»   » 'ಜಾನಿ' ದುನಿಯಾ ವಿಜಯ್ ಜೊತೆ ಗಡ್ಡಪ್ಪ ಫುಲ್ ಡ್ಯಾನ್ಸ್

'ಜಾನಿ' ದುನಿಯಾ ವಿಜಯ್ ಜೊತೆ ಗಡ್ಡಪ್ಪ ಫುಲ್ ಡ್ಯಾನ್ಸ್

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪ' ಸಿನಿಮಾದ ಹಾಡಿನ ಚಿತ್ರೀಕರಣ ಇದೀಗ ನಡೆಯುತ್ತಿದೆ. ಚಿತ್ರದ ಸೆಟ್ ನಲ್ಲಿ ಸದ್ಯ 'ತಿಥಿ' ಖ್ಯಾತಿಯ ಗಡ್ಡಪ್ಪ ಪ್ರತ್ಯಕ್ಷ ಆಗಿದ್ದಾರೆ.

'ತಿಥಿ' ಸಿನಿಮಾದ ನಂತರ ದೊಡ್ಡ ಜನಪ್ರಿಯತೆ ಗಳಿಸಿದ ಗಡ್ಡಪ್ಪ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಒಬ್ಬ ದೊಡ್ಡ ಸ್ಟಾರ್ ನಟನ ಚಿತ್ರದಲ್ಲಿ ಗಡ್ಡಪ್ಪ ಕಾಣಿಸಿಕೊಂಡಿದ್ದಾರೆ. 'ಜಾನಿ ಜಾನಿ ಎಸ್ ಪಪ್ಪ' ಚಿತ್ರದ ಒಂದು ಹಾಡಿನಲ್ಲಿ ದುನಿಯಾ ವಿಜಯ್ ಗೆ ಗಡ್ಡಪ್ಪ ಸಾಥ್ ನೀಡಿದ್ದಾರೆ.

Gadappa in 'Jani Jani Yes Papa' movie song

'ಜಾನಿ ಜಾನಿ ಎಸ್ ಪಪ್ಪ' ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಗಡ್ಡಪ್ಪ ಕೂಡ ಬಣ್ಣ ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ. ಅಂದಹಾಗೆ, 'ಜಾನಿ ಮೇರಾ ನಾಮ್' ಬಳಿಕ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ವಿಜಿ ಒಂದಾಗಿರುವುದು ಈ ಚಿತ್ರದಲ್ಲೇ. ರಚಿತಾ ರಾಮ್ ಈ ಸಿನಿಮಾದ ನಾಯಕಿ.

English summary
Gadappa does a special appearance in Duniya Vijay's 'Jani Jani Yes Papa' movie song. 'ಜಾನಿ ಜಾನಿ ಎಸ್ ಪಪ್ಪ' ಚಿತ್ರದ ಹಾಡಿನಲ್ಲಿ ದುನಿಯಾ ವಿಜಯ್ ಗೆ ಗಡ್ಡಪ್ಪ ಸಾಥ್ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada