ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
Recommended Video

ನಮಸ್ಕಾರ.. ನಮಸ್ಕಾರ.. ಅಂತಾನೇ ಕನ್ನಡ ಸಿನಿಮಾರಂಗದಲ್ಲಿ ಗೋಲ್ಡನ್ ಸ್ಟಾರ್ ಎಂದು ಪ್ರಖ್ಯಾತಿ ಗಳಿಸಿದ ನಟ ಗಣೇಶ್ ಇಂದು ತಮ್ಮ 39 ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಬರ್ತಡೇ ಸ್ಪೆಷಲ್ ಆಗಿ 'ಗೀತಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.
ನಿನ್ನೆಯಿಂದಲೇ ಗಣೇಶ್ ಮನೆಯಲ್ಲಿ ಅಭಿಮಾನಿಗಳು ರಾಜ್ಯದ ನಾನಾ ಜಿಲ್ಲೆಗಳಿಂದ ಬಂದು ತನ್ನ ನೆಚ್ಚಿನ ಸ್ಟಾರ್ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. 'ಗೀತಾ' ಚಿತ್ರದ ಜೊತೆಯಲ್ಲಿ ಈಗಾಗಲೇ ನಾಗಣ್ಣ ನಿರ್ದೇಶನದ ಚಿತ್ರದ ಮುಹೂರ್ತವೂ ನಡೆದಿದ್ದು ಈ ವರ್ಷ ಗೋಲ್ಡನ್ ಸ್ಟಾರ್ ಕಡೆಯಿಂದ ವಿಭಿನ್ನ ಕಥಾಹಂದರವಿರುವ ಚಿತ್ರವನ್ನು ನಿರೀಕ್ಷೆ ಮಾಡಬಹುದಾಗಿದೆ.

ಮತ್ತೊಂದು ವಿಶೇಷ ಎಂದರೆ ಈ ಬಾರಿ ಗಣೇಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ 'ಗೀತಾ' ಸಿನಿಮಾದ ಕಟೌಟ್ ನಿಲ್ಲಿಸಲಾಗಿದೆ. ಚಿತ್ರ ಸೆಟ್ಟೇರುವ ಮುಂಚೆಯೇ ಅಭಿಮಾನಿಗಳು ಸಿನಿಮಾ ಕಟೌಟ್ ಅನ್ನು ಕಟ್ಟಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಗಣೇಶ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಸೋಷಿಯಲ್ ಮಿಡಿಯಾದಲ್ಲಿ ಗೊಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.


Click it and Unblock the Notifications











