For Quick Alerts
  ALLOW NOTIFICATIONS  
  For Daily Alerts

  ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ

  |

  ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದ್ದು ಚಿತ್ರಕ್ಕೆ ಗಾಜನೂರು ಎಂದು ಟೈಟಲ್ ಇಡಲಾಗಿದೆ. ಗಾಜನೂರು ಎಂದಾಕ್ಷಣ ಅಣ್ಮಾವ್ರ ಹುಟ್ಟೂರು ಗಾಜನೂರು ನೆನಪಾಗುತ್ತೆ. ಆದರೆ ಅದರೆ ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ ಎಂದು ಸಿನಿಮಾತಂಡ ಸ್ಪಷ್ಟನೆ ನೀಡಿದೆ.

  ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರಕ್ಕೆ ಚಾಲನೆ ನೀಡಿ ಶುಭಕೋರಿದ್ದಾರೆ. ಗಾಜನೂರು ಸಿನಿಮಾದಲ್ಲಿ ನಾಯಕನಾಗಿ ಅವತಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವತಾರ್ ಈಗಾಗಲೇ ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರೆಗೂ ಏಳೆಂಟು ಸಿನಿಮಾ ಮಾಡಿದ್ದರು, ಅಷ್ಟಾಗಿ ಹೆಸರು ತಂದುಕೊಟ್ಟಿರಲಿಲ್ಲ. ಇದೀಗ ಒಳ್ಳೆಯ ಕಥೆ ಸಿಕ್ಕಿದ್ದು ಗಾಜುನೂರು ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರ್ತಿದ್ದಾರೆ.

  ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು

  ಚಿತ್ರಕ್ಕೆ ವಿಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಗಾಜನೂರಿನ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಿಸ್ಸಿಂಗ್ ಕೇಸ್ ಬಗ್ಗೆ ಇರುವ ಸಿನಿಮಾ ಇದಾಗಿದೆ. ತನಿಖಾ ಹಾದಿನಲ್ಲಿ ಸಿನಿಮಾದ ಕಥೆ ಸಾಗಲಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್.

  ಗಾಜನೂರು ಸಿನಿಮಾ ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಲಿದೆ. ಅಂದಹಾಗೆ ಚಿತ್ರದಲ್ಲಿ ನಾಯಕಿಯಾಗಿ ಸೋನಲ್ ಮೊಂತೆರೋ ಕಾಣಿಸಿಕೊಳ್ಳುತ್ತಿದ್ದಾರೆ.

  ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

  ಇನ್ನುಳಿದಂತೆ ರವಿಶಂಕರ್, ಕುರಿ ಪ್ರತಾಪ್, ತರಂಗ್ ವಿಶ್ವ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದು, ತನ್ವಿಕ್ ಛಾಯಾಗ್ರಾಹಣ ಮಾಡುತ್ತಿದ್ದಾರೆ.

  English summary
  Gajanur kannada film not based on dr.rajkumar birth place says film team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X