For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ 2' ಪ್ರೀಮಿಯರ್ ಶೋಗೆ ಹೇಗಿದೆ ರೆಸ್ಪಾನ್ಸ್? ಗಣೇಶ್, ಭಟ್ರು ಕ್ರೇಜ್ ಹೇಗಿದೆ?

  |

  ಈ ವಾರ ಕನ್ನಡದ ಎರಡು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ 'ರವಿ ಬೋಪಣ್ಣ' ಒಂದಾದ್ರೆ, ಇನ್ನೊಂದು ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಸಿನಿಮಾ 'ಗಾಳಿಪಟ 2'. ಈ ಸಿನಿಮಾ ನಿರ್ದೇಶನ ಮಾಡುತ್ತಿರೋದು ಯೋಗರಾಜ್‌ ಭಟ್ ಆಗಿರುವುದರಿಂದ ಕನ್ನಡಿಗರಲ್ಲಿ ಕೊಂಚ ಹೆಚ್ಚಿನ ಕುತೂಹಲವಿದೆ.

  2008ರಲ್ಲಿ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ನಟಿಸಿದ್ದ 'ಗಾಳಿಪಟ' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈಗ 14 ವರ್ಷಗಳ ಬಳಿಕ ಮತ್ತೆ 'ಗಾಳಿಪಟ' ಹಾರಿಸಲು ಗಣೇಶ್, ದಿಗಂತ್, ಪವನ್ ಹಾಗೂ ಯೋಗರಾಜ್‌ ಭಟ್ ಸಿದ್ಧರಾಗಿರೋದ್ರಿಂದ ಬಾಕ್ಸಾಫೀಸ್‌ ಮೇಲಂತೂ ಎಲ್ಲರೂ ಕಣ್ಣು ಇಟ್ಟಿದ್ದಾರೆ.

  Recommended Video

  Galipata 2 | Ganesh | Friends ಇಂದ ನನಗೆ ಏನು ಮುಚ್ಚಿಡಕ್ಕೆ ಆಗಲ್ಲ. | Yograj Bhat | Filmibeat Kannada

  ಸಪ್ತ ಸಾಗರದಾಚೆ ಬಹಳ ಎತ್ತರಕ್ಕೆ ಹಾರಲಿದೆ ಭಟ್ಟರ ಹೊಸ 'ಗಾಳಿಪಟ'!ಸಪ್ತ ಸಾಗರದಾಚೆ ಬಹಳ ಎತ್ತರಕ್ಕೆ ಹಾರಲಿದೆ ಭಟ್ಟರ ಹೊಸ 'ಗಾಳಿಪಟ'!

  ಇನ್ನೊಂದು ಕಡೆ ಬಿಡುಗಡೆಗೂ ಮುನ್ನ 'ಗಾಳಿಪಟ 2' ಕ್ರೇಜ್ ಹೇಗಿದೆ ಅನ್ನೋದನ್ನು ಪ್ರಶ್ನೆ ಸಹಜವಾಗಿಯೇ ಸಿನಿಪ್ರಿಯರಲ್ಲಿದೆ. ಅದಕ್ಕೆ ಅಂತಾನೇ ಚಿತ್ರತಂಡ ಬೇರೆ ಬೇರೆ ಕಡೆಗಳಲ್ಲಿ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಂಡಿದೆ. ಹಾಗಿದ್ದರೆ, 'ಗಾಳಿಪಟ 2' ಸಿನಿಮಾ ಪ್ರೀಮಿಯರ್‌ಗೆ ರೆಸ್ಪಾನ್ಸ್ ಹೇಗಿದೆ? ಎಲ್ಲೆಲ್ಲಿ ಎಷ್ಟು ಶೋಗಳನ್ನು ಅರೆಂಜ್ ಮಾಡಲಾಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಗಾಳಿಪಟ 2 ರೆಸ್ಪಾನ್ಸ್ ಹೇಗಿದೆ?

  ಗಾಳಿಪಟ 2 ರೆಸ್ಪಾನ್ಸ್ ಹೇಗಿದೆ?

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್‌ ಭಟ್ ಕಾಂಬಿನೇಷನ್ ಸಿನಿಪ್ರಿಯರಿಗೆ ಇಷ್ಟ. ರೊಮ್ಯಾಂಟಿಕ್ ಡೈಲಾಗ್, ಕಾಮಿಡಿ ಸೀನ್, ಭಾವನಾತ್ಮಕ ಸನ್ನಿವೇಶಗಳಿಗೇನು ಕಮ್ಮಿಯಿರಲ್ಲ. ಅದರಲ್ಲೂ 'ಗಾಳಿಪಟ' ಅಂದರೆ ದೋಸ್ತಿಗಳ ಸಿನಿಮಾ. ಹೀಗಾಗಿ ಸ್ನೇಹಿತರು ಹಾಗೂ ಕುಟುಂಬಕ್ಕೆ ಇಷ್ಟ ಆಗಬಹುದು. ಸಿನಿಮಾ ಬಿಡುಗಡೆಗೂ ಮುನ್ನವಂತೂ ಗಾಳಿಪಟ ಕ್ರೇಜ್ ಅಂದ್ಕೊಂಡು ಸ್ವಲ್ಪ ಹೆಚ್ಚೇ ಇದೆ. ಸದ್ಯ ಈ ಸಿನಿಮಾದ ಪ್ರೀಮಿಯರ್‌ಗೆ ಸಿಕ್ಕಿರೋ ರೆಸ್ಪಾನ್ಸ್‌ ನೋಡಿನೇ ಕ್ರೇಜ್ ಹೇಗಿದೆ ಅಂತ ಊಹಿಸಬಹುದು.

