ಅಪ್ಪ-ಮಗನ ಗದಾಯುದ್ಧದ ವಿಡಿಯೋ ವೈರಲ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಗಣೇಶ್ ಮಗ ವಿಹಾನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪ ಮತ್ತು ಮಗ ಇಬ್ಬರು ಗದಾಯುದ್ಧ ಮಾಡುತ್ತಿರುವ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಗಣೇಶ್ ಮತ್ತು ವಿಹಾನ್ ಇಬ್ಬರ ಕೈಯಲ್ಲೂ ಗದೆ ಮಾದರಿಯ ವಸ್ತುಗಳನ್ನಿಟ್ಟುಕೊಂಡು ಇಬ್ಬರು ಯುದ್ಧ ಮಾಡ್ತಿದ್ದಾರೆ. ತುಂಬ ಮುದ್ದಾಗಿ ಮತ್ತು ಹಾಸ್ಯಸ್ಪದವಾಗಿರುವ ಈ ವಿಡಿಯೋವನ್ನ ಸ್ವತಃ ಗಣೇಶ್ ಅವರೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಣೇಶ್ ಅವರ ಮಗಳು ಚಾರಿತ್ರ್ಯ ಇವರಿಬ್ಬರ ವಿಡಿಯೋವನ್ನ ರೆಕಾರ್ಡ್ ಮಾಡಿದ್ದಾರೆ.

ಸದ್ಯ, ಗೋಲ್ಡನ್ ಸ್ಟಾರ್ ಗಣೇಶ್ 'ಆರೆಂಜ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಜೂಮ್' ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಮತ್ತೊಂದೆಡೆ ಗಣೇಶ್ ಮತ್ತು ರಶ್ಮಿಕಾ ಮದಣ್ಣ ಅಭಿನಯದ 'ಚಮಕ್' ಸಿನಿಮಾ ಯಶಸ್ವಿ ಪ್ರದರ್ಶನವಾಗ್ತಿದೆ. 30 ದಿನಗಳನ್ನ ಪೂರೈಸಿರುವ ಚಮಕ್ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಸಿಂಪಲ್ ಸುನಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.


Click it and Unblock the Notifications











