ʻಅರಸುʼ ಹಾಡಿಗೆ ರಮ್ಯಾ ಡ್ಯಾನ್ಸ್: ಅಪ್ಪು ಈಗಲೂ ಜೀವಂತ ಎನ್ನುತ್ತಲೇ ನಟಿ ಭಾವುಕ!

By ಎಸ್ ಸುಮಂತ್

ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಹಾರ್ಟ್ ಫೆವರೀಟ್ ಜೋಡಿಗಳಿದ್ದವು. ಅದರಲ್ಲಿ ಅಪ್ಪು ಹಾಗೂ ರಮ್ಯಾ ಕೂಡ ಒಂದು. 'ಅಭಿ'ಯಿಂದ ಒಂದಾದ ಈ ಜೋಡಿ ಬ್ಯಾಕ್ ಟು ಬ್ಯಾಕ್ ಒಂದಾಗಿ ಹಿಟ್ ಸಿನಿಮಾಗಳನ್ನೇ ನೀಡಿತ್ತು. ಇಬ್ಬರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವೇ ಇತ್ತು. ಮತ್ತೆ ಮತ್ತೆ ಸಿನಿಮಾ ಮಾಡಲಿ ಎಂದೇ ಬಯಸುತ್ತಿದ್ದರು. ಈ ಜೋಡಿ ಮೂರು ಸಿನಿಮಾಗಳನ್ನು ಮಾಡಿ ಹಿಟ್ ಲಿಸ್ಟ್‌ಗೆ ಸೇರಿಸಿತ್ತು.

ಇಂದು ʻಗಂಧದ ಗುಡಿʼಯಲ್ಲಿ 'ಪುನೀತ ಪರ್ವ'ವನ್ನು ಇಡೀ ಚಿತ್ರರಂಗದ ಕುಟುಂಬವೇ ಸೆಲೆಬ್ರೇಟ್ ಮಾಡುತ್ತಿದೆ. ಅಪ್ಪುವಿನ ಕಡೆಯ ಸಿನಿಮಾ ಎಂಬ ನೋವಿದ್ದರು ಅಪ್ಪುವಿಗಾಗಿ ಎಲ್ಲರು ನಮನ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ರಮ್ಯಾ ಕೂಡ ಭಾಗಿಯಾಗಿದ್ದು, ನೃತ್ಯದ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

ರಮ್ಯಾ ಡ್ಯಾನ್ಸಿಗೆ ಇಡೀ ವೇದಿಕೆ ಖುಷ್

ರಮ್ಯಾ ಡ್ಯಾನ್ಸಿಗೆ ಇಡೀ ವೇದಿಕೆ ಖುಷ್

ರಮ್ಯಾ ರಾಜಕೀಯ ಪ್ರವೇಶಿಸಿದ ಮೇಲೆ ಚಿತ್ರರಂಗದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು. ಆ ಮಧ್ಯೆ ಫ್ಯಾನ್ಸ್ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. ಹಲವು ಬಾರಿ ಸೋಶಿಯಲ್ ಮೀಡಿಯಾದಲ್ಲೂ ಕಾಡಿದ್ದಾರೆ. ಆದಷ್ಟು ಬೇಗ ಸಿನಿಮಾ ರಂಗಕ್ಕೆ ವಾಪಾಸ್ ಬನ್ನಿ ಎಂದು ಪೀಡಿಸಿದ್ದರು. ಅವಾಗೆಲ್ಲಾ ಅಪ್ಪಯ್ಯ ಜಪ್ಪಯ್ಯ ಎಂದಿರಲಿಲ್ಲ. ಆದರೆ ಈಗ ರಾಜಕೀಯದಿಂದ ಅಂತರ ಪಡೆದುಕೊಂಡಿರುವ ರಮ್ಯಾ ತನ್ನ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಊರಿಗೊಬ್ಬಳೆ ಪದ್ಮಾವತಿಯಾಗಿ ಕುಣಿದಿದ್ದ ರಮ್ಯಾ ಲಾಂಗ್ ಗ್ಯಾಪ್‌ನ ಬಳಿಕ ಇವತ್ತು ಅಪ್ಪುಗಾಗಿ ಹೆಜ್ಜೆ ಹಾಕಿದ್ದಾರೆ.

'ಅರಸು' ಸಿನಿಮಾದ ಹಾಡಿಗೆ ಕುಣಿದ ರಮ್ಯಾ

'ಅರಸು' ಸಿನಿಮಾದ ಹಾಡಿಗೆ ಕುಣಿದ ರಮ್ಯಾ

'ಅರಸು' ಸಿನಿಮಾ ಎಲ್ಲರ ಫೇವರಿಟ್ ಸಿನಿಮಾದಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ. 'ಅರಸು' ಸಿನಿಮಾದ ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲ್ಲಿಲ್ಲ ಎಂಬ ಹಾಡಿಗೆ ರಮ್ಯಾ ನೃತ್ಯ ಮಾಡಿದ್ದಾರೆ. ರಮ್ಯಾ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಾರೆ ಎನ್ನುವಾಗಲೇ ಮತ್ತೊಂದು ಊರಿಗೊಬ್ಳೆ ಪದ್ಮಾವತಿ ರೀತಿಯ ಡ್ಯಾನ್ಸ್ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ವೇದಿಕೆ ಮೇಲೆ ಫುಲ್ ಫಿಲ್ ಆಗಲೇ ಇಲ್ಲ. ಆದರೂ ಅಪ್ಪುವಿಗಾಗಿ ರಮ್ಯಾ ಕುಣಿದಿದ್ದು ಖುಷಿ ಕೊಟ್ಟಿದೆ.