  ಮತ್ತೆ ರೊಮ್ಯಾಂಟಿಕ್ ಗಾಳಿಪಟ ಹಾರಿದ ಯೋಗರಾಜ್ ಭಟ್ಟರುಮತ್ತೆ ರೊಮ್ಯಾಂಟಿಕ್ ಗಾಳಿಪಟ ಹಾರಿದ ಯೋಗರಾಜ್ ಭಟ್ಟರು

  ಎಲ್ಲೆಲ್ಲಿ 'ಗಾಳಿಪಟ 2' ಪ್ರೀಮಿಯರ್?

  ಎಲ್ಲೆಲ್ಲಿ 'ಗಾಳಿಪಟ 2' ಪ್ರೀಮಿಯರ್?

  'ಗಾಳಿಪಟ 2' ಆಗಸ್ಟ್ 12ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ಇನ್ನೂ ಹಲವೆಡೆ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಜನರ ಒತ್ತಡದ ಮೇರೆಗೆ ಪ್ರೀಮಿಯರ್ ಶೋ ಅನ್ನು ಹಮ್ಮಿಕೊಂಡಿದೆ. ಇಂದು (ಆಗಸ್ಟ್ 11) ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಳ್ಳಾಗಿದೆ. ಹಾಗೇ ಯುಎಸ್‌ಎ, ಯುಕೆ ಹಾಗೂ ಕೆನಡಾದಲ್ಲೂ ಪ್ರೀಮಿಯರ್ ನಡೆಯುತ್ತಿದೆ. ಈಗಾಗಲೇ ಈ ಶೋಗಳ ಟಿಕೆಟ್ ಕೂಡ ಬಹುತೇಕ ಫುಲ್ ಆಗಿವೆ.

  ಬೆಂಗಳೂರು, ಮೈಸೂರಿನಲ್ಲಿ ಹೇಗಿದೆ ರೆಸ್ಪಾನ್ಸ್?

  ಬೆಂಗಳೂರು, ಮೈಸೂರಿನಲ್ಲಿ ಹೇಗಿದೆ ರೆಸ್ಪಾನ್ಸ್?

  ಬೆಂಗಳೂರಿನಲ್ಲಿ ಸುಮಾರು 14 ಸ್ಕ್ರೀನ್‌ಗಳಲ್ಲಿ 'ಗಾಳಿಪಟ 2' ಪ್ರೀಮಿಯರ್ ಶೋ ಹಾಕಲಾಗಿದೆ. ವಿಶೇಷ ಅಂದರೆ, ಈ 14 ಶೋಗಳಿಗೂ ಬಹುತೇಕ ಫುಲ್ ಆಗಿದೆ. ಇನ್ನು ಮೈಸೂರಿನ 4 ಸ್ಕ್ರೀನ್‌ನಲ್ಲಿ ಪ್ರೀಮಿಯರ್ ಆಗುತ್ತಿದ್ದು, 3 ಸ್ಕ್ರೀನ್ ಈಗಾಗಲೇ ತುಂಬಿದೆ. ಇನ್ನು ಯುಎಸ್‌ಎ ಹಾಗೂ ಯುಕೆನಲ್ಲೂ ಪ್ರೀಮಿಯರ್‌ಗೆ ಪ್ರತಿಕ್ರಿಯೆ ಉತ್ತಮವಾಗಿದೆ ಎನ್ನಲಾಗುತ್ತಿದೆ. ಇದು 14 ವರ್ಷಗಳ ಬಳಿಕವೂ 'ಗಾಳಿಪಟ 2' ಸಿನಿಮಾದ ಕ್ರೇಜ್ ಕಮ್ಮಿ ಆಗಿಲ್ಲ ಅನ್ನೋದನ್ನು ತೋರಿಸುತ್ತಿದೆ.

  'ಗಾಳಿಪಟ 2' ಪ್ರೇಕ್ಷಕರ ತೀರ್ಪು ಅಂತಿಮ

  'ಗಾಳಿಪಟ 2' ಪ್ರೇಕ್ಷಕರ ತೀರ್ಪು ಅಂತಿಮ

  ಗಣೇಶ್, ದಿಗಂತ್, ಪವನ್ ಕುಮಾರ್ (ಸಹಾಯಕ ನಿರ್ದೇಶಕ) ಹಾಗೂ ಯೋಗರಾಜ್‌ ಭಟ್ಟರ ಕಾಂಬಿನೇಷನ್ 14 ವರ್ಷಗಳ ಬಳಿಕವೂ ಕ್ರೇಜ್ ಹುಟ್ಟಾಕುವಲ್ಲಿ ಗೆದ್ದಿದೆ. ಆದರೆ, ನಾಳೆ ಸಿನಿಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬೇಕು. ಹಳೇ ಗುಂಗಲ್ಲಿ ಬಂದವರಿಗೆ ಈ ಜೋಡಿ ಕಿಕ್ ಕೊಡಬೇಕು. ಹೊಸ ನಿರೀಕ್ಷೆ ಇಟ್ಟುಕೊಂಡು ಬರೋರಿಗೆ ಕಿಕ್ ಕೊಡಬೇಕು. ಈ ಎರಡೂ ಮನಸ್ಥಿತಿಯ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆದರೆ, 'ಗಾಳಿಪಟ' ಮತ್ತೆ ತಿಂಗಳುಗಳ ಕಾಲ ಹಾರಾಡುತ್ತಲೇ ಇರುತ್ತೆ.

  English summary
  Ganesh Diganth Pawan Kumar Starrer Gaalipata 2 Premier Show Response, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X