For Quick Alerts
  ALLOW NOTIFICATIONS  
  For Daily Alerts

  'ಸಖತ್' ಫೋಟೋ ಹಂಚಿಕೊಂಡ ಗಣೇಶ್ ಮತ್ತು ಸಿಂಪಲ್ ಸುನಿ

  |

  ನಿರ್ದೇಶಕ ಸಿಂಪಲ್ ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಶರಣ್ ಜೊತೆ ಅವತಾರ ಪುರುಷ ಸಿನಿಮಾ ಮುಗಿಸಿದ ಸುನಿ ಇದೀಗ ಸಖತ್ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಖತ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ಬಗ್ಗೆ ಸುನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಗಣೇಶ್ ಜೊತೆ ಚಿತ್ರೀಕರಣದಲ್ಲಿ ನಿರತರಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್

  ಇನ್ನೂ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋಲ್ಡನ್ ಸ್ಟಾರ್ ಗಣೇಶ್

  'ಪ್ರತಿ ಚಿತ್ರವು ನನಗೆ ಹೊಸತನ ಮೊದಲ ಬಾರಿಗೆ ಮಾಡುತ್ತಿರುವೆ ಈ ರೀತಿಯ ಪಾತ್ರ ನಾ. ಚಿತ್ರಕಥೆ ಸಂಭಾಷಣೆ ನಗು ತರುತ್ತಿದೆ. ಶೂಟಿಂಗ್ ಸಖತ್ತಾಗಿ ಹೋಗ್ತಿದೆ' ಎಂದು ಹೇಳಿದ್ದಾರೆ.

  ಅಂದಹಾಗೆ ಸಖತ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಮೊದಲು ಚಮಕ್ ಸಿನಿಮಾ ಮಾಡಿದ್ದ ಈ ಜೋಡಿ ಇದೀಗ ಎರಡನೇ ಬಾರಿಗೆ ಒಂದಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಸುರಭಿ ಕಾಣಿಸಿಕೊಳ್ಳುತ್ತಿದ್ದಾರೆ.

  ದರ್ಶನ್ ಬೆಂಬಲಕ್ಕೆ ನಿಂತ ನಾಗಭರಣ | Filmibeat Kannada

  ಕುರಿ ಪ್ರತಾಪ್, ಸಾಧು ಕೋಕಿಲಾ, ಗಿರಿ ಧರ್ಮಣ್ಣ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಗಣೇಶ್ ಬಳಿ ಸದ್ಯ ಸಖತ್ ಸಿನಿಮಾ ಜೊತೆಗೆ ಗಾಳಿಪಟ-2, ತ್ರಿಬಲ್ ರೈಡಿಂಗ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಿವೆ. ಇನ್ನು ಸಿಂಪಲ್ ಸುನಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Golden star Ganesh and Simple Suni resume second schedule for Sakath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X