ರಮ್ಯಾರನ್ನು ಪರಿಚಯಿಸಿದ್ದ ಅಣ್ಣಾವ್ರ ಕುಟುಂಬ

ರಮ್ಯಾರನ್ನು ಪರಿಚಯಿಸಿದ್ದ ಅಣ್ಣಾವ್ರ ಕುಟುಂಬ

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ನಟಿಮಣಿಯರೆಂಬ ಹೆಸರು ಪಡೆದಿರುವವರು ಹಲವರಿದ್ದಾರೆ. 80-90 ದಶಕವನ್ನು ಆಳಿದ ನಟಿಮಣಿಯರಲ್ಲಿ ರಮ್ಯಾ ಕೂಡ ಒಬ್ಬರು. ಆದರೆ ರಮ್ಯಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕೂಡ ಇದೇ ಅಣ್ಣಾವ್ರ ಕುಟುಂಬ. ಅಪ್ಪು ಜೊತೆಗೆ 'ಅಭಿ' ಸಿನಿಮಾದಿಂದ ಬಂದ ರಮ್ಯಾ ಬಳಿಕ ಟಾಪ್ ಹೀರೋಯಿನ್ ಆಗಿ ಮಿಂಚಿದರು. ಅಪ್ಪು ಜೊತೆಗೇನೆ ಬ್ಯಾಕ್ ಟು ಬ್ಯಾಕ್, 'ಆಕಾಶ್', 'ಅರಸು' ಸಿನಿಮಾ ಮಾಡಿ ನಂಬರ್ ಒನ್ ಜೋಡಿಯಾಗಿ ಗುರುತಿಸಿಕೊಂಡರು. ಈ ಸಮಯದಲ್ಲಿ ಅಣ್ಣಾವ್ರ ಕುಟುಂಬವನ್ನು ನೆನೆದಿದ್ದಾರೆ. ಈವತ್ತು ಈ ವೇದಿಕೆ ಮೇಲೆ ನಿಂತಿದ್ದೀನಿ ಅಂದ್ರೆ ಇವರೆಲ್ಲ ನನಗೆ ಇಷ್ಟೊಂದು ಪ್ರೀತಿ, ಅಭಿಮಾನ ತೋರಿಸುತ್ತಾರೆ ಅಂದ್ರೆ ಅದಕ್ಕೆ ಡಾ. ರಾಜ್‌ಕುಮಾರ್ ಅವರ ಫ್ಯಾಮಿಲಿನೇ ಕಾರಣ. ಅಪ್ಪು, ಅಶ್ವಿನಿ, ರಾಘಣ್ಣ, ಶಿವಣ್ಣ ,ಗೀತಾ ಇಡೀ ಫ್ಯಾಮಿಲಿ. ಈಗ ಡಿಂಪಿ, ಧೀರನ್, ಯುವ, ಅಮ್ಮು ಅವರನ್ನೆಲ್ಲಾ ನೋಡಿದ್ರೆ ತುಂಬಾ ಖುಷಿ ಆಗುತ್ತೆ ಎಂದಿದ್ದಾರೆ.

ಅಪ್ಪು ನೆನೆದು ರಮ್ಯಾ ಭಾವುಕ

ಅಪ್ಪು ನೆನೆದು ರಮ್ಯಾ ಭಾವುಕ

ಡ್ಯಾನ್ಸ್ ಮೂಲಕ ನಮನ ಸಲ್ಲಿಸಿದ ರಮ್ಯಾ ಬಳಿಕ ಮಾತನಾಡಿ, "ಇದು ಒಂದು ತುಂಬಾ ಎಮೋಷನಲ್ ಮೂಮೆಂಟ್. ಎಲ್ಲರಿಗೂ ಗೊತ್ತಿರುವಂತ ವಿಚಾರ. ನಂಗೆ ಡಾನ್ಸ್ ಚೆನ್ನಾಗಿ ಬರಲ್ಲ. ಅಪ್ಪು ಜೊತೆ ಮಾಡುವಾಗ ಅವರೇ ಹೇಳಿ ಕೊಡುತ್ತಾ ಇದ್ರು. ರಮ್ಯಾ ಅವರೇ ಈ ಥರ ಮಾಡಿ. ಇನ್ನು ಸುಲಭ ಆಗುತ್ತೆ ಅಂತ. ಕಷ್ಟ ಆಗುತ್ತಾ ಇದ್ದಾಗ ಡ್ಯಾನ್ಸ್ ಮಾಸ್ಟರ್ ಬಳಿ ಹೋಗಿ ಹೇಳುತ್ತಾ ಇದ್ದರು. ಸ್ಟೆಪ್ ಚೇಂಜ್ ಮಾಡೋಣಾ ಮಾಸ್ಟರ್ ಪಾಪ ರಮ್ಯಾ ಅವರಿಗೆ ಕಷ್ಟ ಆಗುತ್ತೆ ಅಂತ. ಅಷ್ಟು ನಂಗೆ ಸಪೋರ್ಟಿವ್ ಕೋ ಸ್ಟಾರ್ ಅಂತಾನೆ ಹೇಳಬಹುದು. ಅಪ್ಪು ಮಿಸ್ ಮಾಡಿಕೊಂಡರೂ ಕೂಡ ಅವರ ಸಿನಿಮಾ ಮೂಲಕ, ಅಭಿಮಾನಿಗಳ ಮೂಲಕ ಅವರನ್ನು ನೋಡುವಾಗ ಅವರಿನ್ನು ಇನ್ನು ಬದುಕಿದ್ದಾರೆ ಅನ್ನಿಸುತ್ತೆ" ಎಂದು ಭಾವುಕರಾಗಿದ್ದಾರೆ.

More from Filmibeat

English summary
Gandhada Gudi Pre Release Event: Ramya Dance For Arasu Movie Song. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X