»   »  ಗಜ ಸೇರ್ಪಡೆ. ಎಲ್ಲವೂ ಯಶಸ್ಸಿಗಾಗಿ ಸ್ವಾಮಿ..

ಗಜ ಸೇರ್ಪಡೆ. ಎಲ್ಲವೂ ಯಶಸ್ಸಿಗಾಗಿ ಸ್ವಾಮಿ..

Posted By: Staff
Subscribe to Filmibeat Kannada

ಇದು ನಾಗಣ್ಣ ಪ್ಲಸ್‌ ಶಿವಣ್ಣ ಕಾಂಬಿನೇಶನ್‌ : ಚಿತ್ರದ ಹೆಸರು ಗಜ! ಟೈಟಲ್‌ ಡಿಫರೆಂಟಾಗಿದೆ ಎನ್ನುತ್ತಾರೆ ನಿರ್ಮಾಪಕ ರಮೇಶ್‌ ಯಾದವ್‌.

ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರೂ ಸದ್ಯಕ್ಕೆ ಯಶಸ್ಸಿನ ಕುದುರೆ ಸವಾರಿ ಮಾಡುತ್ತಿರುವವರೇ. 'ವಾಲಿ" ಚಿತ್ರ ಹಿಟ್‌ ಆದ ಸಂಭ್ರಮ ನಿರ್ಮಾಪಕ ರಮೇಶ್‌ ಯಾದವ್‌ ಅವರದಾದರೆ, 'ಕೋಟಿಗೊಬ್ಬ"ನ ಯಶಸ್ಸಿನ ರೂವಾರಿ ನಾಗಣ್ಣ ಅವರು. ಹಾಗೆ ನೋಡಿದರೆ ನಾಯಕ ಶಿವಣ್ಣ ಅವರಿಗೇ ಟೈಂ ಸರಿಯಾಗಿಲ್ಲ . ಸಾಲು ಚಿತ್ರಗಳು ತೋಪಾದ ನಂತರ 'ಯುವರಾಜ" ಮೂಲಕ ಶಿವಣ್ಣ ಪುನರ್ಜನ್ಮ ಪಡೆಯುತ್ತಾರೆನ್ನುವ ಉದ್ಯಮದ ನಿರೀಕ್ಷೆ ಸುಳ್ಳಾಯಿತು. ಯುವರಾಜ ಗಿಮಿಕ್‌ಗಳೆಲ್ಲ ಠುಸ್‌ ಎಂದವು. ಶಿವಣ್ಣ ಬ್ಯಾಡ್‌ಲಕ್‌ ಅಂದರು.

ಗಜ- ಲವ್‌, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಎನ್ನುವ ತ್ರಿಕರಣಗಳ ಸಂಗಮ. ಇಬ್ಬರು ನಾಯಕಿಯರು ; ಯಾರೆನ್ನುವುದು ಸದ್ಯಕ್ಕೆ ಸಸ್ಪೆನ್ಸ್‌ . ಇತ್ತೀಚೆಗೆ ಸ್ವಮೇಕ್‌ ರಾಗಗಳನ್ನು ನೀಡುತ್ತಿರುವ ರಾಜೇಶ್‌ ರಾಮನಾಥನ್‌ ಸಂಗೀತ ನಿರ್ದೇಶನ, ಕಲ್ಯಾಣ್‌ ಅವರ ಸಾಹಿತ್ಯ, ಎಂ.ಎಸ್‌. ರಮೇಶ್‌ ಹಾಗೂ ರಾಜಶೇಖರ್‌ ಜೋಡಿಯ ಸಂಭಾಷಣೆ ಚಿತ್ರಕ್ಕಿದೆ.

ಅಂದಹಾಗೆ- ನಾಗಣ್ಣ ನಿರ್ದೇಶನದಲ್ಲಿ ಶಿವಣ್ಣ ನಟಿಸುತ್ತಿರುವುದು ಇದೇ ಮೊದಲು. ರಮೇಶ್‌ ಯಾದವ್‌ ಅವರಿಗೂ ಶಿವಣ್ಣರೊಂದಿಗಿನ ಸಿನಿಮಾ ಸಹವಾಸ ಹೊಸತು. ಯಶಸ್ಸಿಗಾಗಿ ಹೊಸ ಕಾಂಬಿನೇಷನ್‌ ಎನ್ನುವುದು ಈ ಸಿನಿಮಾದ ಸ್ಲೋಗನ್‌ ಅನ್ನಲಿಕ್ಕಡ್ಡಿಯಿಲ್ಲ .

What do you think on Naganna-Shivanna Combination?

English summary
Gaja : Shivaraj Kumar in Nagannas new venture

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada