ಐಪಿಎಲ್‌ಗೆ ಸ್ಯಾಂಡಲ್‌ವುಡ್ ಸೆಡ್ಡು; ಏಪ್ರಿಲ್‌ನಲ್ಲಿ ರಿಲೀಸ್ ಆಗ್ತಿರೋ ಚಿತ್ರಗಳ ಪಟ್ಟಿ ಇಲ್ಲಿದೆ
ಪ್ರತಿವರ್ಷ ಐಪಿಎಲ್ ಭರಾಟೆಯಲ್ಲಿ ಚಿತ್ರರಂಗ ಮಂಕಾಗಿಬಿಡುತ್ತದೆ. ದೊಡ್ಡ ಸಿನಿಮಾಗಳು ಬಿಡುಗಡೆ ಹಿಂಜರಿಯುವಂತಾಗುತ್ತದೆ. ಈ ವರ್ಷವೂ ಪರಿಸ್ಥಿತಿ ಬದಲಾಗಿಲ್ಲ. ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಧೈರ್ಯ ಮಾಡಿ ಕೆಲವರು ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.
ಕಳೆದ ವಾರ ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಮನದಕಡಲು' ಸಿನಿಮಾ ತೆರೆಗೆ ಬಂದಿತ್ತು. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವರ್ಷದ ಮೊದಲು 3 ತಿಂಗಳು ಮುಗಿದು ಏಪ್ರಿಲ್ ಶುರುವಾಗಿದೆ. ಈ ತಿಂಗಳು ಒಂದಷ್ಟು ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡುತ್ತಿವೆ. ಇಲ್ಲಿದೆ ನೋಡಿ ಆ ಲಿಸ್ಟ್.

ವಿದ್ಯಾಪತಿ
ಡಾಲಿ ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಧನು ಗೆಳೆಯ ನಾಗಭೂಷಣ್ ಹೀರೊ ಆಗಿ ನಟಿಸಿದ್ದು ಮಲೈಕಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಈ ಹಿಂದೆ 'ಟಗರು ಪಲ್ಯ' ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ಕಾಣಿಸಿಕೊಂಡಿದ್ದರು. ನಟ ಧನಂಜಯ್ ಕೂಡ ಚಿತ್ರ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ವಾಮನ
ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಏಪ್ರಿಲ್ 10ಕ್ಕೆ ರಿಲೀಸ್ ಆಗ್ತಿದೆ. ಇತ್ತೀಚೆಗೆ ನಟ ದರ್ಶನ್ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದರು. ತಾರಾ, ಸಂಪತ್ ರಾಜ್ ಸೇರಿದಂತೆ ಖಡಕ್ ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರದ 'ಮುದ್ದು ರಾಕ್ಷಸಿ' ಸಾಂಗ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ರಗಡ್ ಹೈದನಾಗಿ ಧನ್ವೀರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಕ್ಷನ್, ರೊಮ್ಯಾನ್ಸ್, ಮದರ್ ಸೆಂಟಿಮೆಂಟ್ ಎಲ್ಲವೂ ಚಿತ್ರದಲ್ಲಿದೆ.

ಅಜ್ಞಾತವಾಸಿ
ವಿದ್ಯಾಪತಿ ಹಾಗೂ ವಾಮನ ಸಿನಿಮಾಗಳು ಏಪ್ರಿಲ್ 10 ಅಂದರೆ ಗುರುವಾರ ಬಿಡುಗಡೆ ಆಗ್ತಿವೆ. ಮರುದಿನ ಅಂದರೆ ಶುಕ್ರವಾರ ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 1997ರಲ್ಲಿ ಮಲೆನಾಡಿನ ಭಾಗದಲ್ಲಿ ನಡೆದ ಹತ್ಯೆ ಪ್ರಕರಣದ ಸುತ್ತ ಸಿನಿಮಾ ಕಥೆ ಸುತ್ತಲಿದೆ. ಇದೊಂದು ಮರ್ಡರ್ ಮಿಸ್ಟರಿ ಸಿನಿಮಾ ಆಗಿದ್ದು ರಂಗಾಯಣ ರಘು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಹೇಮಂತ್ ಎಂ ರಾವ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ವೀರಚಂದ್ರಹಾಸ
ರವಿ ಬಸ್ರೂರು ನಿರ್ದೇಶನದ 'ವೀರಚಂದ್ರಹಾಸ' ಚಿತ್ರಕ್ಕೆ ಏಪ್ರಿಲ್ 18ರಂದು ಬಿಡುಗಡೆ ಭಾಗ್ಯ ಸಿಗಲಿದೆ. ಯಕ್ಷಗಾನವನ್ನು ಈ ಸಿನಿಮಾ ಮೂಲಕ ಬೆಳ್ಳಿಪರದೆಗೆ ತರಲಾಗುತ್ತಿದೆ. ವೀರಚಂದ್ರಹಾಸ ಕಥೆಯನ್ನು ಕಟ್ಟಿಕೊಡಲಾಗಿದೆ. ಶಿವರಾಜ್‌ಕುಮಾರ್, ಗರುಡ ರಾಮ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಶಿಥಿಲ್ ಶೆಟ್ಟಿ, ನಾಗಶ್ರೀ, ಉದಯ್ ಕಡಬಾಳ್, ಶೀಧರ್ ಕಾಸರಗೋಡು, ಪ್ರಜ್ವಲ್ ಕಿನ್ನಾಳ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸ್ವತಃ ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.
ಫೈರ್ ಫ್ಲೈ
ಶ್ರೀ ಮುತ್ತು ಸಿನಿ ಸರ್ವೀಸ್ ಬ್ಯಾನರ್ ಅಡಿಯಲ್ಲಿ ಶಿವಣ್ಣನ ಮಗಳು ನಿವೇದಿತಾ ನಿರ್ಮಾಣದ ಸಿನಿಮಾ 'ಫೈರ್ ಫ್ಲೈ'. ವಂಶಿ ಕೃಷ್ಣ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಸ್ವತ ನಿರ್ದೇಶನ ವಂಶಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದಾರ್, ಸುಧಾರಾಣಿ ತಾರಾಗಣದಲ್ಲಿದ್ದಾರೆ. ಏಪ್ರಿಲ್ 24ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











