ಮತ್ತೆ ಒಂದಾದ ಸೂಪರ್ ಹಿಟ್ 'ಚಮಕ್' ಜೋಡಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿತ್ತು. ವಿಭಿನ್ನ ಪಾತ್ರದಲ್ಲಿ ಮಿಂಚಿದ್ದ ಗಣೇಶ್ ಅಭಿಮಾನಿಗಳ ಮನಗೆದ್ದಿದ್ದರು. ಗೋಲ್ಡನ್ ಸ್ಟಾರ್ ಚಮಕ್ ಗೆ ನಿರ್ದೇಶಕ ಸಿಂಪಲ್ ಸುನಿ ಸಾಥ್ ನೀಡಿದ್ದರು.
ಫಸ್ಟ್ ನೈಟ್ ಟೀಸರ್ ಮೂಲಕವೆ ಭಾರಿ ಕುತೂಹಲ ಮೂಡಿಸಿದ್ದ ಚಮಕ್ 2017ರಲ್ಲಿ ರಿಲೀಸ್ ಆಗಿತ್ತು. ಗಣೇಶ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದರು. ಈಗ ಮತ್ತೆ ತೆರೆಮೇಲೆ ಬರಲು ತಯಾರಿ ನಡೆಸುತ್ತಿದೆ ಚಮಕ್ ಜೋಡಿ. ಅಂದ್ರೆ ಗಣೇಶ್ ಮತ್ತು ರಶ್ಮಿಕಾ ಮತ್ತೆ ಸಿನಿಮಾ ಮಾಡ್ತಿದ್ದಾರೆ ಅಂತ ಅಂದ್ಕೋಬೇಡಿ. ಗಣೇಶ್ ಮತ್ತು ನಿರ್ದೇಶಕ ಸುನಿ ಇಬ್ಬರು ಎರಡನೆ ಬಾರಿ ಒಂದಾಗುತ್ತಿದ್ದಾರೆ.
Recommended Video
ಸುನಿ ಈಗಾಗಲೆ ಕಥೆ ಕೂಡ ರೆಡಿಮಾಡಿಕೊಂಡಿದ್ದರಂತೆ. ಈ ಬಗ್ಗೆ ಗಣೇಶ್ ಮತ್ತು ಸುನಿ ಇಬ್ಬರು ಮಾತುಕತೆ ಮಾಡಿದ್ದಾರೆ. ಆದ್ರೆ ಇಬ್ಬರು ಬೇರೆ ಬೇರೆ ಪ್ರೋಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಗಣೇಶ್ ಸದ್ಯ ಗಾಳಿಪಟ-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಸುನಿ, ಶರಣ್ ಅಭಿನಯದ ಅವತಾರ ಪುರುಷ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇಬ್ಬರು ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಎಲ್ಲಾ ಪ್ರೊಜೆಕ್ಟ್ ಮುಗಿದ ಬಳಿಕ ಗಣೇಶ್ ಮತ್ತು ಸುನಿ ಸಿನಿಮಾ ಅನೌನ್ಸ್ ಆಗಲಿದೆ. ಅಂದ್ಹಾಗೆ ಗಣೇಶ್ ಗೆ ಜೋಡಿಯಾಗಿ ಮತ್ತೆ ರಶ್ಮಿಕಾ ಕಾಣಿಸಿಕೊಳ್ಳುತ್ತಾರಾ? ಗಣೇಶ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.


Click it and Unblock the Notifications











