ಈ ವಾರ ನಾಲ್ಕು ಚಿತ್ರಗಳ ನಡುವೆ ಹಗ್ಗ ಜಗ್ಗಾಟ
2013ನೇ ವರ್ಷದ ಮೊದಲ ವಾರ ಒಂದೇ ಒಂದು ಕನ್ನಡ ಚಿತ್ರವೂ ಬಿಡುಗಡೆಯಾಗದೆ ಚಿತ್ರರಸಿಕರಿಗೆ ನಿರಾಸೆ ಮೂಡಿಸಿತ್ತು. ಆದರೆ ಈ ವಾರ ಒಟ್ಟಿಗೆ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಮತ್ತೆ ಚಿತ್ರಮಂದಿರಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.
ಪ್ರಜ್ವಲ್ ದೇವರಾಜ್ ಹಾಗೂ ಕೃತಿ ಕರಬಂದ, ನಿಶಾ ಶೆಟ್ಟಿ ಅಭಿನಯದ ಗಲಾಟೆ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಜಾಸ್ತಿ ಇವೆ. ನಾನಾ ಕಾರಣಗಳಿಗಾಗಿ ಕೊಟ್ಲಲ್ಲಪ್ಪೋ ಕೈ ಚಿತ್ರವೂ ಕುತೂಹಲ ಮೂಡಿಸಿದೆ. ಈ ಭೂಮಿ ಆ ಭಾನು ಹಾಗೂ ಮನಸಿನ ಪುಟದಲಿ ಚಿತ್ರಗಳು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

ಗಲಾಟೆ ಚಿತ್ರದ ಬಗ್ಗೆ ಒಂದಷ್ಟು ವಿವರಗಳು
ಎಂ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜೇಂದ್ರಕುಮಾರ್ ಅವರು ನಿರ್ಮಿಸಿರುವ `ಗಲಾಟೆ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಪ್ರಜ್ವಲ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕೃತಿಕರಬಂದ, ನಿಶಾಶೆಟ್ಟಿ, ಶಶಿಕುಮಾರ್, ತಾರಾ, ಶೋಭರಾಜ್, ಸುಮನ್ ರಂಗನಾಥ್ ಮುಂತಾದವರಿದ್ದಾರೆ.

ಮಲೇಶಿಯಾ, ಕೊಲಂಬೋದಲ್ಲಿ ಹಾಡುಗಳ ಚಿತ್ರೀಕರಣ
ಎಂ.ಡಿ.ಶ್ರೀಧರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಜೆಸ್ಸಿಗಿಫ್ಟ್ ಸಂಗೀತವಿರುವ 'ಗಲಾಟೆ'ಗೆ ಪಿ.ಆರ್.ಸೌಂದರ್‍ರಾಜನ್ ಅವರ ಸಂಕಲನವಿದೆ. ಮುರಳಿ, ಫೈವ್ ಸ್ಟಾರ್ ಗಣೇಶ್, ರಾಮು, ಇಮ್ರಾನ್ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ, ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಎನ್.ಆರ್.ಪಾಟೀಲ್, ಶ್ರೀಕಾಂತ್ ಜೈನ್ ಹಾಗೂ ಸಂತೋಷ್ ಪೈ ಸಹ ನಿರ್ಮಾಪಕರಾಗಿರುವ `ಗಲಾಟೆ'ಗೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಕರುನಾಡ ಸುಂದರ ತಾಣಗಳು ಹಾಗೂ ಮಲೇಶಿಯಾ, ಕೊಲಂಬೋ ಮುಂತಾದಕಡೆ ಚಿತ್ರದ ಚಿತ್ರೀಕರಣ ನಡೆದಿದೆ.

