'99' ಸಿನಿಮಾ ಪ್ರದರ್ಶನಕ್ಕೆ ಅಡ್ಡಿ: ಮಧ್ಯಾಹ್ನ ರಿಲೀಸ್ ಆದ ಗಣೇಶ್ ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಬಹು ನಿರೀಕ್ಷೆಯ 99 ಸಿನಿಮಾ ಇಂದು ರಾಜ್ಯದಾದ್ಯಂತ ತೆರೆಗೆ ಬರಲು ಸಜ್ಜಾಗಿತ್ತು. ಆದ್ರೆ ಚಿತ್ರ ರಿಲೀಸ್ ದಿನವೆ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಇಂದು ಬೆಳಗ್ಗೆ ಪ್ರಾರಂಭ ಆಗಬೇಕಿದ್ದ '99' ಸಿನಿಮಾ ಪ್ರದರ್ಶನ ರದ್ದಾಗಿದೆ.

ಮೇ 1 ರಂದು ಸಿನಿಮಾ ರಿಲೀಸ್ ಅಂತ ಭರ್ಜರಿ ಪ್ರಮೋಶನ್ ಮಾಡಿದ್ದ ಚಿತ್ರತಂಡಕ್ಕೆ ಸಿನಿಮಾ ರದ್ದಾಗಿರುವುದು ದೊಡ್ಡ ಶಾಕ್ ಆಗಿದೆ. '99' ಸಿನಿಮಾ ರಿಲೀಸ್ ಆಗುತ್ತೆ ಎಂದು ಸಿನಿಮಾ ನೋಡುವ ಆಸೆಯಿಂದ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಭಾರಿ ನಿರಾಸೆಯಾಗಿದೆ. ತಾಂತ್ರಿಕ ಕಾರಣದಿಂದ ಪ್ರದರ್ಶನ ರದ್ದಾಗಿದೆ ಎನ್ನುವ ಉತ್ತರ ಸಿಗುತ್ತಿದೆ.

ಆದ್ರೀಗ ಸಿನಿಮಾ ರಿಲೀಸ್ ಆಗಿದೆಯಂತೆ. ಬೆಳಗ್ಗೆ ಪ್ರಾರಂಭವಾಗಬೇಕಿದ್ದ ಶೋ ಮಧ್ಯಾಹ್ನ 1.30ರಿಂದ ಆರಂಭವಾಗಿದೆ. ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡ ಚಿತ್ರತಂಡ ಸಿನಿಮಾವನ್ನು ತಡವಾಗಿ ಬಿಡುಗಡೆ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಸಿನಿಮಾದಲ್ಲಿ ನಾಯಕಿಯಾಗಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ.

ganesh 99 kannada movie is delayed release

ನಿರ್ಮಾಪಕ ರಾಮು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದ್ಹಾಗೆ '99' ಸಿನಿಮಾ ತಮಿಳಿನ ಸೂಪರ್ ಹಿಟ್ 96 ಚಿತ್ರದ ರಿಮೇಕ್ ಆಗಿದೆ. ಸದ್ಯ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿದ್ದು ಮೊದಲ ಶೋ ಪ್ರಾರಂಭವಾಗಿದೆ.

More from Filmibeat

English summary
golden star ganesh starrer '99' kannada movie is delayed release. This movie is directed by preetham gubbi. '99'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X