ಗಣೇಶ ಹಬ್ಬಕ್ಕೆ ರಾಜ್, ವಿಷ್ಣು ಅಭಿಮಾನಿಗಳಿಗೆ ಕಾದಿದೆ ದೊಡ್ಡ ಅಚ್ಚರಿ!

By Naveen

ಓಲ್ಡ್ ಇಸ್ ಗೋಲ್ಡ್ ಎನ್ನುವ ಹಾಗೆ ಹಳೆ ಸಿನಿಮಾಗಳನ್ನು ಇಂದಿಗೂ ಜನ ಇಷ್ಟ ಪಟ್ಟು ನೋಡುತ್ತಾರೆ. ಟಿವಿಯಲ್ಲಿ ಸಿನಿಮಾ ಬರುತ್ತಿದ್ದರು ಕಣ್ಣು ಮಿಟುಕಿಸದಂತೆ ನೋಡುತ್ತಿರುತ್ತಾರೆ. ಅದೇ ಕಾರಣಕ್ಕೊ ಏನೋ ಕನ್ನಡದಲ್ಲಿ ಇದೀಗ ಮತ್ತೆ ಮತ್ತೆ ಹಳೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ.

ನಟ ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಸಿನಿಮಾ ಜುಲೈ ತಿಂಗಳಿನಲ್ಲಿ ಮರು ಬಿಡುಗಡೆಯಾಗಿತ್ತು. ಹೊಸ ಸಿನಿಮಾಗಳಿಗೆ ಸವಾಲು ಹಾಕುವ ರೀತಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಹೌಸ್ ಫುಲ್ ಪ್ರದರ್ಶನ ಕಂಡ ಈ ಸಿನಿಮಾ ಒಳ್ಳೆಯ ಚಿತ್ರಗಳ ತಾಕತ್ತು ಏನು ಎಂಬುದನ್ನು ಸಾಬೀತು ಮಾಡಿತ್ತು.

ಆ ಸಿನಿಮಾದ ಬಳಿಕ ಕಳೆದ ಶುಕ್ರವಾರ ತಾನೇ ರಾಜ್ ಕುಮಾರ್ ಅವರ 'ಎರಡು ಕನಸು' ಮತ್ತೆ ತೆರೆಗೆ ಬಂದಿತ್ತು. ಒಂದು ವಿಷ್ಣುವರ್ಧನ್ ಚಿತ್ರ, ಒಂದು ರಾಜ್ ಕುಮಾರ್ ಸಿನಿಮಾದ ನಂತರ ಈಗ ಇವರಿಬ್ಬರ ಅಭಿಮಾನಿಗಳಿಗೆ ಮತ್ತೊಂದು ಅಚ್ಚರಿಯ ವಿಷಯ ಕಾದಿದೆ. ಮುಂದೆ ಓದಿ....

'ಗಂಧದ ಗುಡಿ' ಚಿತ್ರ ಬಿಡುಗಡೆ

'ಗಂಧದ ಗುಡಿ' ಚಿತ್ರ ಬಿಡುಗಡೆ

ಈ ವರ್ಷದ ಗೌರಿ ಗಣೇಶ ಹಬ್ಬದ ವಿಶೇಷವಾಗಿ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ. ಹಬ್ಬದ ಸಂಭ್ರಮಕ್ಕೆ 'ಗಂಧದ ಗುಡಿ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. 'ನಾಗರಹಾವು' ಹಾಗೂ 'ಎರಡು ಕನಸು' ಬಳಿಕ ಈ ಚಿತ್ರ ಅಭಿಮಾನಿಗಳ ಮುಂದೆ ಬರುತ್ತಿದೆ.

ಸಪ್ಟೆಂಬರ್ 13ಕ್ಕೆ ರಿಲೀಸ್

ಸಪ್ಟೆಂಬರ್ 13ಕ್ಕೆ ರಿಲೀಸ್

ಅಣ್ಣಾವ್ರ ಹಾಗೂ ಸಾಹಸಸಿಂಹನ ಭಕ್ತರು ಮತ್ತೆ 'ಗಂಧದ ಗುಡಿ' ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಬಹುದಾಗಿದೆ. ಈ ಚಿತ್ರ ಸಪ್ಟೆಂಬರ್ 13 ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಗಾಂಧಿನಗರದಲ್ಲಿ ಅನುಪಮ ಚಿತ್ರಮಂದಿರ ಮೈನ್ ಥಿಯೇಟರ್ ಆಗಿದೆ.

1973ರ ಸಿನಿಮಾ

1973ರ ಸಿನಿಮಾ

'ಗಂಧದ ಗುಡಿ' ಮೊದಲು ಬಿಡುಗಡೆಯಾಗಿದ್ದು 1973ರಲ್ಲಿ. ಎಂ ಪಿ ಶಂಕರ್ ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದರು. ವಿಜಯ್ ನಿರ್ದೇಶನ ಚಿತ್ರಕ್ಕಿತ್ತು. ರಾಜ್ ಕುಮಾರ್, ವಿಷ್ಣುವರ್ಧನ್, ಕಲ್ಪನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೇ ಸಿನಿಮಾ ಹಿಂದಿಯಲ್ಲಿ 'ಕರ್ತವ್ಯ' ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು.

75ಕ್ಕೂ ಹೆಚ್ಚು ಚಿತ್ರಮಂದಿರ

75ಕ್ಕೂ ಹೆಚ್ಚು ಚಿತ್ರಮಂದಿರ

ಹಬ್ಬದ ವಿಶೇಷವಾಗಿ ಬರುತ್ತಿರುವ 'ಗಂಧದ ಗುಡಿ' ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 75ಕ್ಕೂ ಹೆಚ್ಚು ಚಿತ್ರಮಂದಿರ ಸಿನಿಮಾ ತೆರೆ ಕಾಣುತ್ತಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡರಲ್ಲಿಯೂ ಸಿನಮಾವನ್ನು ಬಿಡುಗಡೆ ಮಾಡಲಾಗಿದೆ.

ವಿಷ್ಣು ಹುಟ್ಟುಹಬ್ಬಕ್ಕೆ ಸಿನಿಮಾ

ವಿಷ್ಣು ಹುಟ್ಟುಹಬ್ಬಕ್ಕೆ ಸಿನಿಮಾ

ಗಣೇಶ ಹಬ್ಬದ ಜೊತೆಗೆ ಇದೇ ತಿಂಗಳ 18ಕ್ಕೆ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಇದೆ. ಸಿನಿಮಾ ಸಪ್ಟೆಂಬರ್ 13 ರಂದು ರಿಲೀಸ್ ಆಗುತ್ತಿದ್ದು, ಅಭಿಮಾನಿಗಳ ಆನಂದಕ್ಕೆ ಮತ್ತೊಂದು ಕಾರಣ ಸಿಕ್ಕಿದೆ. 'ನಾಗರಹಾವು' ಸಿನಿಮಾಗೆ ಸಿಕ್ಕ ದೊಡ್ಡ ಯಶಸ್ಸು ಈ ಚಿತ್ರಗಳ ಬಿಡುಗಡೆಗೆ ಕಾರಣ ಆಗಿರಬಹುದು.

More from Filmibeat

English summary
Kannada actor Dr.Rajkumar and Vishnuvardhan's super hit movie 'Gandhada Gudi' will be re-releasing on September 13th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X