»   » ಪವನ್ ಕಲ್ಯಾಣ್ ಬಾಕ್ಸ್ ಆಫೀಸ್ 'ಗಬ್ಬರ್ ಸಿಂಗ್'

ಪವನ್ ಕಲ್ಯಾಣ್ ಬಾಕ್ಸ್ ಆಫೀಸ್ 'ಗಬ್ಬರ್ ಸಿಂಗ್'

Posted By:
Subscribe to Filmibeat Kannada

ಪವನ್ ಕಲ್ಯಾಣ್ ನಾಯಕತ್ವದ ತೆಲುಗು ಚಿತ್ರ ಗಬ್ಬರ್ ಸಿಂಗ್ ಬಾಕ್ಸ್ ಆಫೀಸ್ ನಲ್ಲಿ ಜಯಭೇರಿ ಭಾರಿಸಿದ್ದಲೇ ತೆಲುಗು ಚಿತ್ರರಂಗದ ಹಳೆಯ ದಾಖಲೆಗಳನ್ನೆಲ್ಲ ಅಳಿಸಿಹಾಕಿದೆ. ಈ ಮೊದಲು ದಾಖಲೆ ಸ್ಥಾಪಿಸಿದ್ದ ರಾಮ್ ಚರಣ್ ತೇಜಾರ 'ಮಗಧೀರ' ಹಾಗೂ ತೆಲುಗು ಪ್ರಿನ್ಸ್ ಮಹೇಶ್ ಬಾಬುರ 'ದೂಕುಡು' ಚಿತ್ರಗಳ ದಾಖಲೆಯನ್ನು ಧೂಳೀಪಟ ಮಾಡಿದೆ. ಮೂರೇ ದಿನದಲ್ಲಿ ಬರೋಬ್ಬರಿ ರು 25 ಕೋಟಿ ಸಮೀಪ ಗಳಿಸಿ ಮೆರೆಯುತ್ತಿದೆ.

ನಿಜಾಮ್ ಏರಿಯಾದಲ್ಲಿ ದಾಖಲೆ ಸಂಖ್ಯೆ ಎನ್ನಬಹುದಾದ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಗಬ್ಬರ್ ಸಿಂಗ್, ಅಲ್ಲಿಂದಲೇ ಸುಮಾರು 3.50 ಕೋಟಿ ರು ಗಳಿಸಿದೆ. ಕೇವಲ ಮೂರೇ ದಿನದಲ್ಲಿ ಒಟ್ಟೂ ಸುಮಾರು 25 ಕೋಟಿ ಗಳಸಿರುವ ಈ ಚಿತ್ರ, ಈ ಹಿಂದನ ಮಗಧೀರ (ರು. 19.98) ಹಾಗೂ ದೂಕುಡು (ರು. 23.35) ಚಿತ್ರಗಳ ದಾಖಲೆ ಮೀರಿ ಮುನ್ನುಗ್ಗುತ್ತಿದೆ. ತೆಲುಗು ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ.

ಆಂಧ್ರ ಪ್ರದೇಶದ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯುತ್ತಿರುವ ನಟ ಪವನ್ ಕಲ್ಯಾಣ್ ಅದೃಷ್ಟ ಈ ಚಿತ್ರದ ಮೂಲಕ ಊಹಿಸಲಾಗದಷ್ಟು ಎತ್ತರಕ್ಕೇರಲಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಪವನ್ ಕಲ್ಯಾಣ್ ಅಭಿನಯದ ಕಡೆಗೇ ಹೆಚ್ಚಾಗಿದೆ ಎನ್ನಲಾಗುತ್ತಿದೆ. 'ಖುಷಿ' ಚಿತ್ರದ ನಂತರ ಮತ್ತೆ ಪವನ್ ಖುಷಿಖುಷಿಯಾಗಿದ್ದಾರೆ. ತೆಲುಗು ಸೂಪರ್ ಸ್ಟಾರ್ ಗಳಾಗಿರುವ ರಾಮ್ ಚರಣ್ ತೇಜಾ ಹಾಗೂ ಮಹೇಶ್ ಬಾಬು ಅವರ ಮುಂದಿನ ಚಿತ್ರಗಳಿಗೆ ಈಗ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. (ಏಜೆನ್ಸೀಸ್)

English summary
Pawan Kalyan movie Gabbar Singh has beaten the first weekend Box Office record of Blockbuster films Magadheera and Dookudu with its good collections.
 
Please Wait while comments are loading...