ಈ 'ಗಾಳಿಪಟ'ದಲ್ಲಿಯೂ ಇರ್ತಾರೆ ಮೂವರು, ಯಾರವರು?
ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಮೂವರು ಸೇರಿ ಅದೆಷ್ಟೋ ಮಜಾ ಮಾಡಿದ್ದರು. ಅವರು ಹಾರಿಸಿದ್ದ 'ಗಾಳಿಪಟ' ಪ್ರೇಕ್ಷಕರಿಗೆ ಬಹಳ ಖುಷಿ ನೀಡಿತ್ತು. ಇದೀಗ ಮತ್ತೆ ಗಗನದಲ್ಲಿ 'ಗಾಳಿಪಟ' ಹಾರುವ ಸಮಯ ಬಂದಿದೆ.
ಅಂದಹಾಗೆ, ನಿರ್ದೇಶಕ ಯೋಗರಾಜ್ ಭಟ್ ಈಗ 'ಗಾಳಿಪಟ 2' ಸಿನಿಮಾ ಮಾಡ್ತಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಇಂದು ಹೊರಬಂದಿದೆ. ಆ 'ಗಾಳಿಪಟ'ದಲ್ಲಿ ಇದ್ದ ಹಾಗೆ ಇಲ್ಲಿಯೂ ಮೂರು ಜನ ಹೀರೋಗಳು ಇರುತ್ತಾರೆ.

ನಟ ಶರಣ್, ರಿಷಿ ಹಾಗೂ ಲೂಸಿಯಾ ಪವನ್ ಕುಮಾರ್ 'ಗಾಳಿಪಟ 2' ಸಿನಿಮಾದ ನಾಯಕರಾಗಿದ್ದಾರೆ. ಈ ಮೂವರು ನಾಯಕರಿಗೆ ಕಾಮಿಡಿ ಟೈಮಿಂಗ್ ಚೆನ್ನಾಗಿ ಇದ್ದು, ಭಟ್ಟರು ಕಟ್ಟುವ ದೃಶ್ಯಗಳ ಹೇಗೆ ಬರಬಹುದು ಎನ್ನುವ ಕುತೂಹಲ ಇದೆ. ಚಿತ್ರದ ನಾಯಕಿಯರು ಯಾರು ಎನ್ನುವ ಸುದ್ದಿ ಇನ್ನು ಬಹಿರಂಗ ಆಗಿಲ್ಲ.
ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾಗೆ ಅರ್ಜುನ್ ಮ್ಯೂಸಿಕ್ ಮಾಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಹಾಡುಗಳಲ್ಲಿ ಇರಲಿದೆ.
English summary
Director Yograj Bhat 'Galipata 2' kannada movie 1st poster is out.
galipata 2 sharan pavan kumar yograj bhat sandalwood ಗಾಳಿಪಟ 2 ಪವನ್ ಕುಮಾರ್ ಯೋಗರಾಜ್ ಭಟ್ ಶರಣ್ ಸ್ಯಾಂಡಲ್ ವುಡ್


Click it and Unblock the Notifications