twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನ ಗಾಂಧಿನಗರದ ರಸ್ತೆ ಇನ್ನು ಮುಂದೆ 'ವಜ್ರೇಶ್ವರಿ' ರಸ್ತೆ ಆಗಲಿದೆ

    By Pavithra
    |

    ಬೆಂಗಳೂರಿನ ಗಾಂಧಿನಗರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಗಾಂಧಿನಗರ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಕನ್ನಡ ಸಿನಿಮಾರಂಗ. ಇನ್ನು ಕನ್ನಡ ಚಿತ್ರರಂಗ ನೆನಪಾದ ಮೇಲೆ ಡಾ ರಾಜ್ ಕುಮಾರ್ ಕೂಡ ನೆನಪಾಗಲೇ ಬೇಕು. ಸದ್ಯ ಗಾಂಧಿನಗರದ 6ನೇ ಕ್ರಾಸ್ ನಲ್ಲಿ 'ವಜ್ರೇಶ್ವರಿ ಕಂಬೈನ್ಸ್' ಹಾಗೂ 'ಡಾ.ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್' ಇದೆ. ಅದೇ ಕಾರಣಕ್ಕೆ ಈಗ ಕಾಳಿದಾಸ ರಸ್ತೆಯ ಕೊನೆಯಲ್ಲಿ ಪ್ರಾರಂಭವಾಗುವ 6 ನೇ ಕ್ರಾಸ್ ರಸ್ತೆಗೆ 'ವಜ್ರೇಶ್ವರಿ ರಸ್ತೆ' ಎಂದು ನಾಮಕರಣ ಮಾಡಿ ಎಂದು ಸಂಸದ 'ಪಿ ಸಿ ಮೋಹನ್' 'ಬಿ ಬಿ ಎಂ ಪಿ' ಗೆ ಮನವಿ ಸಲ್ಲಿಸಿದ್ದಾರೆ.

    ಗಾಂಧಿನಗರದ ಆರನೇ ಕ್ರಾಸ್ ನಲ್ಲಿ ಸಾಕಷ್ಟು ಸಿನಿಮಾ ನಿರ್ಮಾಣ ಸಂಸ್ಥೆಗಳಿವೆ 'ವಜ್ರೇಶ್ವರಿ ಕಂಬೈನ್ಸ್' ಸೇರಿದಂತೆ, 'ರಾಮು ಎಂಟರ್ ಪ್ರೈಸಸ್', 'ಮೈಸೂರ್ ಟಾಕೀಸ್', 'ಕೆಸಿಎನ್ ಗೌಡ ಆಫೀಸ್', 'ಈಶ್ವರಿ ಪಿಚ್ಚರ್ಸ್ ಆಫ್ ವೀರಸ್ವಾಮಿ', 'ಹಂಸ ಪಿಚ್ಚರ್ಸ್', 'ವಿಜಯ ಪಿಚ್ಚರ್ಸ್', 'ಜಯಣ್ಣ ಕಂಬೈನ್ಸ್' , 'ಎನ್ ಕುಮಾರ್ ಆಫೀಸ್' ಹೀಗೆ ಸಾಕಷ್ಟು ಸಂಸ್ಥೆಗಳು ಆರನೇ ಕ್ರಾಸ್ ನಲ್ಲಿರುವ ಕಾರಣ 'ವಜ್ರೇಶ್ವರಿ ರಸ್ತೆ' ಎಂದು ನಾಮಕರಣ ಮಾಡಲು ನಿರ್ಧರಿಸಿದ್ದಾರೆ.

    Gandhi nagar to be renamed in vajreshwari raste

    'ವಜ್ರೇಶ್ವರಿ' ಮುಂಬೈನಲ್ಲಿರುವ ಶಕ್ತಿ ದೇವತೆ. ಮೊದಲಿಗೆ 'ಡಾ ರಾಜ್ ಕುಮಾರ್' ಅವರ ನಿರ್ಮಾಣ ಸಂಸ್ಥೆಗೆ 'ರಾಜ್ ಕುಮಾರ್ ಕಂಬೈನ್ಸ್' ಅಂತ ಹೆಸರಿಡಲು ನಿರ್ಧಾರ ಮಾಡಿದ್ದರಂತೆ. ಆದರೆ ರಾಜ್ ಕುಮಾರ್ ದೇವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಲು ಸೂಚಿಸಿದ್ದರಂತೆ. ಆದ್ದರಿಂದ ಪಾರ್ವತಮ್ಮ ಅವರು 'ವಜ್ರೇಶ್ವರಿ ಕಂಬೈನ್ಸ್' ಮೂಲಕ ಸಿನಿಮಾ ನಿರ್ಮಾಣ ಪ್ರಾರಂಭ ಮಾಡಿದರು.

    Gandhi nagar to be renamed in vajreshwari raste

    ಈಗಾಗಲೇ 'ಬಿ ಬಿ ಎಂ ಪಿ'ಯ ಕೌನ್ಸಿಲ್ ಮಿಟಿಂಗ್ ನಲ್ಲಿ ರಸ್ತೆ ನಾಮಕರಣ ಮಾಡುವ ಬಗ್ಗೆ ಯಾವುದೇ ತಕರಾರು ಇಲ್ಲದೆ ಎಲ್ಲರೂ ಒಮ್ಮತವನ್ನು ಸೂಚಿಸಿದ್ದಾರೆ. ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಸಿನಿಮಾರಂಗಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ರಸ್ತೆಯ ಹೆಸರು ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಸದ್ಯ ಸರ್ಕಾರದ ಮುಂದೆ ಈ ಮನವಿ ಪತ್ರ ಸಲ್ಲಿಕೆಯಾಗಿದ್ದು, ಯಾರ ತಕರಾರು ಇಲ್ಲವಾದಲ್ಲಿ ಇನ್ನೇರೆಡು ತಿಂಗಳ ನಂತರ ಗಾಂಧಿನಗರದ 6 ನೇ ಕ್ರಾಸ್ ವಜ್ರೇಶ್ವರಿ ರಸ್ತೆಯಾಗಿ ಬದಲಾಗೋದು ಗ್ಯಾರೆಂಟಿ.

    English summary
    PC Mohan submitted the appeal to 'BBMP'. The 6th Cross Road of Gandhinagar would be renamed Vajreshwari Road.
    Friday, December 15, 2017, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X