'ಗಾಳಿಪಟ 2' ಬಿಡುಗಡೆ ದಿನಾಂಕ ಪ್ರಕಟ: ಗಾಳಿಪಟ ಹಾರುವುದೆಂದು?

'ಗಾಳಿಪಟ 2' ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಸೆಟ್ಟೇರಿ ಬಹುಸಮಯವಾಗಿತ್ತು. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಯೋಗರಾಜ್ ಭಟ್ ನಿರ್ದೇಶಿಸಿ ಗಣೇಶ್, ದಿಗಂತ್, 'ಲೂಸಿಯಾ' ಪವನ್ ನಟಿಸಿರುವ 'ಗಾಳಿಪಟ 2' ಸಿನಿಮಾ ಆಗಸ್ಟ್ 12 ರಂದು ಬಿಡುಗಡೆ ಆಗಲಿದೆ. ಈ ಹಿಂದೆ ಸೂಪರ್ ಡೂಪರ್ ಹಿಟ್ ಆಗಿದ್ದ, ಕನ್ನಡದ ಕಲ್ಟ್ ಕ್ಲಾಸಿಕ್‌ಗಳಲ್ಲಿ ಒಂದೆನಿಸಿಕೊಂಡಿದ್ದ 'ಗಾಳಿಪಟ' ಸಿನಿಮಾದ ಹೆಸರನ್ನೇ ಬಳಸಿಕೊಂಡು ಅದೇ ತಂಡವೇ ಹೊಸ ಸಿನಿಮಾ ಮಾಡಿರುವ ಕಾರಣ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ನಿರ್ದೇಶಕ ಯೋಗರಾಜ್ ಭಟ್, ''ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಅಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ'' ಎಂದಿದ್ದಾರೆ.

Galipata 2 Kannada Movie Will Release On August 12

ಮೊದಲ 'ಗಾಳಿಪಟ' ಸಿನಿಮಾದಂತೆ ಇದೂ ಕೂಡ ಪ್ರೇಮ ಕತಾ ಸಿನಿಮಾ ಆಗಿದೆ. ಮೊದಲ ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣ ನಟಿಸಿದ್ದರು. ಈ ಸಿನಿಮಾದಲ್ಲಿ ಗಣೇಶ್ ಹಾಗೂ ದಿಗಂತ್ ಇದ್ದಾರೆ ಆದರೆ ರಾಜೇಶ್ ಕೃಷ್ಣ ಬದಲಿಗೆ ಪವನ್ ನಟಿಸಿದ್ದಾರೆ.

'ಗಾಳಿಪಟ' ಮೊದಲ ಸಿನಿಮಾಕ್ಕೂ 'ಗಾಳಿಪಟ 2' ಸಿನಿಮಾಕ್ಕೂ ನೇರ ಸಂಬಂಧ ಇಲ್ಲ. ಆದರೆ ಮೊದಲ ಸಿನಿಮಾಕ್ಕಿಂತಲೂ ಉತ್ತಮ ಪ್ರೇಮ ಕತೆ, ಭಾವುಕತೆ ಈ ಸಿನಿಮಾದಲ್ಲಿ ಇರಲಿದೆ ಎಂಬುದು ಚಿತ್ರತಂಡದ ಆಂಬೋಣ.

'ಗಾಳಿಪಟ 2' ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು, ಸೊನಲ್ ಮೊಂಟಾರೊ, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಅವರುಗಳು ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಅನಂತ್‌ನಾಗ್ ಹಾಗೂ ರಂಗಾಯಣ ರಘು ಅವರುಗಳು ಸಹ ಇದ್ದಾರೆ.

ಆಗಸ್ಟ್ ತಿಂಗಳಲ್ಲಿ ಕನ್ನಡದ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ 'ಗಾಳಿಪಟ 2' ಸಿನಿಮಾಕ್ಕೆ ಒಳ್ಳೆಯ ಅವಕಾಶವೇ ಇದೆ ಎನ್ನಬಹುದು.

ಯೋಗರಾಜ್ ಭಟ್ ಪ್ರಸ್ತುತ 'ಗರಡಿ' ಸಿನಿಮಾದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯಶಸ್ ಸೂರ್ಯ ನಾಯಕ ನಟನಾಗಿ ನಟಿಸುತ್ತಿರುವ 'ಗರಡಿ' ಸಿನಿಮಾದಲ್ಲಿ ದರ್ಶನ್, ಸಚಿವ ಬಿ.ಸಿ.ಪಾಟೀಲ್, ಸೋಮಶೇಖರ್ ಅವರುಗಳು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

'ಗರಡಿ' ಬಳಿಕ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಲಿದ್ದಾರೆ. 'ಕುಲದಲ್ಲಿ ಕೀಳ್ಯಾವುದೊ' ಎಂದು ಹೆಸರಿಟ್ಟಿರುವ ಆ ಸಿನಿಮಾದಲ್ಲಿ ಶಿವಣ್ಣನ ಜೊತೆ ನಟ ಪ್ರಭುದೇವ ಸಹ ನಟಿಸಲಿದ್ದಾರೆ.

More from Filmibeat

English summary
Galipata 2 movie will release on August 12. Movie is directed by Yogaraj Bhat. Ganesh Diganth, Pawan Kumar were in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X