For Quick Alerts
  ALLOW NOTIFICATIONS  
  For Daily Alerts

  'ಗಂಡುಗಲಿ ಮದಕರಿ ನಾಯಕ' ಚಿತ್ರದಲ್ಲಿ ಎಷ್ಟು ಹಾಡುಗಳಿವೆ?

  |
  Hamsalekha gave a good news for Darshan fans | FILMIBEAT KANNADA

  ದರ್ಶನ್ ಅಭಿನಯದ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಮುಹೂರ್ತಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಸಿನಿಮಾ ಆಲ್ಬಂ ಕುರಿತು ಸುದ್ದಿಯೊಂದು ಹೊರಬಂದಿದೆ.

  'ಗಂಡುಗಲಿ ಮದಕರಿ ನಾಯಕ' ಸಿನಿಮಾದಲ್ಲಿ ಎಷ್ಟು ಹಾಡುಗಳು ಇರುತ್ತವೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಸಿನಿಮಾದಲ್ಲಿ 7 ಹಾಡುಗಳು ಇರಲಿದೆಯಂತೆ. ನಾದಬ್ರಹ್ಮ ಹಂಸಲೇಖ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸಾಹಿತ್ಯ ಕೂಡ ಅವರೇ ಬರೆಯಲಿದ್ದಾರೆ. ಬಹಳ ವರ್ಷಗಳ ನಂತರ ಹಂಸಲೇಖ ದೊಡ್ಡ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.

  'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ! 'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!

  ಮುಂಬೈ ಪ್ರೊಡಕ್ಷನ್ಸ್ ಸಂಸ್ಥೆಯೊಂದಿಗೆ ಚಿತ್ರತಂಡ ಕೈ ಜೋಡಿಸಿದೆ. ಸಿನಿಮಾದ ಚಿತ್ರೀಕರಣವನ್ನು ಮುಂಬೈನಲ್ಲಿಯೇ ಮಾಡಬೇಕು ಎನ್ನುವ ಪ್ಲಾನ್ ಇದೆಯಂತೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಿಂದಿ ಚಿತ್ರರಂಗದ ಜೊತೆಗೆ ಒಡನಾಟ ಹೊಂದಿದ್ದು, ಮುಂಬೈನಲ್ಲಿ ನಿರ್ಮಾಣ ಕಾರ್ಯ ನಡೆಯುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಅಂದಹಾಗೆ, ಈ ಸಿನಿಮಾದ ಮೂಲಕ ಇಬ್ಬರು ದಿಗ್ಗಜರು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಹಾಗೂ ಹಂಸಲೇಖ ಇಬ್ಬರು ಒಂದು ಹಿಟ್ ಸಿನಿಮಾ ನೀಡಿ ಎಷ್ಟೋ ವರ್ಷಗಳು ಆಗಿವೆ.

  'ಮದಕರಿ'ಗೆ ನಾಯಕಿ ಯಾರು?: ಅತಿ ಹೆಚ್ಚು ಜನ ಹೇಳಿದ್ದು ಈಕೆಯ ಹೆಸರು'ಮದಕರಿ'ಗೆ ನಾಯಕಿ ಯಾರು?: ಅತಿ ಹೆಚ್ಚು ಜನ ಹೇಳಿದ್ದು ಈಕೆಯ ಹೆಸರು

  'ಗಂಡುಗಲಿ ಮದಕರಿ ನಾಯಕ' ಸಿನಿಮಾ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ಯಾರು ಎನ್ನುವ ಕುತೂಹಲ ಮೂಡಿದೆ. ನಟಿ ರಮ್ಯಾ, ಕೀರ್ತಿ ಸುರೇಶ್ ಹೆಸರು ಕೇಳಿ ಬರುತ್ತಿದೆ. ಡಿಸೆಂಬರ್ 2 ರಂದು ಸಿನಿಮಾ ಲಾಂಚ್ ಆಗುತ್ತಿದೆ.

  English summary
  Gandugali Madakari Nayaka movie audio album have 7 songs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X