»   » ಗುಡ್ ನ್ಯೂಸ್: ತಿಥಿ 'ಗಡ್ಡಪ್ಪ' ಈಗ 'ಡಾಕ್ಟರ್' ಗಡ್ಡಪ್ಪ

ಗುಡ್ ನ್ಯೂಸ್: ತಿಥಿ 'ಗಡ್ಡಪ್ಪ' ಈಗ 'ಡಾಕ್ಟರ್' ಗಡ್ಡಪ್ಪ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಬ್ಯುಸಿಯೆಸ್ಟ್ ನಟರೆಂದರೆ ಗಡ್ಡಪ್ಪ ಎಂದ ಹೇಳಬಹುದು. ಗಡ್ಡಪ್ಪನ ಮುಂದೆ ದೊಡ್ಡ ಸ್ಟಾರ್ ಗಳೆಲ್ಲ ಸ್ವಲ್ಪ ಹಿಂದೆ ಉಳಿದಿದ್ದಾರೆ ಎಂದ್ರೆ ತಪ್ಪಾಗಲಾರದು. ಯಾಕಂದ್ರೆ, ಸ್ಟಾರ್ ನಟರು ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳನ್ನ ಮಾತ್ರ ಮಾಡುತ್ತಿದ್ದಾರೆ. ಆದ್ರೆ, ಗಡ್ಡಪ್ಪ ತಿಂಗಳಿಗೊಂದು ಎಂಬಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

'ಗಡ್ಡಪ್ಪನ ಸರ್ಕಲ್', 'ತಾತನ್ ತಿಥಿ, ಮೊಮ್ಮಗನ ಪ್ರಸ್ಥ', ಚಿತ್ರಗಳಲ್ಲಿ ತೊಡಗಿಕೊಂಡಿರುವ ಗಡ್ಡಪ್ಪ, ಈ ಮಧ್ಯೆ 'ಹಾಲು-ತುಪ್ಪ' ಬಿಡಲು ಸಿದ್ದವಾಗಿದ್ದಾರೆ. ಹೌದು, ಗಡ್ಡಪ್ಪನ ಜೊತೆಯಲ್ಲಿ ಸೆಂಚುರಿ ಗೌಡ ಕೂಡ ಹಾಲು-ತುಪ್ಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]

Gaddapp Ayurvedic Doctor in Haalu thuppa Movie

ವಿಶೇಷ ಅಂದ್ರೆ, 'ಹಾಲು-ತುಪ್ಪ' ಚಿತ್ರದಲ್ಲಿ ಗಡ್ಡಪ್ಪ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಪಟಾಪಟಿ ಚಡ್ಡಿ, ಬಿಳಿಯದೊಂದು ಶರ್ಟ್ ನಲ್ಲಿ ಮಿಂಚುತ್ತಿದ್ದ ಗಡ್ಡಪ್ಪ ಈ ಚಿತ್ರದಲ್ಲಿ ಆರ್ಯುವೇದಿಕ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!]

Gaddapp Ayurvedic Doctor in Haalu thuppa Movie

ಈ ಹಿಂದೆ 'ಗೂಳಿಹಟ್ಟಿ', 'ಉಡ' ಎಂಬ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಶಶಾಂಕ್ ರಾಜ್ ಈಗ 'ಹಾಲು-ತುಪ್ಪ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ಚಿತ್ರವನ್ನ ನಿರ್ಮಾಣ ಮಾಡಿದ್ದ ದೊಡ್ಮನೆ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಉಳಿದಂತೆ ಇಂದ್ರಸೇನಾ ಸಂಗೀತ ಸಂಯೋಜನೆ ಮಾಡಲಿದ್ದಾರೆ.['ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ]

English summary
Actor Gaddappa signed New Movie his Called Haalu-thuppa. The Movie Directed by shashank raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada