ಪ್ರಜ್ವಲ್ ಮತ್ತು ದಿಗಂತ್ ಗೆ ಓಪನ್ ಚಾಲೆಂಜ್ ಹಾಕಿದ ಗಣೇಶ್.!

By Bharath Kumar

Recommended Video

ದಿಗಂತ್ ಹಾಗು ಪ್ರಜ್ವಲ್ ಗೆ ಓಪನ್ ಚಾಲೆಂಜ್ ಕೊಟ್ಟ ಗಣೇಶ್ | Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್‌ ಮತ್ತು ಧೂದ್ ಪೇಡಾ ದಿಗಂತ್ ಮೂವರು ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಸ್ನೇಹಿತರು. ಮೂವರು ತಮ್ಮದೇ ಆದ ಪ್ರತಿಭೆ ಮೂಲಕ ಅಭಿಮಾನ ಸಂಪಾದಾನೆ ಮಾಡಿರುವ ಕಲಾವಿದರು.

ಹೀಗಿರುವಾಗ, ನಟ ಗಣೇಶ್ ತಮ್ಮ ಇಬ್ಬರು ಸ್ನೇಹಿತರಿಗೆ ಬಹಿರಂಗವಾಗಿ ಒಂದು ಸವಾಲೆಸೆದಿದ್ದಾರೆ. ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಸವಾಲೆಸೆದಿದ್ದು, ಪ್ರಜ್ವಲ್ ಮತ್ತು ದಿಗಂತ್ ಈ ಚಾಲೆಂಜ್ ನ್ನ ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಅಷ್ಟಕ್ಕೂ, ಗಣೇಶ್ ಅವರು ಹಾಕಿರುವ ಆ ಚಾಲೆಂಜ್ ಏನೂ ಅಂತ ತಿಳಿಯಲು ಮುಂದೆ ಓದಿ.....

ಮುವಾಯ್ ಥಾಯ್‍ ಕಲಿತಿರುವ ಗಣೀ

ಮುವಾಯ್ ಥಾಯ್‍ ಕಲಿತಿರುವ ಗಣೀ

ಈಗಾಗಲೇ ಗೊತ್ತಿರುವಾಗೆ, ಗೋಲ್ಡನ್‌ ಸ್ಟಾರ್‌ ಗಣೇಶ್ ಮುವಾಯ್ ಥಾಯ್‍ ಕಲೆಯನ್ನ ಕಲಿತಿದ್ದಾರೆ. ಸತತ ಮೂರು ತಿಂಗಳ ತರಬೇತಿ ಪಡೆದುಕೊಂಡಿದ್ದು, ಈಗ ಮುವಾಯ್ ಥಾಯ್‌ ನ ಭಾರತೀಯ ರಾಯಭಾರಿ ಕೂಡ ಆಗಿದ್ದಾರೆ.

ಕಿಕ್ ಮೂಲಕ ಕಲ್ಲಂಗಡಿ ಹೊಡೆದ ಗಣೇಶ್

ಕಿಕ್ ಮೂಲಕ ಕಲ್ಲಂಗಡಿ ಹೊಡೆದ ಗಣೇಶ್

ನಟ ಗಣೇಶ್ ಅವರು ತಮ್ಮ ಮುವಾಯ್ ಥಾಯ್‍ ಕಲೆಯಿಂದ, ತಮ್ಮ ಕಾಲಿನ ಕಿಕ್ ಮೂಲಕ ಎದುರಗಡೆ ವ್ಯಕ್ತಿಯ ಕೈಯಲ್ಲಿದ್ದ ಕಲ್ಲಂಗಡಿಯನ್ನ ಹೊಡೆದು ಹಾಕಿದ್ದಾರೆ.

ದಿಗಂತ್ ಮತ್ತು ಪ್ರಜ್ವಲ್ ಮಾಡಬೇಕಾಗಿರುವುದೇ ಇಷ್ಟೇ

ದಿಗಂತ್ ಮತ್ತು ಪ್ರಜ್ವಲ್ ಮಾಡಬೇಕಾಗಿರುವುದೇ ಇಷ್ಟೇ

ಹೀಗೆ, ಕಾಲಿನ ಕಿಕ್ ಮೂಲಕ ಗಣೇಶ್ ಕಲ್ಲಂಗಡಿ ಹೊಡೆದಾಗೆ, ನಟ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರು ಕಿಕ್ ಮೂಲಕ ಕಲ್ಲಂಗಡಿ ಹೊಡೆಯಬೇಕು. ಇದು ಗಣೇಶ್ ಅವರ ಚಾಲೆಂಜ್. ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಬಹುದು ಎಂದು ಸ್ವತಃ ಗಣೇಶ್ ಅವರೇ ತಿಳಿಸಿದ್ದಾರೆ.

ಗಣೀ ಚಾಲೆಂಜ್ ಗೆ ಸ್ಟಾರ್ ನಟರು ಏನಂತಾರೆ?

ಗಣೀ ಚಾಲೆಂಜ್ ಗೆ ಸ್ಟಾರ್ ನಟರು ಏನಂತಾರೆ?

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಾಕಿರುವ ಚಾಲೆಂಜ್ ಗೆ ಈಗ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲವಾಗಿದೆ. ಕಲ್ಲಂಗಡಿ ಹೊಡೆದು ಚಾಲೆಂಜ್ ಗೆ ತಕ್ಕ ಉತ್ತರ ಕೊಡ್ತಾರ ಕಾದು ನೋಡೋಣ.

ವಿಡಿಯೋ ನೋಡಿ

More from Filmibeat

English summary
Golden Star Ganesh has challenged to actor Prajwal Devaraj and Diganth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X