ಕನ್ನಡದ 'ಗಂಧದ ಕುಡಿ' ಹಿಂದಿಯಲ್ಲಿ 'ಚಂದನ್ ವನ್': ಮಾರ್ಚ್ 29ಕ್ಕೆ ತೆರೆಗೆ

ಕನ್ನಡದಲ್ಲಿ ಅನೇಕ ಮಕ್ಕಳ ಸಿನಿಮಾಗಳು ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳು ಅಪರೂಪ. ಅಲ್ಲೊಂದು ಇಲ್ಲೊಂದು ಮಕ್ಕಳ ಸಿನಿಮಾ ಬರುತ್ತೆ. ಇದೀಗ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರ ಗಂಧದ ಕುಡಿ.

ಹೌದು, ಗಂಧದ ಕುಡಿ ಸಿನಿಮಾ ಮಾರ್ಚ್ 29ರಂದು ತೆರೆಗೆ ಬರ್ತಿದೆ. ವಿಶೇಷ ಅಂದ್ರೆ, ಕನ್ನಡದಲ್ಲಿ ಗಂಧದ ಕುಡಿ ಹಿಂದಿಯಲ್ಲೂ ಡಬ್ ಆಗಿ ಬರ್ತಿದೆ. ಹಿಂದಿಯಲ್ಲಿ ಚಂದನ್ ವನ್ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ.

Gandada kudi movie releasing on march 29th

ಪೋಸ್ಟರ್ ಗಳನ್ನು ನೋಡಿದ್ರೆ ಇದೊಂದು ಫ್ಯಾಂಟಸಿ ಚಿತ್ರವೆನ್ನಿಸುತ್ತದೆ. ಆದ್ರೆ, ಇದು ಮಕ್ಕಳ ಕಮರ್ಷಿಯಲ್ ಚಿತ್ರ. ಗಂಧದ ಕುಡಿ ಚಿತ್ರದ ಹಾಡುಗಳು ಈಗಾಗ್ಲೇ ರಿಲೀಸ್ ಆಗಿದ್ದು, ಹಾಡುಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ಸಂಯೋಜನೆ ಇರುವ ಹಾಡುಗಳು ಕೇಳೋದಕ್ಕೆ ಇಂಪಾಗಿದ್ದು, ನೋಡುವುದಕ್ಕೂ ಕಲರ್ ಫುಲ್ಲಾಗಿ ಮೂಡಿ ಬಂದಿರುವಂತೆ ಕಾಣ್ತಿದೆ.

ಸಂತೋಷ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರವನ್ನ ಸತ್ಯೇಂದ್ರ ಪೈ ಹಾಗೂ ಕೃಷ್ಣ ಮೋಹನ್ ಪೈ ನಿರ್ಮಿಸಿದ್ದಾರೆ. ಶಿವಧ್ವಜ್ ಶೆಟ್ಟಿ, ನಿಧಿ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Gandada kudi movie releasing on march 29th

ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ 'ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್'ನಲ್ಲಿ 'ಅತ್ಯುತ್ತಮ ಛಾಯಾಗ್ರಾಹಕ' ಪ್ರಶಸ್ತಿಯನ್ನು 'ಗಂಧದ ಕುಡಿ' ಚಿತ್ರವು ತನ್ನ ಮುಡಿಗೇರಿಸಿದೆ. ಇದಷ್ಟೇ ಅಲ್ಲದೇ ಇನ್ನೂ ಕೆಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಬಿಡುಗಡೆಗೆ ಮುಂಚೆ ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ವಿಶೇಷವಾದ ಭರವಸೆ ಮೂಡಿದೆ.

More from Filmibeat

English summary
Kannada movie Gandada kudi will release on march 29th. the movie directed by snthosh shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X