿ ಹಿನ್ನಿರಿನ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಆಶಿಕಾ ರಂಗನಾಥ್, ಅಲ್ಲಿರುವ ಕಾಡು ಕೋಣ, ಕೃಷ್ಣ ಮೃಗ, ಕಪ್ಪು ಮಂಗ, ಆನೆ , ಜಿಂಕೆ, ಹೀಗೆ ಎಲ್ಲ ಪ್ರಾಣಿಗಳನ್ನೂ ಕಣ್ತುಂಬಿಕೊಂಡಿದ್ದಾರೆ. ಕಣ್ಣರಳಿಸಿದ್ದಾರೆ.

ಆದರೆ ಇದೇ ಸಮಯದಲ್ಲಿ ಹುಲಿ ಕಾಣಿಸದ್ದಕ್ಕೆ ಬೇಸರವನ್ನೂ ಮಾಡಿಕೊಂಡಿದ್ದಾರೆ. ಆಶಿಕಾ ಅದೃಷ್ಟ ಬೆಂಗಳೂರಿನತ್ತ ಹೊರಡುವ ಮುನ್ನ ಕೆಲವು ಘಂಟೆ ಇರುವಾಗ ಆಶಿಕಾ ಅವರಿಗೆ 'ಹುಲಿ'ರಾಯನ ದರ್ಶನವಾಗಿದೆ. ಈ ಸಂದರ್ಭದಲ್ಲಿ ಆಶಿಕಾ ಮೊಗದಲ್ಲಿ ಅರಳಿದ ಖುಷಿಯನ್ನು ವಿಡಿಯೋದಲ್ಲಿಯೇ ನೋಡಿದರೆನೇ ಚೆಂದ.

from-safari-rides-to-spotting-wild-animals-actress-ashika-rangnath-enjoys-her-weekend-in-kabini

ಸದ್ಯ ಆಶಿಕಾ ರಂಗನಾಥ್ ಅವರ ಈ ವೈಲ್ಡ್ ಲೈಫ್‌ ಅಡ್ವೆಂಚರ್ಸ್ ಗೆ ಇವರ ಅಭಿಮಾನಿಗಳು ಉಘೇ ಉಘೇ ಅನ್ನುತ್ತಿದ್ದಾರೆ. ಆಶಿಕಾ ಅವರ ಸಂಭ್ರಮ-ಸಂತಸ ಕಂಡು ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಕೇವಲ ಒಂದು ದಿನದಲ್ಲಿ 50.000 ಕ್ಕೂ ಹೆಚ್ಚಿನ ವೀಕ್ಷಣೆಯನ್ನೂ ಕಂಡಿದೆ ಆಶಿಕಾ ರಂಗನಾಥ್ ಅವರ ಈ ವೈಲ್ಡ್ ಲೈಫ್ ಅಡ್ವೆಂಚರ್ ವಿಡಿಯೋ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X