For Quick Alerts
  ALLOW NOTIFICATIONS  
  For Daily Alerts

  ಅಪ್ಪು ಬರ್ತಡೇ ದಿನ ಶಿವಣ್ಣ-ರಾಜ್ ಅಭಿನಯಿಸಿದ್ದ ಈ ಚಿತ್ರ ಬಿಡುಗಡೆಯಾಗಿತ್ತು

  By Pavithra
  |

  ಮಾರ್ಚ್ 17....ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅಭಿಮಾನಿಗಳ ತಮ್ಮ ಹುಟ್ಟುಹಬ್ಬದ ದಿನವನ್ನ ಬೇಕಾದರೇ ಮರೆತು ಹೋಗ್ತಾರೆ, ಆದ್ರೆ, ಅಪ್ಪು ಬರ್ತಡೇ ದಿನವನ್ನ ಬಹುಶಃ ಮರೆಯಲ್ಲ ಅನಿಸುತ್ತೆ.

  ಇಂದು ಅಪ್ಪು ಅಭಿಮಾನಿಗಳು ಎಲ್ಲ ಕಡೆಯೂ ಪವರ್ ಸ್ಟಾರ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈ ದಿನವನ್ನೇ ಅಭಿಮಾನಿಗಳಿಗೆ ಮೀಸಲಾಗಿಟ್ಟು ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ರಾಜ್ ಭಕ್ತರ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೆಲ್ಲ ಅಪ್ಪು ಜನುಮದಿನದ ಸಂಭ್ರಮ.

  ರಾಜಕುಮಾರನನ್ನ ನೋಡಲು '400 ಕಿ.ಮೀ'ನಿಂದ ಬಂದ ಅಭಿಮಾನಿ

  ಈಗ ವಿಷ್ಯ ಏನಪ್ಪಾ ಅಂದ್ರೆ, ಮಾರ್ಚ್ 17 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾ ರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿದ್ದ ಚಿತ್ರವೊಂದು ತೆರೆಕಂಡಿತ್ತು.

  ಹೌದು, ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯಿಸಿದ್ದ 'ಗಂಧದ ಗುಡಿ-2' ಚಿತ್ರ 1994ರ ಮಾರ್ಚ್ 17 ರಂದು ತೆರೆಕಂಡಿತ್ತು. ಬೆಂಗಳೂರಿನ ಕಲ್ಪನಾ ಚಿತ್ರ ಮಂದಿರದಲ್ಲಿ 100 ದಿನ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ಅಣ್ಣಾವ್ರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಗೌರವ ಪಾತ್ರ ನಿಭಾಯಿಸಿದ್ದರು.

  ಇದಕ್ಕು ಮುಂಚೆ 1973 ರಲ್ಲಿ ರಾಜ್ ಕುಮಾರ್ ಅವರು 'ಗಂಧದ ಗುಡಿ' ಮೊದಲ ಭಾಗವನ್ನ ಮಾಡಿದ್ದರು. ಮೊದಲ ಚಿತ್ರವನ್ನ ನಿರ್ದೇಶನ ಮಾಡಿದ್ದ ವಿಜಯ್ ಅವರೇ ಶಿವಣ್ಣನ 'ಗಂಧದ ಗುಡಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಪುನೀತ್ ಹುಟ್ಟುಹಬ್ಬದ ದಿನ ಬಂದಿತ್ತು ಎಂಬ ಒಂದು ಸಣ್ಣ ಅಭಿಮಾನಿಗಳಿಗಾಗಿ ಅಷ್ಟೇ.

  English summary
  Hatrick hero Shivarajkumar and dr rajkumar Starrer Gandhada Gudi 2 Movie has released on march 17th, 1994. march 17th is Puneeth Rajkumar Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X