For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾ ಘೋಷಿಸಿ 'ಡಿ-ಬಾಸ್' ಅಭಿಮಾನ ಮೆರೆದ ಗುರುದೇಶಪಾಂಡೆ

  |

  'ಜಂಟಲ್‌ಮ್ಯಾನ್' ಸಿನಿಮಾ ನಿರ್ಮಾಣದ ನಂತರ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ-ನಿರ್ಮಾಪಕ ಗುರುದೇಶ ಪಾಂಡೆ. ಹೊಸ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ 'ಝೂ' ಎಂದು ಹೆಸರಿಡಲಾಗಿದೆ.

  'ಝೂ: ಕೇರ್ ಆಫ್ 'ಡಿ' ಬಾಸ್' ಎಂದು ಸಬ್ ಟೈಟಲ್ ಇಡಲಾಗಿದ್ದು, ಫಸ್ಟ್ ಲುಕ್ ಪೋಸ್ಟರ್‌ನಲ್ಲಿಯೂ ದರ್ಶನ್ ಅವರ ಭಾವಚಿತ್ರ ನೋಡಬಹುದು. ಇದೊಂದು ಸ್ಫೂರ್ತಿದಾಯಕ ಕತೆಯಾಗಿದ್ದು, ಚಿತ್ರದಲ್ಲಿ ಬಾಲಕನೊಬ್ಬ ನಟ ದರ್ಶನ್ ಅವರ ಅಭಿಮಾನಿ.

  ದರ್ಶನ್ ಅವರ ಪ್ರಾಣಿ ಪ್ರೀತಿಯಿಂದ ಪ್ರೇರಪಿತನಾದ ಅಭಿಮಾನಿಯ ಕಥೆ. ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಸಿನಿಮಾಗೆ ಕಥೆ ಬರೆದು, ನಿರ್ಮಾಣ ಮಾಡುವುದರ ಜೊತೆಗೆ ಚಿತ್ರದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ ಗುರುದೇಶ ಪಾಂಡೆ.

  ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಅಭಿಲಾಷ್ ಕಲಾತಿ ಛಾಯಾಗ್ರಹಣ ಒಳಗೊಂಡಿದೆ. ಒಟ್ನಲ್ಲಿ, ದರ್ಶನ್ ಅವರ ವಿವಾದಗಳಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಇದು ಖುಷಿ ಕೊಟ್ಟಿದೆ.

  ದರ್ಶನ್ ಬೆಂಬಲಕ್ಕೆ ನಿಂತಿದ್ದ ಗುರುದೇಶ ಪಾಂಡೆ

  ಇತ್ತೀಚಿಗಷ್ಟೆ ನಟ ದರ್ಶನ್ ಬೆಂಬಲಿಸಿ ಗುರುದೇಶಪಾಂಡೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ''ಡಿ ಬಾಸ್ ಅಂದರೆ ಬರಿ ಹೆಸರಲ್ಲ ಡಿ ಬಾಸ್ ಕನ್ನಡಿಗರ ಆಸ್ತಿ ಮತ್ತು ದೊಡ್ಡ ಶಕ್ತಿ ಆನೆ ನಡೆದಿದ್ದೆ ದಾರಿ.ಇದನ್ನು ಯಾರು ಮರೆಯಬಾರದು ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ.ಮೂಕ ಪ್ರಾಣಿಗಳಿಗೆ ತೋರಿಸುವ ಪ್ರೀತಿ ಮತ್ತು ಮೂಕ ಪ್ರಾಣಿಗಳ ರಕ್ಷಣೆಗೆ ರಾಜನಂತೆ ನಿಂತ ರೀತಿ ಇಂತಹ ನೂರಾರು ಗುಣಗಳಿರುವ ಬೃಹತ್ ಶಿಖರ ನಮ್ಮ ಡಿ ಬಾಸ್'' ಎಂದಿದ್ದರು.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ''ಯಾರು ಏನೇ ಅಂದರೂ ನಿಮ್ಮ ಪರವಾಗಿ ಸದಾಕಾಲ ನಿಮ್ಮ ಅಭಿಮಾನಿಗಳಾದ ನಾವು ಇದ್ದೆ ಇರುತ್ತೇವೆ'' ಎಂದು ಹೇಳಿದ್ದ ಗುರುದೇಶಪಾಂಡೆ ಈಗ 'ಝೂ' ಸಿನಿಮಾ ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ.

  English summary
  Director Duru deshpande G-cinemas launches their 4th venture titled ZOO. Film is about a dboss fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X