For Quick Alerts
  ALLOW NOTIFICATIONS  
  For Daily Alerts

  ಗಂಧದ ಗುಡಿ ಟ್ರೈಲರ್ ಬಿಡುಗಡೆ ದಿನಾಂಕ, ಸಮಯ ಪ್ರಕಟ; ಪ್ರಿ ರಿಲೀಸ್ ಕಾರ್ಯಕ್ರಮಕ್ಕೂ ಸ್ಕೆಚ್?

  |

  ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಇದೇ ತಿಂಗಳ 29ಕ್ಕೆ ಒಂದು ವರ್ಷ ತುಂಬಲಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದ ಅಪ್ಪು ಅಭಿಮಾನಿಗಳ ಪಾಲಿಗೆ ಅಪ್ಪು ನಿಧನದ ನಂತರ ಉಳಿದದ್ದು ಕೇವಲ 3 ಚಿತ್ರಗಳು ಮಾತ್ರ. ಆ ಪೈಕಿ ಈಗಾಗಲೇ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಚಿತ್ರಗಳು ಬಿಡುಗಡೆಯಾಗಿದ್ದು ಇನ್ನೊಂದು ಚಿತ್ರವಾದ ಗಂಧದ ಗುಡಿ ಮಾತ್ರ ಬಾಕಿ ಉಳಿದುಕೊಂಡಿದೆ.

  ರಾಜ್ ಕುಟುಂಬಕ್ಕೂ ಹಾಗೂ ಗಂಧದ ಗುಡಿ ಶೀರ್ಷಿಕೆಗೂ ಹಿಂದಿನಿಂದಲೂ ಸಂಬಂಧವಿದ್ದು ವರನಟ ಡಾ. ರಾಜ್ ಕುಮಾರ್ ಹಾಗೂ ಶಿವರಾಜ್‌ಕುಮಾರ್ ಬಳಿಕ ಇದೀಗ ಅಪ್ಪು ಕೂಡ ಗಂಧದ ಗುಡಿ ಶೀರ್ಷಿಕೆ ಅಡಿಯಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರ ಅಣ್ಣಾವ್ರ ಹಾಗೂ ಶಿವಣ್ಣ ಅವರ ಗಂಧದ ಗುಡಿಯ ಹಾಗೆ ಕಮರ್ಷಿಯಲ್ ಚಿತ್ರವಲ್ಲ ಬದಲಾಗಿ ಇದೊಂದು ಡಾಕ್ಯುಮೆಂಟರಿ. ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ತೆರೆಮೇಲೆ ತರಲು ಮುಂದಾಗಿದೆ ಗಂಧದಗುಡಿ ಚಿತ್ರತಂಡ.

  ಜಂಬೂಸವಾರಿಗೆ ಕಳೆತಂದ 'ಕಲಾತಂಡಗಳು’, ಗಮನ ಸೆಳೆದ ಪುನೀತ್ ರಾಜ್‌ಕುಮಾರ್ ಸ್ಥಬ್ಧಚಿತ್ರ!ಜಂಬೂಸವಾರಿಗೆ ಕಳೆತಂದ 'ಕಲಾತಂಡಗಳು’, ಗಮನ ಸೆಳೆದ ಪುನೀತ್ ರಾಜ್‌ಕುಮಾರ್ ಸ್ಥಬ್ಧಚಿತ್ರ!

  ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಸ್ವತಃ ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಈಗಾಗಲೇ ಚಿತ್ರದ ಟೀಸರ್ ಒಂದು ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿತ್ತು. ಇದೊಂದು ಸಾಮಾನ್ಯ ಕಿರುಚಿತ್ರವೆಂದು ಕಾಣುತ್ತದೆ ಎಂದುಕೊಂಡಿದ್ದವರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವ ಮಟ್ಟಿಗೆ ಟೀಸರ್ ಸಖತ್ ರಿಚ್ ಆಗಿ ಮೂಡಿ ಬಂದಿತ್ತು.

  ಇನ್ನು ಗಂಧದ ಗುಡಿ ಚಿತ್ರವನ್ನು ಇದೇ ತಿಂಗಳ 28ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಈ ಹಿಂದೆಯೇ ದಿನಾಂಕವನ್ನು ನಿಗದಿಪಡಿಸಿತ್ತು. ಹೀಗೆ ಅಪ್ಪು ಅವರ ಅಂತಿಮ ಹಾಗೂ ಅದ್ಭುತ ಪಯಣವನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮುನ್ನ ಟ್ರೈಲರ್ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೌದು, ಗಂಧದ ಗುಡಿ ಟ್ರೈಲರ್ ಇದೇ ತಿಂಗಳ 9ರಂದು ಬೆಳಿಗ್ಗೆ 10.19ಕ್ಕೆ ಪಿಆರ್ ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

  ಇತ್ತ ಅಪ್ಪು ಅಭಿಮಾನಿಗಳು ಈಗಾಗಲೇ ಗಂಧದಗುಡಿ ಹಬ್ಬ ಎಂಬ ಅಭಿಯಾನವನ್ನು ಆರಂಭಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾದ ದಿನ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದಾರೆ. ಇದು ಅಪ್ಪು ಅಭಿನಯದ ಕೊನೆಯ ಚಿತ್ರದ ಟ್ರೈಲರ್ ಹಾಗೂ ಮತ್ತೆಂದೂ ನಮಗೆ ಅಪ್ಪು ಅಭಿನಯದ ಹೊಸ ಚಿತ್ರದ ಟ್ರೈಲರ್ ವೀಕ್ಷಿಸುವ ಅವಕಾಶ ಸಿಗುವುದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

  ಇನ್ನು ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಇದೇ ತಿಂಗಳ 21ಕ್ಕೆ ಆಯೋಜನೆ ಮಾಡಲಾಗಿದೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ.

  English summary
  Puneeth Rajkumar's last movie Gandhada Gudi trailer releasing on October 9 and pre release event likely to be held on October 21 . Read on
  Friday, October 7, 2022, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X