ಚಿತ್ರದುರ್ಗದಲ್ಲಿ 'ಗಂಡುಗಲಿ ಮದಕರಿನಾಯಕ' ಚಿತ್ರದ ಮುಹೂರ್ತ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಗಂಡುಗಲಿ ಮದಕರಿನಾಯಕ' ಚಿತ್ರದ ಮುಹೂರ್ತ ನಾಳೆ (ಡಿಸೆಂಬರ್ 2) ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯಲಿದೆ.
ಬೆಳಗ್ಗೆ 8.30ಕ್ಕೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಮದಕರಿನಾಯಕರ ಬಗ್ಗೆ ಸಿನಿಮಾ ಮಾಡುತ್ತಿದ್ದು, ಅದೇ ನೆಲದಲ್ಲಿ ಸಿನಿಮಾ ಶುಭಾರಂಭ ಆಗುತ್ತಿದೆ.
'ಕುರುಕ್ಷೇತ್ರ' ನಂತರ ಮತ್ತೊಂದು ಮಹತ್ವದ ಪಾತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಳಿಕ ಮತ್ತೆ ಐತಿಹಾಸಿಕ ಸಿನಿಮಾಗೆ ಕೈ ಹಾಕಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದು, ಅದ್ದೂರಿಯಾಗಿ ಚಿತ್ರ ಮೂಡಿ ಬರಲಿದೆಯಂತೆ.

ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಹಂಸಲೇಖ ಈ ಸಿನಿಮಾದ ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಇಬ್ಬರು ದಿಗ್ಗಜರಿಗೆ ಈ ಸಿನಿಮಾ ಕಮ್ ಬ್ಯಾಕ್ ಚಿತ್ರವಾಗಿದೆ. ಸಿನಿಮಾದಲ್ಲಿ 7 ಹಾಡುಗಳು ಇರಲಿದೆಯಂತೆ. ಸಿನಿಮಾದ ನಾಯಕಿಯ ಹೆಸರು ಇನ್ನು ಬಹಿರಂಗ ಆಗಿಲ್ಲ.

ಮುಂಬೈ ಪ್ರೊಡಕ್ಷನ್ಸ್ ಸಂಸ್ಥೆಯೊಂದಿಗೆ ಚಿತ್ರತಂಡ ಕೈ ಜೋಡಿಸಿದೆ. ಸಿನಿಮಾದ ಚಿತ್ರೀಕರಣವನ್ನು ಮುಂಬೈನಲ್ಲಿಯೇ ಮಾಡಬೇಕು ಎನ್ನುವ ಪ್ಲಾನ್ ಇದೆಯಂತೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಿಂದಿ ಚಿತ್ರರಂಗದ ಜೊತೆಗೆ ಒಡನಾಟ ಹೊಂದಿದ್ದು, ಮುಂಬೈನಲ್ಲಿ ನಿರ್ಮಾಣ ಕಾರ್ಯ ನಡೆಯುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











