ಸೆಟ್ಟೇರಿತು ಗಣೇಶ್-ನಾಗಣ್ಣ ಜೋಡಿಯ ಸಿನಿಮಾ

By Bharath Kumar

Recommended Video

ಹಾರರ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣಿ...!! | Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಖ್ಯಾತ ನಿರ್ದೇಶಕ ನಾಗಣ್ಣ ಜೋಡಿಯಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿದ್ದ ಚಿತ್ರ ಸೆಟ್ಟೇರಿದೆ. ಜೂನ್ 25 ರಂದು ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ನಿಮಿಷಾಂಭ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು.

ಚಿತ್ರದ ಮುಹೂರ್ತ ದೃಶ್ಯಕ್ಕೆ ವಿತರಕ ಹೆಚ್.ಡಿ. ಗಂಗರಾಜ್ ಕ್ಯಾಮರಾ ಚಾಲೂ ಮಾಡಿದರೆ ಶ್ರೀ ಅರ್ಜುನ್ ಗುರೂಜಿ ಆರಂಭ ಫಲಕ ತೋರಿಸಿದರು. ಇನ್ನೂ ಹೆಸರಿಡದ "ಪ್ರೊಡಕ್ಷನ್ ನಂ.1 ಚಿತ್ರವನ್ನ ಸಾಮಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ದೀಪಕ್‍ಸಾಮಿ ನಿರ್ಮಿಸುತ್ತಿದ್ದಾರೆ.

ಅಂದ್ಹಾಗೆ, ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾರರ್ ಚಿತ್ರವೊಂದರಲ್ಲಿ ಕ್ಯಾಮರಾ ಎದುರಿಸುತ್ತಿದ್ದಾರೆ.

Ganesh and naganna movie muhurtha

ಚಿತ್ರಕ್ಕೆ ನಂಜುಂಡ ಸಂಭಾಷಣೆ, ವಿಘ್ನೇಶ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ, ರವಿವರ್ಮ ಸಾಹಸ, ಸುರೇಶ್ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರವಿದ್ದು, ಮೊದಲ ಬಾರಿಗೆ ಯಶಸ್ವಿ ನಿರ್ದೇಶಕ ನಾಗಣ್ಣ ಗಣೇಶ್ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.

ಗಣೇಶ್ ಜೊತೆಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ರೋನಿಕಾ ಸಿಂಗ್. ರೋನಿಕಾ ಮೂಲತಃ ಪಂಜಾಬಿನ ಹುಡುಗಿಯಾಗಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಈ ಹಿಂದೆ ಪಂಜಾಬ್ ಭಾಷೆಯ 'ರಮ್ತಾ ಜೊಗಿ' ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು. ತಾರಾಗಣದಲ್ಲಿ ಗಣೇಶ್, ರೋನಿಕಸಿಂಗ್, ಸುಂದರ್‍ರಾಜ್ ಶೋಭರಾಜ್, ಚಿ. ಗುರುದತ್, ರವಿಶಂಕರ್‍ಗೌಡ, ಸಾಧುಕೋಕಿಲ ಮುಂತಾದವರಿದ್ದಾರೆ.

More from Filmibeat

English summary
'Kurukshetra' movie fame director Naganna will direct to Ganesh in next movie. untitled movie starts recently, Punjabi actress Ronica Singh is selected to play lead role opposite to Ganesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X