ಗಣೇಶ್ ಬಾಳಲ್ಲಿ ಮತ್ತೆ ಮೂಡಿದ ಗೆಲುವಿನ ಚಿತ್ತಾರ

<ul id="pagination-digg"><li class="previous"><a href="/news/golden-star-ganesh-bhama-movie-auto-raja-launch-067606.html">« Previous</a>

ಈ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರವು 'ಚೆಲುವಿನ ಚಿತ್ತಾರ' ಜೋಡಿ ಗಣೇಶ್-ಅಮೂಲ್ಯಾ ಜೋಡಿಯದ್ದು ಎಂಬುದು ಭಾರಿ ವಿಶೇಷತೆ ಪಡೆದಿದೆ. ಜೊತೆಗೆ, ಇನ್ನೊಂದು ವಿಶೇಷತೆಯೆಂದರೆ, ಈ ಚಿತ್ರಕ್ಕೆ ಇತ್ತೀಚಿನ ಯಶಸ್ವಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ. 'ಶಿಶಿರ' ಚಿತ್ರದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮಂಜು ಸ್ವರಾಜ್, ಈ ಚಿತ್ರವನ್ನೂ ಚೆನ್ನಾಗಿ ನಿರೂಪಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಗಣೇಶ್ ಡೈಲಾಗ್ ಹೇಳುವ ಶೈಲಿಗೆ ಬೋಲ್ಡ್ ಆಗದವರು ತೀರಾ ಕಡಿಮೆ. ಡೈಲಾಗ್ ಜೊತೆ ಗಣೇಶ್ ಅವರ ಬಾಡಿ ಲಾಂಗ್ವೇಜ್ ಕೂಡ ಸಾಕಷ್ಟು ಪರಿಣಾಮಕಾರಿ. ಇಂಥ ಗೋಲ್ಡನ್ ಸ್ಟಾರ್, ಇತ್ತೀಚಿಗೆ ತಮ್ಮ 'ಶ್ರಾವಣಿ ಸುಬ್ರಹ್ಮಣ್ಯ' ಸೆಟ್ ನಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿರುವ ಮಾತು ಎಲ್ಲರ ಗಮನಸೆಳೆದಿದೆ. ಗಣೇಶ್ ಸಾಕಷ್ಟು ಪ್ರಾಮಾಣಿಕರು ಹಾಗೂ ಪರಿಶ್ರಮ ಜೀವಿ ಎಂಬುದಕ್ಕೆ ಅವರ ಈ ಮಾತು ಸಾಕ್ಷಿಯಾಗಿದೆ...

ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಗಣೇಶ್, "ನಟನೆಯಲ್ಲಿ ನಾನಿನ್ನೂ ಯುಕೆಜಿ. ಚಿತ್ರರಂಗದಲ್ಲಿ ಕಲಿಯುವಂತದ್ದು ತುಂಬಾ ಇದೆ. ನಾನು ಪ್ರತಿ ದೃಶ್ಯದಲ್ಲೂ ಹೊಸತನ್ನು ಕಲಿಯುತ್ತಿದ್ದೇನೆ. ಪ್ರತಿ ಚಿತ್ರದಲ್ಲೂ ಬೆಳೆಯಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅಮೂಲ್ಯಾ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕೆ 'ಗೋವಿಂದಾಯ ನಮಃ' ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಕೆ ಎ ಸುರೇಶ್ ನಿರ್ಮಾಪಕರು.

ಹತ್ತು ವರ್ಷಗಳ ಹಿಂದೆ ತೆಲುಗಿನಲ್ಲಿ ಬಂದಿದ್ದ 'ಇಟ್ಲು ಶ್ರಾವಣಿ ಸುಬ್ರಮಣ್ಯಂ' ಸಿನಿಮಾಗೂ ತಮ್ಮ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ನಿರ್ದೇಶಕ ಮಂಜು ಸ್ವರಾಜ್. ಇನ್ನು, ತೆಲುಗಿನಲ್ಲಿ ಇದೀಗ ಪ್ರಸಾರ ಕಾಣುತ್ತಿರುವ 'ಶ್ರಾವಣಿ ಸುಬ್ರಮಣ್ಯಂ' ಧಾರಾವಾಹಿಗೂ ಇದಕ್ಕೂ ಯಾವುದೇ ನಂಟು ಇಲ್ಲವಂತೆ. ಹೆಸರಿನಲ್ಲಿ ಮಾತ್ರ ಹೋಲಿಕೆ ಅಷ್ಟೇ.

"ನನ್ನ ನಿರ್ದೆಶನದ ಈ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ಕಥೆಯ ನಾಯಕನ ಹೆಸರು ಬಾಲಸುಬ್ರಹ್ಮಣ್ಯ ಹಾಗೂ ನಾಯಕಿ ಹೆಸರು ಶ್ರಾವಣಿ. ಆದರೆ 'ಬಾಲ'ವನ್ನು ಕಟ್ ಮಾಡಿ ಸುಬ್ರಹ್ಮಣ್ಯ ಹಾಗೂ ಶ್ರಾವಣಿ ಎಂಬುದನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಿಕೊಂಡಿದ್ದೇನೆ. ಈ ಚಿತ್ರದ ನಾಯಕ ಗಾಯಕ ಹಾಗೂ ಗಿಟಾರ್ ವಾದಕ. ಗಣೇಶ್ ಶೈಲಿಯ ಉದ್ದುದ್ದ ಸಂಭಾಷಣೆಗಳು ಈ ಚಿತ್ರದಲ್ಲೂ ಹೇರಳವಾಗಿದೆ" ಎಂದಿದ್ದಾರೆ ಮಂಜು ಸ್ವರಾಜ್.

'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕಾಗಿ ಗಣೇಶ್ ತಮ್ಮ ಎಂದಿನ ಕೇಶ ವಿನ್ಯಾಸಕ್ಕೆ ಕತ್ತರಿ ಹಾಕಿ ಹೊಸ ವಿನ್ಯಾಸದೊಂದಿಗೆ ಮಿಂಚುತ್ತಿದ್ದಾರೆ. ಇನ್ನು ಅಮೂಲ್ಯಾ ಕೂಡ ಚೆಲುವಿನ ಚಿತ್ತಾರಕ್ಕಿಂತಲೂ ಚೆಲುವಿನ ಗಣಿಯಾಗಿ ಕಂಗೊಳಿಸುತ್ತಿದ್ದಾರೆ. ಇದು ಮುಗಿದ ತಕ್ಷಣ ಗಣೇಶ್ ಚಿತ್ರ 'ಆಟೋರಾಜ' ಚಿತ್ರೀಕರಣ ಶುರು. ಒಟ್ಟಿನಲ್ಲಿ ಈ ವರ್ಷ ಗಣೇಶ್ ಅವರಿಗೆ ಶುಕ್ರದೆಸೆ ಹಾಗೂ ಅವರ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ ಎಂಬ ವಾತಾವರಣ ನಿರ್ಮಾಣವಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/golden-star-ganesh-bhama-movie-auto-raja-launch-067606.html">« Previous</a>

More from Filmibeat

English summary
Golden Star ganesh once again rocking. His upcoming movie 'Auto Raja' Launched on 22nd August 2012. And his onother movie 'Shravani Subramanya' is in Shooting stage. Manju Swaraj, Shishira movie fame directing this Shravani Subramanya and Auto Raja to direct by Kalla Malla Sulla fame Udaya Prakash. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X