ಯಾವ ಕಾಲ ಆದರೇನು, ಅಣ್ಣಾವ್ರ ಕ್ರೇಜ್ ಗೆ ಕೊನೆಯೇ ಇಲ್ಲ

ಸಿನಿಮಾದಲ್ಲಿ ಹಣಕ್ಕಿಂತ ಅಭಿಮಾನ ದೊಡ್ಡದು. ಅದರಲ್ಲಿಯೂ ಕನ್ನಡದ ಜನ ಅಣ್ಣಾವ್ರ ಮೇಲೆ ಇಟ್ಟಿರುವ ಅಭಿಮಾನ ಎಂದಿಗೂ ಕಡಿಮೆ ಆಗುವಂತದಲ್ಲ. ಅದನ್ನು ಮತ್ತೆ ಸಾಬೀತು ಮಾಡಿದ್ದು 'ಗಂಧದ ಗುಡಿ' ಸಿನಿಮಾ.

ರಾಜ್ ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. 1973ರ ಈ ಸಿನಿಮಾಗೆ ಇಂದಿಗೂ ದೊಡ್ಡ ಕ್ರೇಜ್ ಇದೆ. ಅದು ಯಾವ ಮಟ್ಟಕ್ಕೆ ಎಂಬುದು ತಿಳಿಯಬೇಕು ಅಂತ ಅಣ್ಣಾವ್ರ ಕಟ್ ಔಟ್ ಅನ್ನು ಒಮ್ಮೆ ಗಮನಿಸಿ.

ಚಿತ್ರದ ರೀ ರಿಲೀಸ್ ವಿಶೇಷವಾಗಿ ರಾಜ್ ಕುಮಾರ್ ಅಭಿಮಾನಿಗಳು ನಿನ್ನೆ (ಭಾನುವಾರ) ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ರಾಜ್ ಕುಮಾರ್ ಕಟ್ ಔಟ್ ಗೆ ಹಾರ ಹಾಕಿ, ಪರದೆ ಮೇಲೆ ಅಣ್ಣಾವ್ರು ಬಂದಾಗ ಕುಣಿದು, ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

gandhada gudi kannada movie craze

ಇನ್ನು ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಇದ್ದ ಹಬ್ಬದ ವಾತಾವರಣ, ಆ ಅಭಿಮಾನ ನೋಡಿದರೆ ಯಾವ ಕಾಲ ಆದರೇನು, ಅಣ್ಣಾವ್ರ ಕ್ರೇಜ್ ಗೆ ಕೊನೆಯೇ ಇಲ್ಲ ಅನಿಸಿ ಬಿಡುತ್ತದೆ.

gandhada gudi kannada movie craze

ಅಂದಹಾಗೆ, 'ಗಂಧದ ಗುಡಿ' ಮೊದಲು ಬಿಡುಗಡೆಯಾಗಿದ್ದು 1973ರಲ್ಲಿ. ಎಂ ಪಿ ಶಂಕರ್ ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದರು. ವಿಜಯ್ ನಿರ್ದೇಶನ ಚಿತ್ರಕ್ಕಿತ್ತು. ರಾಜ್ ಕುಮಾರ್, ವಿಷ್ಣುವರ್ಧನ್, ಕಲ್ಪನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೇ ಸಿನಿಮಾ ಹಿಂದಿಯಲ್ಲಿ 'ಕರ್ತವ್ಯ' ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು.

More from Filmibeat

English summary
Kannada actor Dr.Rajkumar and Vishnuvardhan's super hit movie 'Gandhada Gudi' craze. The movie is re released in September 13th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X