ಈ ವಾರ 6 ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ರಿಲೀಸ್; ನಿಮ್ಮ ಆಯ್ಕೆ ಯಾವುದು?
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಆದರೆ ವಾರದ ಆರಂಭದಲ್ಲೇ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. ಕನ್ನಡದ ಎರಡು ದೊಡ್ಡ ಚಿತ್ರಗಳು ಓಟಿಟಿಗೆ ಬಂದಿವೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ಗೆ 'ಬಘೀರ' ಬಂದಿದ್ದಾನೆ.
ಭಾರೀ ಕುತೂಹಲ ಮೂಡಿಸಿದ್ದ 'ಮಾರ್ಟಿನ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಲಿಲ್ಲ. ಓಟಿಟಿಯಲ್ಲಿ ಕೂಡ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ 'ಬಘೀರ' ಸಿನಿಮಾ ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡ್ತಿದ್ದಾನೆ. ಅದೆಲ್ಲದರ ನಡುವೆ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿವೆ.

ಕನ್ನಡದಲ್ಲಿ ಈ ವಾರ 4 ಚಿತ್ರಗಳು ತೆರೆಗೆ ಬರ್ತಿವೆ. ದೊಡ್ಡ ಸಿನಿಮಾಗಳು ಅಲ್ಲದೇ ಇದ್ದರೂ ತಕ್ಕಮಟ್ಟಿಗೆ ಪ್ರೇಕ್ಷಕರನ್ನು ರಂಜಿಸುವ ಭರವಸೆ ಮೂಡಿಸಿರುವ ಚಿತ್ರಗಳು ಇವು. ಒಂದು ಚಿತ್ರವನ್ನು ಪ್ರೇಕ್ಷಕರು ಕೇವಲ 99 ರೂಪಾಯಿಗೆ ನೋಡುವ ಸುವರ್ಣಾವಕಾಶವೂ ಇದೆ. ದರ್ಶನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
1. ಜೀಬ್ರಾ
ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ ಸಿನಿಮಾ 'ಜೀಬ್ರಾ'. ತೆಲುಗಿನ ಸತ್ಯದೇವ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಡಾಲಿ ಧನಂಜಯ್ ನೆಗೆಟಿವ್ ಶೇಡ್ ಇರುವ ಒಂದು ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ತಮ್ಮದೇ ತಂಡದಿಂದ ಕನ್ನಡದ ಡಬ್ಬಿಂಗ್ ಮಾಡಿಸಿದ್ದಾರೆ. 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕನ್ನಡದಲ್ಲೇ ಈ ಸಿನಿಮಾ ತೆರೆಗೆ ಬರ್ತಿದೆ. ಈಶ್ವರ್ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತ್ಯರಾಜ್, ಪ್ರಿಯಾ ಭವಾನಿ ಶಂಕರ್ ಹಾಗೂ ಅಮೃತಾ ಅಯ್ಯಂಗಾರ್ ತಾರಾಗಣದಲ್ಲಿದ್ದಾರೆ.
2. ಮರ್ಯಾದೆ ಪ್ರಶ್ನೆ
ಟೈಟಲ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ 'ಮರ್ಯಾದೆ ಪ್ರಶ್ನೆ'. ನಾಗರಾಜ್ ಸೋಮಯಾಜಿ ನಿರ್ದೇಶನದ ಈ ಚಿತ್ರದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ತೇಜು ಬೆಳವಾಡಿ, ಶೈನ್ ಶೆಟ್ಟಿ ಹಾಗೂ ಪೂರ್ಣಚಂದ್ರ ಮೈಸೂರಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಮಧ್ಯಮ ವರ್ಗದ ಜನರ ನೋವು ನಲಿವಿನ ಕಥೆ ಈ ಚಿತ್ರದಲ್ಲಿದೆ.

3. ಆರಾಮ್ ಅರವಿಂದ್ ಸ್ವಾಮಿ
ಕಾಮಿಡಿ ಎಂಟರ್‌ಟೈನರ್ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ ಸಿಗುತ್ತಿದೆ. ಮೊದಲ 3 ದಿನ ಕೇವಲ 99 ರೂಪಾಯಿ ಪಾವತಿಸಿ ರಾಜ್ಯಾದ್ಯಂತ ಪ್ರೇಕ್ಷಕರು ಈ ಸಿನಿಮಾ ನೋಡುವ ಅವಕಾಶ ಇದೆ. ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ಚಿತ್ರದ ತಾರಾಗಣದಲ್ಲಿದ್ದಾರೆ.
4. ಕ್ರಾಂತಿವೀರ ಸಂಗೊಳ್ಳಿರಾಯಣ್ಣ
ದರ್ಶನ್ ನಟನೆಯ ಹಿಟ್ ಸಿನಿಮಾಗಳು ಒಂದೊಂದಾಗಿ ರೀ-ರಿಲೀಸ್ ಆಗುತ್ತಿದೆ. ಈ ವಾರ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಸಿನಿಮಾ ಮತ್ತೆ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. 2012ರಲ್ಲಿ ತೆರೆಗೆ ಬಂದಿದ್ದ ಈ ಐತಿಹಾಸಿಕ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಾಗಣ್ಣ ನಿರ್ದೇಶನದ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದರು. ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬೆಳಗಿನ 2 ಶೋಗಳು ಸೋಲ್ಡ್‌ಔಟ್ ಆಗಿದೆ.
ಈ ನಾಲ್ಕು ಸಿನಿಮಾಗಳ ಜೊತೆಗೆ 'ಟೆನೆಂಟ್', 'ಅನ್ಶು' ಹಾಗೂ 'ಪ್ರಭುತ್ವ' ಎಂಬ ಇನ್ನು 3 ಕನ್ನಡ ಚಿತ್ರಗಳು ಕೂಡ ಈ ವಾರ ತೆರೆಗೆ ಬರ್ತಿದೆ. 'ಲವ್ ರೆಡ್ಡಿ' ಎಂಬ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗ್ತಿದೆ. ಇಂಟ್ರೆಸ್ಟಿಂಗ್ ಸಿನಿಮಾಗಳೇ ಈ ವಾರ ತೆರೆಗೆ ಬರ್ತಿವೆ. ನಿಯಮಿತವಾಗಿ ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬರಲ್ಲ ಎನ್ನುವ ಆರೋಪವಿದೆ. ಆದರೆ ಈ ವಾರ ಬರ್ತಿರೋ ಸಿನಿಮಾಗಳು ನಿರೀಕ್ಷೆ ಹುಟ್ಟಾಕ್ಕಿರುವುದು ಸುಳ್ಳಲ್ಲ.
'ಭೀಮ', 'ಕೃಷ್ಣಂ ಪ್ರಣಯಸಖಿ', 'ಬಘೀರ' ಹಾಗೂ 'ಭೈರತಿ ರಣಗಲ್' ಚಿತ್ರಗಳು ಈ ವರ್ಷ ಗೆದ್ದಿವೆ. ರಣಗಲ್ ಆರ್ಭಟ ಇನ್ನು 2ನೇ ವಾರಕ್ಕೆ ಕಾಲಿಡುತ್ತಿದೆ. ಅದರ ಜೊತೆಗೆ ಈ ವಾರ ಬರುತ್ತಿರುವ ಸಿನಿಮಾಗಳು ಯಾವ ರೀತಿ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕು.


Click it and Unblock the Notifications











