'ಜೆರ್ಕ್' ಟ್ರೈಲರ್: ದ್ವಿಪಾತ್ರದಲ್ಲಿ ಗಡ್ಡಪ್ಪ ಎಂಟ್ರಿ

'ತಿಥಿ' ಖ್ಯಾತಿಯ ಗಡ್ಡಪ್ಪ ವಿಶೇಷ ಪಾತ್ರದಲ್ಲಿ ನಟಿಸಿರುವ ಜೆರ್ಕ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರರಸಿಕರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಗಡ್ಡಪ್ಪ ದ್ವಿಪಾತ್ರದಲ್ಲಿ ನಟಿಸಿದ್ದು, ನಿರೀಕ್ಷೆಯಂತೆ ಫುಲ್ ಮೀಲ್ಸ್ ಇದಾಗಲಿದೆ.

ಮಹಂತೇಶ್ ಮದಕರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮಯೂರ ಪ್ರೊಡಕ್ಷನ್ ಮತ್ತು ತಂಡ ಬಂಡವಾಳ ಹಾಕಿದ್ದಾರೆ. ಅಂದ್ಹಾಗೆ, ಜೆರ್ಕ್ ಚಿತ್ರದಲ್ಲಿ ಕೃಷ್ಣ ರಾಜ್ ನಾಯಕನಾಗಿ ನಟಿಸಿದ್ದು ಇವರ ಜೊತೆ ದೊಡ್ಡ ತಾರಬಳಗವೇ ಇದೆ.

ಥ್ರಿಲ್ಲರ್ ಮಂಜು, ಸಚಿನ್, ನಿತ್ಯಾ, ಆಶಾ, ಮಜಾ ಟಾಕೀಸ್ ಪವನ್, ಬುಲೆಟ್ ಪ್ರಕಾಶ್, ಹಿರಿಯ ಹಾಸ್ಯನಟ ಉಮೇಶ್, ರಮೇಶ್ ಪಂಡಿತ್, ಕುರಿ ರಂಗ ಹಾಗೂ ಖಳನಾಯಕನಾಗಿ ದಳವಾಯಿ ಪ್ರದೀಪ್ ನಟಿಸಿದ್ದಾರೆ.

Gaddappa starrer JERK official Trailer released

ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಮೈಸೂರು, ಚಿತ್ರದುರ್ಗ, ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ಮಾಡಲಾಗಿದೆ. ಚಂದ್ರು ಅವರ ಛಾಯಾಗ್ರಹಣ, ಕೆಎಂ ಪ್ರಕಾಶ್ ಅವರ ಸಂಕಲನ, ಎಡ್ವರ್ಡ್ ಶಾ ಅವರ ಸಂಗೀತ ಹಾಗೂ ಮನು ಮಥಸ್ ಅವರ ಆರ್.ಆರ್ ಒಳಗೊಂಡಿದೆ.

ಸದ್ಯ ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ ಜೆರ್ಕ್ ಸಿನಿಮಾ, ಇದೇ ತಿಂಗಳು 26 ರಂದು ತೆರೆಗೆ ಬರಲಿದೆ.

More from Filmibeat

English summary
Kannada movie JERK official Trailer released. Starring Krishna Raj, Gaddappa, Sachin, Nitya, Asha, M T Pawan, Bullet Prakash, Umesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X