ಹೊಸ ಅವತಾರದಲ್ಲಿ ಗಣೇಶ್: ಥ್ರಿಲ್ ಆದ 'ಗೋಲ್ಡನ್' ಅಭಿಮಾನಿಗಳು

ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಹೊಸ ಹೊಸ ಪಾತ್ರಗಳಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ರಾಜ್ ಸರ್ಪ್ರೈಸ್ ಸುದ್ದಿ ನೀಡಿದ್ದಾರೆ.

ಮಳೆ ಹುಡುಗನ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿ ನಟ ಗಣೇಶ್ ಹೊಸ ಅವತಾರದಲ್ಲಿ ನಟಿಸಲಿದ್ದಾರೆ. ಹೌದು, ಕ್ರೈಂ-ಥ್ರಿಲ್ಲಿಂಗ್ ಕಥಾಹಂದರಲ್ಲಿ ಗೋಲ್ಡನ್ ಸ್ಟಾರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾಗಳು ಅಂದ್ರೆ ಲವ್ ಸ್ಟೋರಿ ಸುತ್ತವೇ ಇರುತ್ತದೆ. ರೊಮ್ಯಾಂಟಿಕ್ ಕಾಮಿಡಿ ಸ್ಕ್ರಿಪ್ಟ್‌ಗಳಲ್ಲಿ ಗಣಿ ಹೆಚ್ಚು ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಇದೀಗ ಕ್ರೈಂ ಥ್ರಿಲ್ಲರ್ ಎಂದಾಕ್ಷಣ ಗೋಲ್ಡನ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Ganesh and Prashnat Raj together for New Mass Crime Thriller Movie

ಸದ್ಯಕ್ಕೆ ಪ್ರೊಡಕ್ಷನ್ ನಂ 7 ಹೆಸರಿನಲ್ಲಿ ಬರ್ತಡೇ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಸೇರಿದಂತೆ ಇನ್ನುಳಿದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ.

ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಎರಡು ಸಿನಿಮಾ ಬಂದಿದೆ. ಇದು ಮೂರನೇ ಚಿತ್ರ. 2016ರಲ್ಲಿ 'ಜೂಮ್' ಹಾಗೂ 2018ರಲ್ಲಿ 'ಆರೆಂಜ್' ಚಿತ್ರ ಮಾಡಿದ್ದರು. ಈಗ ಹ್ಯಾಟ್ರಿಕ್ ಬಾರಿಸುವ ಕನಸಿನಲ್ಲಿದ್ದಾರೆ.

Ganesh and Prashnat Raj together for New Mass Crime Thriller Movie

ಪ್ರಶಾಂತ್ ರಾಜ್ ಅನಾರೋಗ್ಯ

ಅಂದ್ಹಾಗೆ, ಮೇ ತಿಂಗಳಲ್ಲಿ ಪ್ರಶಾಂತ್ ರಾಜ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಉಸಿರಾಟ ತೊಂದರೆ ಉಂಟಾಗಿ ಕೃತಕ ಆಕ್ಸಿಜನ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ, ಚೇತರಿಕೆ ಕಾಣುವ ಮೂಲಕ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದಾರೆ. ಲವ್ ಗುರು, ಗಾನ ಬಜಾನ, ದಳಪತಿ, ವಿಸಿಲ್, ಜೂಮ್, ಆರೆಂಜ್ ಅಂತಹ ಸಿನಿಮಾ ಮಾಡಿದ್ದಾರೆ.

ಗಣೇಶ್ ಸಿನಿಮಾಗಳು

ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2', ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್', ಸಿಂಪಲ್ ಸುನಿ ಜೊತೆ 'ಸಖತ್' ಸಿನಿಮಾ ಹಾಗೂ 'ದಿ ಸ್ಟೋರಿ ಆಫ್ ರಾಯಗಢ' ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Golden star Ganesh and Prashnat Raj together for New Mass Crime Thriller Movie; details soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X