For Quick Alerts
  ALLOW NOTIFICATIONS  
  For Daily Alerts

  2022ರಲ್ಲಿ ಬಿಡುಗಡೆಯಾದ ಈ 4 ಚಿತ್ರಗಳು ನನ್ನ ಫೇವರಿಟ್ ಎಂದ ರಿಷಬ್ ಶೆಟ್ಟಿ

  |

  ಕಾಂತಾರ ಮೂಲಕ ರಿಷಬ್ ಶೆಟ್ಟಿ ಇಡೀ ದೇಶದ ಮನಗೆದ್ದಿದ್ದಾರೆ ಎಂದೇ ಹೇಳಬಹುದು. ಬುಕ್ ಮೈ ಶೋನಲ್ಲಿ ದಾಖಲೆಯ ರೇಟಿಂಗ್, ಕರ್ನಾಟಕದಲ್ಲಿ ಅತಿಹೆಚ್ಚು ಟಿಕೆಟ್ ಸೇಲ್ ಹಾಗೂ ವಿಶ್ವದಾದ್ಯಂತ 400 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಚಿತ್ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡರೂ ಸಹ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಭಾರತದ ಚಿತ್ರಗಳ ಟಾಪ್ ಹತ್ತರ ಪಟ್ಟಿಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡಿದೆ.

  ಈ ಮಟ್ಟಕ್ಕೆ ಅಬ್ಬರಿಸಿರುವ ಕಾಂತಾರ ಹಿಂದಿನ ಮಾಸ್ಟರ್ ಮೈಂಡ್ ಎಂದರೆ ಅದು ರಿಷಬ್ ಶೆಟ್ಟಿ. ನಟನೆ ಮಾತ್ರವಲ್ಲದೇ ನಿರ್ದೇಶನವನ್ನೂ ಸಹ ಮಾಡಿ ಈ ಮಟ್ಟಿಗಿನ ಯಶಸ್ಸನ್ನು ಸಾಧಿಸುವುದೆಂದರೆ ಸುಲಭದ ಮಾತಲ್ಲ. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕನಿಗೆ ಭರಪೂರ ಮನರಂಜನೆ ನೀಡುವಂತ ಕತೆಯನ್ನು ಹೆಣೆದು ನಿರ್ದೇಶಿಸಿ ನಟಿಸಿದ ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್‌ನಲ್ಲಿನ ತಮ್ಮ ನಟನೆಗೆ ಬಹುಪರಾಕ್ ಗಿಟ್ಟಿಸಿಕೊಂಡರು.

  ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ ಓಟಿಟಿಗೆ ಬಂದ ನಂತರವೂ ದೊಡ್ಡ ಪ್ರಶಂಸೆ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರದ ಕುರಿತ ಚರ್ಚೆಗಳು ಪ್ರತಿದಿನ ನಡೆಯುತ್ತಿದ್ದು, ಕಾಂತಾರ ಹಿಂದಿ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕಾರಣ ರಿಷಬ್ ಶೆಟ್ಟಿ ನೆಟ್‌ಫ್ಲಿಕ್ಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಯಾವ ಚಿತ್ರಗಳು ಇಷ್ಟವಾದವು ಎಂದು ತಿಳಿಸಿದ್ದಾರೆ.

   ಗಂಧದ ಗುಡಿ ಮೊದಲ ಫೇವರಿಟ್

  ಗಂಧದ ಗುಡಿ ಮೊದಲ ಫೇವರಿಟ್

  ಸಂದರ್ಶಕರು ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಕಾಂತಾರ ಹೊರತುಪಡಿಸಿ ನಿಮಗೆ ಯಾವ ಚಿತ್ರಗಳು ಇಷ್ಟವಾದವು ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ರಿಷಬ್ ಶೆಟ್ಟಿ ಮೊದಲಿಗೆ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಹೆಸರನ್ನು ಉಲ್ಲೇಖಿಸಿದರು. ಈ ಚಿತ್ರ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾಗಿತ್ತು ಹಾಗೂ ವಿಶೇಷವಾಗಿ ತನಗೆ ಕನೆಕ್ಟ್ ಆಯಿತು ಎಂದು ರಿಷಬ್ ಶೆಟ್ಟಿ ತಿಳಿಸಿದರು.

  ಉಳಿದ ಮೂರು ಚಿತ್ರಗಳು ಯಾವುವು?

  ಉಳಿದ ಮೂರು ಚಿತ್ರಗಳು ಯಾವುವು?

  ಇನ್ನೂ ಮುಂದುವರಿದು ಮಾತನಾಡಿದ ರಿಷಬ್ ಶೆಟ್ಟಿ ಇತ್ತೀಚೆಗಷ್ಟೆ ತಮಿಳಿನಲ್ಲಿ ಬಂದ ಲವ್ ಟುಡೇ ಚಿತ್ರ ತನಗೆ ಭಾರೀ ಇಷ್ಟವಾಯಿತು ಎಂದು ತಿಳಿಸಿದರು. ಇನ್ನು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಕೂಡ ತನಗೆ ಇಷ್ಟವಾಯಿತು ಎಂದ ರಿಷಬ್ ಶೆಟ್ಟಿ, ಗೆಳೆಯನ ಚಿತ್ರವಾದ ಕಾರಣ ಈ ಚಿತ್ರದ ಹೆಸರನ್ನು ಹೇಳುತ್ತಾನೆ ಎಂದು ಕೆಲವರು ಕಾಲೆಳೆಯುತ್ತಾರೆ ಎಂದು ನಕ್ಕರು. ಇನ್ನು ಅಂತಿಮವಾಗಿ ಕೆಜಿಎಫ್ ಚಾಪ್ಟರ್ 2 ಹೆಸರನ್ನು ತೆಗೆದುಕೊಂಡ ರಿಷಬ್ ಶೆಟ್ಟಿ ಈ ವರ್ಷ ಕನ್ನಡ ಚಿತ್ರರಂಗದ ಗೆಲುವು ಶುರುವಾಗಿದ್ದು ಅಲ್ಲಿಂದಲೇ ಎಂದರು.

  ಕಾಂತಾರ 2ನಲ್ಲಿ ರಿಷಬ್ ಬ್ಯುಸಿ

  ಕಾಂತಾರ 2ನಲ್ಲಿ ರಿಷಬ್ ಬ್ಯುಸಿ

  ಹೀಗೆ ದೇಶವ್ಯಾಪಿ ಕಾಂತಾರ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದ ರಿಷಬ್ ಶೆಟ್ಟಿ ಸದ್ಯ ಉಳಿದ ಚಿತ್ರಗಳನ್ನು ಕೈಬಿಟ್ಟು ಕಾಂತಾರದ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕಾಂತಾರ 2 ಚಿತ್ರ ಮಾಡುವ ಸಲುವಾಗಿ ಪಂಜುರ್ಲಿ ದೈವದ ಅನುಮತಿ ಕೇಳಿರುವ ರಿಷಬ್ ಶೆಟ್ಟಿಗೆ ಕೆಲ ‍ಷರತ್ತುಗಳ ಮೇರೆಗೆ ದೈವ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ.

  English summary
  Gandhada Gudi, Love today, 777 Charlie and KGF 2 are my favourite films in 2022 says Rishab Shetty.
  Tuesday, December 13, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X