For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಸುದೀಪ್ ಗೆ ಸ್ಟೆಪ್ ಹೇಳಿಕೊಡಲು ಬಂದ ಬಾಲಿವುಡ್ ಡ್ಯಾನ್ಸ್ ಮಾಸ್ಟರ್.!

  |
  Pailwan movie : ಸುದೀಪ್ ಪೈಲ್ವಾನ್ ಟೈಟಲ್ ಹಾಡಿಗೆ ಡಾನ್ಸ್ ಹೇಳಿಕೊಡಲು ಬಂದ್ರು ಬಾಲಿವುಡ್ ಡಾನ್ಸ್ ಮಾಸ್ಟರ್

  'ಕೆ.ಜಿ.ಎಫ್', 'ಸಂಜು', 'ಬಾಜಿರಾವ್ ಮಸ್ತಾನಿ', 'ಅಗ್ನಿಪತ್', 'ಬಾಡಿಗಾರ್ಡ್', 'ರೇಸ್' ಮುಂತಾದ ಬಾಲಿವುಡ್ ನ ಸೂಪರ್ ಹಿಟ್ ಚಿತ್ರಗಳ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದವರು ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ.

  ಬಾಲಿವುಡ್ ನಲ್ಲಿ ಬಹುಬೇಡಿಕೆ ಹೊಂದಿರುವ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇದೀಗ ಸಾಂಡಲ್ ವುಡ್ ಗೆ ಬಂದಿದ್ದಾರೆ. ಅದು ಕಿಚ್ಚ ಸುದೀಪ್ ಅಭಿನಯದ ಚಿತ್ರಕ್ಕೆ ಎಂಬುದು ಇಂಟರೆಸ್ಟಿಂಗ್ ವಿಷಯ.

  ಹೌದು, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ. ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಶೀರ್ಷಿಕೆ ಹಾಡಿಗೆ ನೃತ್ಯ ಸಂಯೋಜನೆ ಮಾಡಲು ಗಣೇಶ್ ಆಚಾರ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್

  ಅದ್ದೂರಿ ಸೆಟ್ ಮತ್ತು ಭರ್ಜರಿ ಸ್ಟೆಪ್ಸ್ ಗಳಿಂದ 'ಪೈಲ್ವಾನ್' ಚಿತ್ರದ ಟೈಟಲ್ ಸಾಂಗ್ ಮೂಡಿ ಬರಲಿದ್ದು, ಈಗಾಗಲೇ ಪ್ರಾಕ್ಟೀಸ್ ಸೆಷನ್ ಗೆ ಗಣೇಶ್ ಆಚಾರ್ಯ ಚಾಲನೆ ಕೊಟ್ಟಿದ್ದಾರೆ.

  'ಪೈಲ್ವಾನ್' ಟೀಸರ್ ನೋಡಿ 'ವಾಹ್' ಎಂದ ಇಬ್ಬರು ತೆಲುಗು ನಿರ್ದೇಶಕರು'ಪೈಲ್ವಾನ್' ಟೀಸರ್ ನೋಡಿ 'ವಾಹ್' ಎಂದ ಇಬ್ಬರು ತೆಲುಗು ನಿರ್ದೇಶಕರು

  ಟೀಸರ್ ಮಾತ್ರದಿಂದಲೇ ಇಡೀ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ 'ಪೈಲ್ವಾನ್'. ಸುದೀಪ್ 'ಪೈಲ್ವಾನ್' ಆಗಿ ಕಾಣಿಸಿಕೊಂಡಿರುವ ಚಿತ್ರದ ಝಲಕ್ ನೋಡಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸೇರಿದಂತೆ ಹಲವು ನಟ-ನಟಿಯರು ಶಿಳ್ಳೆ ಚಪ್ಪಾಳೆ ಹೊಡೆದಿದ್ದರು.

  'ಸಂಕ್ರಾಂತಿ'ಗೆ ಟೀಸರ್, 'ಯುಗಾದಿ'ಗೆ ಪಿಕ್ಚರ್: ಇದು 'ಪೈಲ್ವಾನ್' ಪ್ಲಾನ್.!'ಸಂಕ್ರಾಂತಿ'ಗೆ ಟೀಸರ್, 'ಯುಗಾದಿ'ಗೆ ಪಿಕ್ಚರ್: ಇದು 'ಪೈಲ್ವಾನ್' ಪ್ಲಾನ್.!

  ದೇಶದಾದ್ಯಂತ ಹವಾ ಕ್ರಿಯೇಟ್ ಮಾಡಿರುವ 'ಪೈಲ್ವಾನ್' ಸಿನಿಮಾ ಸದ್ಯ ಶೂಟಿಂಗ್ ನಲ್ಲಿ ಬಿಸಿಯಾಗಿದೆ. ಏಪ್ರಿಲ್ ನಲ್ಲಿ 'ಪೈಲ್ವಾನ್' ತೆರೆಗೆ ಬರುವ ಸಾಧ್ಯತೆ ಇದೆ.

  English summary
  Ganesh Acharya to choreograph title song for Kiccha Sudeep starrer Phailwan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X