ಈ ವಾರ ತೆರೆಗಪ್ಪಳಿಸುತ್ತಿರುವ ಚಿತ್ರಗಳ ಪಟ್ಟಿ; ಕನ್ನಡದ 3 ಇಂಟ್ರೆಸ್ಟಿಂಗ್ ಚಿತ್ರಗಳು ರಿಲೀಸ್

ಐಪಿಎಲ್ ಕಾರುಬಾರು ಜೋರಾಗಿದ್ದರೂ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಕನ್ನಡದಲ್ಲಿ ಕೂಡ 3 ವಿಭಿನ್ನ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ. ಸಾಮಾನ್ಯವಾಗಿ ಐಪಿಎಲ್ ಟೂರ್ನಿ ನಡುವೆ ದೊಡ್ಡ ಸಿನಿಮಾಗಳು ತೆರೆಗೆ ಬರಲ್ಲ. ಕೆಲವೊಮ್ಮೆ ಧೈರ್ಯ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತದೆ.

ವಿದ್ಯಾಪತಿ

ಡಾಲಿ ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ನಾಗಭೂಷಣ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಕಿರುತೆರೆ ನಟಿ ಮಲೈಕಾ ವಸುಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನು 'ಕೆಜಿಎಫ್' ಖ್ಯಾತಿಯ ಗರುಡರಾಮ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಸಹ ಬಣ್ಣ ಹಚ್ಚಿದ್ದಾರೆ. ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು(ಏಪ್ರಿಲ್ 9) ಸಂಜೆಯಿಂದಲೇ ಪ್ರೀಮಿಯರ್ ಶೋಗಳು ಶುರುವಾಗ್ತಿದೆ.

From Vaamana to Bazooka This Week theatrical release movies list

ಅಜ್ಞಾತವಾಸಿ

ಹೇಮಂತ್ ರಾವ್ ನಿರ್ಮಾಣದ 'ಅಜ್ಞಾತವಾಸಿ' ಚಿತ್ರಕ್ಕೆ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ಕ್ರೈಂ ಥ್ರಿಲ್ಲರ್ ಸಿನಿಮಾ ಕೂಡ ಈ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದೆ. 90ರ ದಶಕದಲ್ಲಿ ಮಲೆನಾಡಿನ ಭಾಗದಲ್ಲಿ ನಡೆದ ಒಂದು ಕೊಲೆ ಪ್ರಕರಣದ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ರಂಗಾಯಣ ರಘು, ಪಾವನ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ ಹಾಗೂ ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಅದ್ವೈತ್ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಟ್ರೈಲರ್ ಸೂಪರ್ ಹಿಟ್ ಆಗಿ ನಿರೀಕ್ಷೆ ಹುಟ್ಟಾಕ್ಕಿದೆ.

ವಾಮನ

ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ. ಶಂಕರ್ ರಾಮನ್ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ಸೇರಿ ದೊಡ್ಡ ತಾರಾಗಣ ಚಿತ್ರಕ್ಕಿದೆ. ಆಕ್ಷನ್ ಜೊತೆಗೆ ಮದರ್ ಸೆಂಟಿಮೆಂಟ್ ಹಾಗೂ ರೊಮ್ಯಾನ್ಸ್ ಚಿತ್ರದಲ್ಲಿದೆ.

ಗುಡ್‌ ಬ್ಯಾಡ್ ಅಗ್ಲಿ

ಅಜಿತ್ ನಟನೆಯ ತಮಿಳಿನ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ಈ ವಾರ ರಿಲೀಸ್ ಆಗ್ತಿದೆ. ಅದಿಕ್ ರವಿಚಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಅಜಿತ್ ಅಬ್ಬರಿಸಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಆದರೆ ತಕ್ಕಮಟ್ಟಿಗೆ ಬುಕ್ಕಿಂಗ್ ಕಂಡುಬಂದಿಲ್ಲ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪ್ರಭು, ಅರ್ಜುನ್ ದಾಸ್, ಪ್ರಸನ್ನ ತಾರಾಗಣದಲ್ಲಿದ್ದಾರೆ.

From Vaamana to Bazooka This Week theatrical release movies list

ಜಾಕ್

ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನದ ತೆಲುಗಿನ 'ಜಾಕ್' ಸಿನಿಮಾ ಕುತೂಹಲ ಮೂಡಿಸಿದೆ. ಸಿದ್ದು ಜೊನ್ನಲಗಡ್ಡ, ವೈಷ್ಣವಿ ಚೈತನ್ಯಾ, ಪ್ರಕಾಶ್ ರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ನೇಪಾಳದಲ್ಲಿ ಕೂಡ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಈ ವಾರ ಸಿನಿಮಾ ತೆರೆಗೆ ಬರಲಿದೆ.

ಜಾಟ್

ಸನ್ನಿ ಡಿಯೋಲ್ ಹಾಗೂ ರೆಗಿನಾ ಕಸೆಂದ್ರ ನಟನೆಯ ಬಾಲಿವುಡ್ ಸಿನಿಮಾ 'ಜಾಟ್' ಶುಕ್ರವಾರವೇ ಬಿಡುಗಡೆ ಆಗ್ತಿದೆ. ಗೋಪಿಚಂದ್ ಮಲಿನೇನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಎಸ್. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಬಾಜೂಕಾ

ಮಮ್ಮುಟಿ ನಟನೆಯ ಮಲಯಾಳಂ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಬಾಜೂಕಾ'. ಡೀನೊ ಡೆನ್ನಿಸ್ ಚಿತ್ರದ ಸಾರಥ್ಯ ವಹಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್ ಚಿತ್ರದ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಉದ್ಯಮಿ ಸೇರಿ ಸೀರಿಯಲ್ ಕಿಲ್ಲರ್ ಒಬ್ಬನನ್ನು ಹಿಡಿಯುವ ಕಥೆ ಚಿತ್ರದಲ್ಲಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Interesting Movies ready to Release in Theaters this week;
Read more about: sandalwood tollywood bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X