For Quick Alerts
  ALLOW NOTIFICATIONS  
  For Daily Alerts

  'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!

  |

  'ಯಜಮಾನ', 'ಕುರುಕ್ಷೇತ್ರ', 'ಒಡೆಯ', 'ರಾಬರ್ಟ್' ನಂತರ ನಟ ದರ್ಶನ್ ಐತಿಹಾಸಿಕ ಸಿನಿಮಾ ಮಾಡುತ್ತಿದ್ದಾರೆ. 'ಗಂಡುಗಲಿ ಮದಕರಿ ನಾಯಕ' ದರ್ಶನ್ ಮುಂದಿನ ಸಿನಿಮಾವಾಗಿದ್ದು, ಡಿಸೆಂಬರ್ 2 ರಂದು ಈ ಸಿನಿಮಾ ಲಾಂಚ್ ಆಗುತ್ತಿದೆ.

  'ಗಂಡುಗಲಿ ಮದಕರಿ ನಾಯಕ' ಸಿನಿಮಾ ದರ್ಶನ್ ಗೆ ಬಹಳ ಮುಖ್ಯ. ಯಾಕೆಂದರೆ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ನಂತರ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?

  ದರ್ಶನ್ ಮಾತ್ರವಲ್ಲದೆ, ಈ ಸಿನಿಮಾ ಇನ್ನು ಇಬ್ಬರಿಗೆ ಮುಖ್ಯವಾಗಿದೆ. ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಇಬ್ಬರ ಕೆರಿಯರ್ ಗೆ ಈ ಸಿನಿಮಾ ಪ್ರಮುಖವಾಗಿ ಬೇಕಾಗಿದೆ. ಸಿನಿಮಾ ಗೆದ್ದರೆ, ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಸೆಕೆಂಡ್ ಇನ್ನಿಂಗ್ ಶುಭಾರಂಭವಾಗಲಿದೆ.

  ರಾಜೇಂದ್ರ ಸಿಂಗ್ ಬಾಬು ಹಿಟ್ ನೀಡಿ ದಶಕಗಳು ಕಳೆದಿವೆ

  ರಾಜೇಂದ್ರ ಸಿಂಗ್ ಬಾಬು ಹಿಟ್ ನೀಡಿ ದಶಕಗಳು ಕಳೆದಿವೆ

  ಸ್ಯಾಂಡಲ್ ವುಡ್ ಕಂಡ ಪ್ರತಿಭಾವಂತ ನಿರ್ದೇಶಕರಲ್ಲಿ ರಾಜೇಂದ್ರ ಸಿಂಗ್ ಬಾಬು ಪ್ರಮುಖರು. 'ಮುತ್ತಿನ ಹಾರ', 'ಬಂಧನ', 'ಅಂತ', 'ಯುಗ ಪುರುಷ' ಹೀಗೆ ಸಾಕಷ್ಟು ಮರೆಯಲಾಗದ ಸಿನಿಮಾದ ಸೃಷ್ಟಿಕರ್ತ ಅವರು. ಆದರೆ, ರಾಜೇಂದ್ರ ಸಿಂಗ್ ಬಾಬು ಒಂದು ಹಿಟ್ ಸಿನಿಮಾ ನೀಡಿ ಹತ್ತು ವರ್ಷಕ್ಕೂ ಮೇಲೆ ಆಗಿದೆ. 'ಕುರಿಗಳು ಸಾರ್ ಕುರಿಗಳು', 'ಕೋತಿಗಳು ಸಾರ್ ಕೋತಿಗಳು' ನಂತರ ರಾಜೇಂದ್ರ ಸಿಂಗ್ ಬಾಬು ಗೆಲುವಿನ ಮುಖ ನೋಡಿಲ್ಲ.

