twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಅಪಹರಣದ ನಡುವೆ ಬಂದ 'ಗಲಾಟೆ ಅಳಿಯಂದ್ರು' ಚಿತ್ರಕ್ಕೆ 20 ವರ್ಷ!

    |

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದ 'ಗಲಾಟೆ ಅಳಿಯಂದ್ರು' ಸಿನಿಮಾ ತೆರೆಕಂಡು ಇಂದಿಗೆ 20 ವರ್ಷ ಕಳೆದಿದೆ. ಈ ಚಿತ್ರ ಬಿಡುಗಡೆಯಾಗಿ 2 ದಶಕ ಆಗಿದೆ ಎಂದು ಸ್ಮರಿಸಿಕೊಂಡಾಗ ಡಾ ರಾಜ್ ಕುಮಾರ್ ಅಪಹರಣದ ಘಟನೆಯೂ ನೆನಪಾಗುತ್ತದೆ.

    ಎಸ್‌ ನಾರಾಯಣ್ ನಟಿಸಿ, ನಿರ್ದೇಶಿಸಿದ ಈ ಚಿತ್ರವನ್ನು ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ಕೌಟುಂಬಿಕ ಮನರಂಜನೆ ಕಥೆ ಹೊಂದಿದ್ದ ಈ ಚಿತ್ರ ಯಶಸ್ಸು ಸಹ ಕಂಡಿತ್ತು. ಗಲಾಟೆ ಅಳಿಯಂದ್ರು ಚಿತ್ರಕ್ಕೂ ರಾಜ್ ಕುಮಾರ್ ಅಪಹರಣದ ಘಟನೆಗೂ ಏನು ಸಂಬಂಧ? ಮುಂದೆ ಓದಿ....

    ಡಾ. ರಾಜ್ ಕುಮಾರ್ ಅಪಹರಣ: ಆ ಕರಾಳ ಘಟನೆಗೆ 20 ವರ್ಷ

    ಜುಲೈ 30 ರಂದು ರಾಜ್ ಕಿಡ್ನಾಪ್

    ಜುಲೈ 30 ರಂದು ರಾಜ್ ಕಿಡ್ನಾಪ್

    ಜುಲೈ 30, 2000ನೇ ಇಸವಿಯಲ್ಲಿ ಗಾಜನೂರಿನಿಂದ ಡಾ ರಾಜ್ ಕುಮಾರ್ ಕಿಡ್ನಾಪ್ ಆಗ್ತಾರೆ. ಕಾಡುಗಳ್ಳ ವೀರಪ್ಪನ್ ತನ್ನ ಸಹಚರರೊಂದಿಗೆ ಅಣ್ಣಾವ್ರ ಮನೆಗೆ ನುಗ್ಗಿ ಕರೆದುಕೊಂಡು ಹೋಗಿದ್ದ. 108 ದಿನಗಳ ಬಳಿಕ ವಾಪಸ್ ಕಳುಹಿಸಿಕೊಟ್ಟಿದ್ದ. ಅಣ್ಣಾವ್ರು ಕಿಡ್ನಾಪ್ ಆದ ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕದಲ್ಲಿ ಪ್ರತಿಭಟನೆಗಳು, ಹೋರಾಟ, ಬಂದ್ ಸದ್ದು ಮಾಡಿದ್ದವು.

    ಸೆಪ್ಟೆಂಬರ್ 29ಕ್ಕೆ ಸಿನಿಮಾ ರಿಲೀಸ್

    ಸೆಪ್ಟೆಂಬರ್ 29ಕ್ಕೆ ಸಿನಿಮಾ ರಿಲೀಸ್

    ಅಣ್ಣಾವ್ರು ಕಿಡ್ನಾಪ್ ಆಗಿ ಸುಮಾರು 50 ದಿನಕ್ಕೂ ಹೆಚ್ಚು ದಿನಗಳು ಕಳೆದು ಹೋಗಿತ್ತು. ರಾಜ್ ಕುಮಾರ್ ಅವರನ್ನು ಕಳುಹಿಸಿಕೊಡುವ ಬಗ್ಗೆ ವೀರಪ್ಪನ್ ಸುಳಿವು ಸಹ ಕೊಟ್ಟಿರಲಿಲ್ಲ. ನಿಧಾನವಾಗಿ ಚೇತರಿಸಿಕೊಂಡ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಮುಂದಾಗಿತ್ತು. ಹೀಗೆ, ಕಹಿ ಘಟನೆಯ ನಡುವೆ ಸೆಪ್ಟೆಂಬರ್ 29, 2000ನೇ ಇಸವಿಯಲ್ಲಿ 'ಗಲಾಟೆ ಅಳಿಯಂದ್ರು' ಸಿನಿಮಾ ತೆರೆಕಂಡಿತ್ತು.

    ಶಿವಣ್ಣ-ಎಸ್ ನಾರಾಯಣ್ ಸಿನಿಮಾ

    ಶಿವಣ್ಣ-ಎಸ್ ನಾರಾಯಣ್ ಸಿನಿಮಾ

    'ಗಲಾಟೆ ಅಳಿಯಂದ್ರು' ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದು, ಎಸ್ ನಾರಾಯಣ್ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಖುದ್ದು ನಾರಾಯಣ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದರು. ಸಾಕ್ಷಿ ಶಿವಾನಂದ್ ನಾಯಕಿಯಾಗಿದ್ದರು. ತಾರಾ, ದೊಡ್ಡಣ್ಣ ಸೇರಿದಂತೆ ಹಲವರು ನಟಿಸಿದ್ದರು.

    Recommended Video

    SPB Special | 50 ವರ್ಷ ಟ್ರೆಂಡಿಂಗ್ ನಲ್ಲಿ ಇರೋಕೆ ಯಾರಿಗೂ ಆಗಲ್ಲ | Filmibeat Kannada
    ತಮಿಳಿನ ರೀಮೇಕ್!

    ತಮಿಳಿನ ರೀಮೇಕ್!

    ತಮಿಳಿನ 'Ullathai Allitha' ಚಿತ್ರದ ರೀಮೇಕ್ ಇದಾಗಿತ್ತು. ತಮಿಳಿನಲ್ಲಿ ಕಾರ್ತಿಕ್, ರಂಭಾ ನಟಿಸಿದ್ದರು. ಕನ್ನಡದಲ್ಲೂ ಈ ಚಿತ್ರ ಹಿಟ್ ಆಗಿತ್ತು. ದೇವ ಅವರ ಸಂಗೀತ ಹಾಗೂ ಎಸ್ ನಾರಾಯಣ್-ಕೆ ಕಲ್ಯಾಣ್ ಸಾಹಿತ್ಯದ ಕಾಂಬಿನೇಷನ್‌ನಲ್ಲಿ ಬಂದಿದ್ದ ಹಾಡುಗಳು ಸೂಪರ್ ಹಿಟ್ ಆಗಿತ್ತು.

    English summary
    Kannada actor Shiva rajkumar and S Narayan starrer Galate Aliyandru movie completed 20 Years.
    Tuesday, September 29, 2020, 15:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X