For Quick Alerts
  ALLOW NOTIFICATIONS  
  For Daily Alerts

  ದಿಗಂತ್-ಹರಿಪ್ರಿಯಾ ಚಿತ್ರಕ್ಕೆ ಸಾಥ್ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್

  |

  ದೂದ್ ಪೇಡಾ ಖ್ಯಾತಿಯ ದಿಗಂತ್ ಮತ್ತು ಹರಿಪ್ರಿಯಾ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸದ್ದು ಮಾಡಿತ್ತು. ಇದೀಗ, ಆ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ.

  ದಿಗಂತ್ ಮತ್ತು ಹರಿಪ್ರಿಯಾ ಜೋಡಿಯ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಇಂದು ನಡೆದಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

  ಕನ್ನಡದಲ್ಲಿ ಎವರು ರೀಮೇಕ್: ದಿಗಂತ್ ಜೊತೆ ಮತ್ತಿಬ್ಬರು ಸ್ಟಾರ್ಸ್ ನಟನೆ

  ಅಂದ್ಹಾಗೆ, ಈ ಸಿನಿಮಾ ತೆಲುಗಿನ 'ಎವರು' ಚಿತ್ರದ ಕನ್ನಡ ರೀಮೇಕ್ ಎಂದು ಹೇಳಲಾಗಿದೆ. ತೆಲುಗಿನಲ್ಲಿ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಪಾತ್ರಗಳನ್ನು ಕನ್ನಡದಲ್ಲಿ ದಿಗಂತ್, ಹರಿಪ್ರಿಯಾ, ಪ್ರಭು ಮಂಡ್ಕರ್ ಹಾಗೂ ವಸಿಷ್ಠ ಸಿಂಹ ನಿರ್ವಹಿಸಲಿದ್ದಾರೆ.

  'ಎವರು' ಸಿನಿಮಾ ಸ್ಪಾನಿಶ್‌ನ 'ದಿ ಇನ್ವಿಸಿಬಲ್ ಗೋಸ್ಟ್' ಎಂಬ ಚಿತ್ರದ ರೀಮೇಕ್. ತೆಲುಗು ಇಂಡಸ್ಟ್ರಿಗೆ ಬೇಕಾದಂತೆ ಸ್ಕ್ರಿಪ್ಟ್ ಬದಲಾಯಿಸಿ ತೆರೆಮೇಲೆ ತಂದಿದ್ದರು. ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಅತ್ಯಾಚಾರಿಯನ್ನು ಮಹಿಳೆ ಕೊಲ್ಲುವ ಹಾಗೂ ಅದರ ತನಿಖೆಯ ಸುತ್ತ ಕಥೆ ಎಳೆಯಲಾಗಿದೆ.

  Meghana Raj Baby Shower Emotional Moments, Happy Birthday CHIRU | Junior Chiru coming soon

  ಇನ್ನು ಅಶೋಕ್ ತೇಜ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡಲಿದ್ದಾರೆ. ಆದ್ರೆ, ಇದುವರೆಗೂ ಚಿತ್ರದ ಹೆಸರು ಅಂತಿಮಗೊಳಿಸಿಲ್ಲ.

  English summary
  Golden Star Ganesh at the muhurath of Diganth and Hariprriya's New Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X