ಗಣೇಶ ಹಬ್ಬಕ್ಕೆ ಹೊಸ ಪೋಸ್ಟರ್ ಹಂಚಿಕೊಂಡ ಚಿತ್ರಗಳು, ಯಾವುದು ಇಷ್ಟ ಆಯ್ತು?

ಕೊರೊನಾ ವೈರಸ್ ಭೀತಿ ಇಲ್ಲದೇ ಹೋಗಿದ್ದರೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಎರಡು ಅಥವಾ ಮೂರು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ, ಕೊರೊನಾ ಎಂಬ ಅನಿರೀಕ್ಷಿತ ರೋಗ ಸಿನಿಪ್ರೇಮಿಗಳನ್ನು ನಿರಾಸೆಯಾಗುವಂತೆ ಮಾಡಿದೆ.

Recommended Video

ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಎಂಬ ನಿರಾಸೆಯನ್ನು ಮರೆಮಾಚಲು ನಿರೀಕ್ಷೆಯ ಚಿತ್ರಗಳು ಹೊಸ ಹೊಸ ಪೋಸ್ಟರ್‌ಗಳನ್ನು ರಿಲೀಸ್ ಮಾಡಿ ಗಣೇಶ ಹಬ್ಬಕ್ಕೆ ಶುಭಕೋರಿದೆ. ಹಾಗಾದ್ರೆ, ಯಾವ ಯಾವ ಚಿತ್ರತಂಡ ಗೌರಿ-ಗಣೇಶ ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದೆ ಎಂದು ತಿಳಿಯೋಣ ಬನ್ನಿ. ಮುಂದೆ ಓದಿ....

ಗಾಳಿಪಟ 2

ಗಾಳಿಪಟ 2

ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ಗಾಳಿಪಟ 2 ಚಿತ್ರತಂಡ ಗೌರಿ ಗಣೇಶ ಹಬ್ಬಕ್ಕೆ ಶುಭ ಕೋರಿದೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಡವ ರಾಸ್ಕಲ್

ಬಡವ ರಾಸ್ಕಲ್

ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾ ಬಡವ ರಾಸ್ಕಲ್. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಆಟೋ ಡ್ರೈವರ್ ಗೆಟಪ್‌ನಲ್ಲಿ ಡಾಲಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಇಂದು ಧನಂಜಯ್ ಅವರ ಹುಟ್ಟುಹಬ್ಬ.

ಫ್ಯಾಂಟಮ್ ಪೋಸ್ಟರ್

ಫ್ಯಾಂಟಮ್ ಪೋಸ್ಟರ್

ಕಿಚ್ಚ ಸುದೀಪ್ ನಟಿಸುತ್ತಿರುವ ಫ್ಯಾಂಟಮ್ ಸಿನಿಮಾ ತಂಡವೂ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದೆ. ಅನೂಪ್ ಭಂಡಾರಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ನಿರೂಪ್ ಭಂಡಾರಿ, ಅಪರ್ಣ ಬಲ್ಲಾಳ್ ಸಹ ತಾರಾಬಳಗದಲ್ಲಿದ್ದಾರೆ.

ದರ್ಶನ್ 'ರಾಬರ್ಟ್'

ದರ್ಶನ್ 'ರಾಬರ್ಟ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷೆಯ ಚಿತ್ರ ರಾಬರ್ಟ್ ಸಹ ಅಭಿಮಾನಿಗಳಿಗೆ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದೆ. ತರುಣ್ ಸುಧೀರ್ ಈ ಚಿತ್ರ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ.

ಮುಗಿಲುಪೇಟೆ

ಮುಗಿಲುಪೇಟೆ

ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಟಿಸುತ್ತಿರುವ ಮುಗಿಲುಪೇಟೆ ಚಿತ್ರತಂಡ ಗೌರಿ ಗಣೇಶ ಹಬ್ಬಕ್ಕೆ ವಿಶ್ ಮಾಡಿದೆ. ಭರತ್ ಎಸ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ರಿಷಿ, ತಾರಾ, ಅವಿನಾಶ್, ರಂಗಾಯಣ ರಘು, ಸಾಧುಕೋಕಿಲಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಸಖತ್ ಸಿನಿಮಾ

ಸಖತ್ ಸಿನಿಮಾ

ಗಣೇಶ ಹಬ್ಬದ ಪ್ರಯುಕ್ತ ಗೋಲ್ಡನ್ ಸ್ಟಾರ್ ಗಣೇಶ ನಟಿಸುತ್ತಿರುವ ಸಖತ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Ganesh chaturthi Special: Kannada movie Phantom, robert, gaalipata 2, mugilpete movies are released new poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X