ಈ ಭೂಮಿ ಆ ಭಾನು
ಸೃಷ್ಠಿ ದಿ ಕ್ರಿಯೇಷನ್ಸ್ ಸಂಸ್ಥೆಯ ಚೊಚ್ಚಲ ಪ್ರಯತ್ನ `ಈ ಭೂಮಿ ಆ ಭಾನು' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೇಣುಗೋಪಾಲ್(ಬಾಗೇಪಲ್ಲಿ) ನಿರ್ದೆಶನದ ಈ ಚಿತ್ರದ ನಾಯಕರಾಗಿ ಅಜಿತ್(ಪಟ್ರೆ) ನಟಿಸಿದ್ದಾರೆ. ಶರಣ್ಯಮೋಹನ್ ಈ ಚಿತ್ರದ ನಾಯಕಿ. ಶರಣ್, ಮಂಡ್ಯ ಮೋಹನ್, ಮಿತ್ರ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
ಪಿ.ರಾಜನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ಬಿ.ಎಚ್.ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹಾಡುಗಳನ್ನು ರಚಿಸಿದ್ದಾರೆ. ಎಸ್.ಪ್ರೇಮಕುಮಾರ್ ಅವರ ಸಂಗೀತ `ಈ ಭೂಮಿ ಆ ಭಾನು' ಚಿತ್ರಕ್ಕಿದೆ.

ಮನಸಿನ ಪುಟದಲಿ
ಶ್ರೀಮಂಜುನಾಥ ಕೃಪ ಪ್ರೊಡಕ್ಷನ್ಸ್ ಮೈಸೂರು ಲಾಂಛನದಲ್ಲಿ ಶ್ರೀಮತಿ ಸುನಂದಶಾಮಣ್ಣಶೆಟ್ಟಿ ನಿರ್ಮಿಸಿರುವ ಚಿತ್ರ `ಮನಸಿನ ಪುಟದಲಿ'. ಪ್ರಶಾಂತ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮೈಸೂರು, ಪಿರಿಯಾಪಟ್ಟಣ, ಮೂಡಿಗೆರೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ರಾಜ್ ಕಡೂರು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜನ್ ನಾರಾಯಣ್ ಸಂಗೀತ ನೀಡಿದ್ದಾರೆ. ಶಿವರಾಜ್‍ಮೇಹು ಸಂಕಲನ, ಶಶಿ(ಆರಕ್ಷಕ) ನೃತ್ಯ ನಿರ್ದೇಶನ ಹಾಗು ಪುಷ್ಪರಾಜ್ ಸಾಹಸ ನಿರ್ದೇಶನ `ಮನಸಿನ ಪುಟದಲಿ' ಚಿತ್ರಕ್ಕಿದೆ.

ಈ ವಾರ ತೆರೆಗೆ `ಕೊಟ್ಳಲ್ಲಪ್ಪೋ ಕೈ’
ಅಶ್ವಿನಿ ಫಿಲಂಸ್ ಲಾಂಛನದಲ್ಲಿ ಎಸ್.ಆನಂದ್, ವೆಂಕಟೇಶ್, ಪಾರ್ಥಸಾರಥಿ ಹಾಗೂ ಮಹೇಶ್ ನಿರ್ಮಿಸಿರುವ ಚಿತ್ರ `ಕೊಟ್ಲಲ್ಲಪ್ಪೋ ಕೈ'. ಋಷಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶಂಕರ್ ಅವರ ಛಾಯಾಗ್ರಹಣವಿದೆ. ಮಧುರ ಸಂಗೀತ ನಿರ್ದೇಶನ, ಜಗ್ಗು ನೃತ್ಯ ನಿರ್ದೇಶನ ಹಾಗೂ ಕುಮಾರ್ ಸಂಕಲನವಿದೆ.
ಧನುಷ್, ಯತಿರಾಜ್, ನಯನಕೃಷ್ಣ, ನವೀನ್ ಕೃಷ್ಣ, ತಬಲ ನಾಣಿ, ಬಿರಾದರ್, ಬ್ಯಾಂಕ್ ಜನಾರ್ದನ್, ಚಿತ್ರಾಶೆಣೈ, ಕರಿಬಸವಯ್ಯ ಮುಂತಾದವರು `ಕೊಟ್ಳಲ್ಲಪ್ಪ್ಪೋ ಕೈ' ಚಿತ್ರದ ತಾರಾಬಳಗದಲ್ಲಿದ್ದಾರೆ.


Click it and Unblock the Notifications











