ಮಗಳು ಜಾನಕಿ ಗಾನವಿಗೆ ಖುಲಾಯಿಸಿದ ಅದೃಷ್ಟ: ಶಿವಣ್ಣನ ಎದುರು ನಾಯಕಿ!
ಧಾರಾವಾಹಿ ನಟ-ನಟಿಯರು ಬೆಳ್ಳಿ ಪರದೆ ಪ್ರವೇಶಿಸುವುದು ಅಲ್ಲಿ ಮಿಂಚುವುದು ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಆದರೆ ಹೀಗೆ ಧಾರಾವಾಹಿ ಬಂದ ನಟ-ನಟಿಯರು ಆರಂಭದಲ್ಲಿಯೇ ದೊಡ್ಡ ನಟರೊಡನೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು ತುಸು ಕಡಿಮೆ ಆದರೆ ಆ ಅವಕಾಶ 'ಮಗಳು ಜಾನಕಿ' ನಟಿ ಗಾನವಿಗೆ ದೊರೆತಿದೆ.
Recommended Video
ಟಿಎನ್ ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಗಾನವಿ ಲಕ್ಷ್ಮಣ್ ಇದೀಗ ಶಿವರಾಜ್ ಕುಮಾರ್ ನಟಿಸಲಿರುವ ಹೊಸ ಸಿನಿಮಾ 'ವೇದ'ದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಹಾಗೆಂದು ಗಾನವಿಗೆ ಇದು ಮೊದಲ ಸಿನಿಮಾ ಎಂದೇನೂ ಅಲ್ಲ ಈ ಮೊದಲು ಅವರು ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಶಿವರಾಜ್ ಕುಮಾರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

'ವೇದ' ಸಿನಿಮಾ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ಆಗಲಿದೆ. ಈ ಸಿನಿಮಾವನ್ನು ನಿರ್ದೇಶಕ ಹರ್ಷ ತೆರೆಗೆ ತರಲಿದ್ದಾರೆ. ಈ ಸಿನಿಮಾ ಸಹ ಅತಿಮಾನುಷ ಶಕ್ತಿಯ ಕತೆಯುಳ್ಳ ಸಿನಿಮಾ ಆಗಿರಲಿದೆ. ಇಂಥಹಾ ಪ್ರಮುಖ ಸಿನಿಮಾದಲ್ಲಿ ಗಾನವಿಗೆ ಅವಕಾಶ ದೊರೆತಿರುವುದು ಅವರ ಪ್ರತಿಭೆಗೆ ಸಿಕ್ಕ ಮನ್ನಣೆಯಾಗಿದೆ.
ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾದಲ್ಲಿ ಗಾನವಿ ನಟನೆ ಗಮನ ಸೆಳೆದಿತ್ತು. ಅದೇ ಸಿನಿಮಾದ ಪ್ರದರ್ಶನದ ಆಧಾರದ ಮೇಲೆ 'ವೇದ' ಸಿನಿಮಾಕ್ಕೆ ಗಾನವಿಗೆ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ.
'ವೇದ' ಸಿನಿಮಾದಲ್ಲಿ ಗಾನವಿಯೇ ನಾಯಕಿ ಆಗಿರುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಖಾತ್ರಿಯಾಗಿಲ್ಲ. ಆದರೆ ಸಿನಿಮಾದಲ್ಲಿ ಪ್ರಮುಖ ಪಾತ್ರವಂತೂ ಗಾನವಿ ನಿರ್ವಹಿಸಲಿದ್ದಾರೆ.


Click it and Unblock the Notifications