  'ರಾಜಾ ಹುಲಿ' ನಂತರ ಹಂಸಲೇಖ ಗೆದ್ದಿಲ್ಲ

  'ರಾಜಾ ಹುಲಿ' ನಂತರ ಹಂಸಲೇಖ ಗೆದ್ದಿಲ್ಲ

  ನಾದ ಬ್ರಹ್ಮ ಹಂಸಲೇಖ ಸಂಗೀತದ ಗಣಿ. ಸಾಹಿತ್ಯದ ಧಣಿ. ಕನ್ನಡ ಚಿತ್ರರಂಗಕ್ಕೆ ಅವರ ಹಾಡುಗಳ ಕೊಡುಗೆ ಅಪಾರ. ಆದರೆ, ಇತ್ತೀಚಿಗೆ ಹಂಸಲೇಖ ಸಂಗೀತದ ನಾದ ಕೊಂಚ ಕಡಿಮೆ ಆಗಿದೆ. ಯಶ್ ನಟನೆಯ 'ರಾಜಾಹುಲಿ' ನಂತರ ಹಂಸಲೇಖ ಅವರ ಯಾವ ಸಿನಿಮಾದ ಹಾಡುಗಳು ಹಿಟ್ ಆಗಿಲ್ಲ. ಆ ನಂತರ ಹೆಚ್ಚು ಸಿನಿಮಾಗಳನ್ನು ಅವರು ಮಾಡಲು ಹೋಗಿಲ್ಲ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತಕ್ಕೆ ದಿನಾಂಕ ಫಿಕ್ಸ್ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತಕ್ಕೆ ದಿನಾಂಕ ಫಿಕ್ಸ್

  ದಿಗ್ಗಜ ಕಮ್ ಬ್ಯಾಕ್ ಗೆ ವೇದಿಕೆ ಸಿದ್ಧ

  ದಿಗ್ಗಜ ಕಮ್ ಬ್ಯಾಕ್ ಗೆ ವೇದಿಕೆ ಸಿದ್ಧ

  ಹೀಗಾಗಿ, ರಾಜೇಂದ್ರ ಸಿಂಗ್ ಬಾಬು ಹಾಗೂ ಹಂಸಲೇಖ ಇಬ್ಬರಿಗೂ ಈಗೊಂದು ಗೆಲವು ಬೇಕು. ಇಬ್ಬರ ಸಿನಿ ಜೀವನಕ್ಕೆ ಈ ಸಿನಿಮಾ ಬಹಳ ಮುಖ್ಯ. ತಮ್ಮನ್ನು ತಾವು ಮತ್ತೆ ಈ ಸಿನಿಮಾದ ಮೂಲಕ ಸಾಬೀತು ಮಾಡಿಕೊಳ್ಳಬೇಕಾಗಿದೆ. ತಮ್ಮ ಅನುಭವದ ಮೂಲಕ ಇಂದಿನ ಪ್ರೇಕ್ಷಕರನ್ನು ಸೆಳೆಯಬೇಕಾಗಿದೆ. 'ಗಂಡುಗಲಿ ಮದಕರಿ ನಾಯಕ' ಇಬ್ಬರ ಕಮ್ ಬ್ಯಾಕ್ ಗೆ ವೇದಿಕೆಯಾಗಿದೆ.

  ಹಿಟ್ ಜೋಡಿಗೆ ಮೆಗಾ ಸಿನಿಮಾ

  ಹಿಟ್ ಜೋಡಿಗೆ ಮೆಗಾ ಸಿನಿಮಾ

  ರಾಜೇಂದ್ರ ಸಿಂಗ್ ಬಾಬು ಹಾಗೂ ಹಂಸಲೇಖ ಒಟ್ಟಿಗೆ ಸೇರಿದರೆ ಆ ಸಿನಿಮಾದ ಹಾಡುಗಳು ಸೋತಾ ಮಾತೇ ಇಲ್ಲ. 'ಯುಗ ಪುರುಷ', 'ಬಣ್ಣದ ಗೆಜ್ಜೆ', 'ಮುತ್ತಿನ ಹಾರ' ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿವೆ. ಈ ಇಬ್ಬರು ಕಲಾಕಾರ್ ಗಳನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತೆ ಒಂದು ಮಾಡಿದ್ದಾರೆ. 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಮತ್ತು ಹಾಡುಗಳ ಮೇಲೆ ದೊಡ್ಡ ನಿರೀಕ್ಷೆ ಇದೆ. ಚಿತ್ರದ ಮುಹೂರ್ತ ಡಿಸೆಂಬರ್ 2 ರಂದು ಆಗಲಿದೆ.

  'ಕುದುರೆ ರೇಸಿಂಗ್'ನಲ್ಲಿ ಡಿ ಬಾಸ್ ದರ್ಶನ್: ನಿರ್ಮಾಪಕ ಪುಷ್ಕರ್ ಹೇಳಿದ್ದೇನು?'ಕುದುರೆ ರೇಸಿಂಗ್'ನಲ್ಲಿ ಡಿ ಬಾಸ್ ದರ್ಶನ್: ನಿರ್ಮಾಪಕ ಪುಷ್ಕರ್ ಹೇಳಿದ್ದೇನು?

  English summary
  Gandugali Madakari Nayaka movie is more important for director Rajendra Singh Babu and music director Hamsalekha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X