For Quick Alerts
  ALLOW NOTIFICATIONS  
  For Daily Alerts

  ಸಪ್ತ ಸಾಗರದಾಚೆ ಬಹಳ ಎತ್ತರಕ್ಕೆ ಹಾರಲಿದೆ ಭಟ್ಟರ ಹೊಸ 'ಗಾಳಿಪಟ'!

  |

  ಸೂತ್ರ ಕಟ್ಟಿದ್ದಾಗಿದೆ. ಗಾಳಿನೂ ಬೀಸುತ್ತಿದೆ. ಬಹಳ ಗಟ್ಟಿಯಾಗಿ ಸೂತ್ರ ಕಟ್ಟಿ ಬಣ್ಣದ ಗಾಳಿಪಟ ಹಾರಿಸಲು ನಿರ್ದೇಶಕ ಯೋಗರಾಜ್‌ ಭಟ್ ಸಿದ್ಧರಾಗಿದ್ದಾರೆ. ಇದೇ ಶುಕ್ರವಾರ(ಆಗಸ್ಟ್ 12) ಏಕಕಾಲಕ್ಕೆ ದೇಶ ವಿದೇಶಗಳಲ್ಲಿ 'ಗಾಳಿಪಟ-2' ಹಾರಾಟ ಶುರುವಾಗಲಿದೆ.

  ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಹಾಗೂ ಲೂಸಿಯಾ ಪವನ್ ಕುಮಾರ್ ನಟನೆಯ 'ಗಾಳಿಪಟ-2' ಸಿನಿಮಾ ಬಿಡುಗಡೆಗೆ ಇನ್ನೆರಡೇ ದಿನ ಬಾಕಿ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಯೋಗರಾಜ್ ಭಟ್ಟರ ಶೈಲಿಯ ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು.

  ಗಣೇಶ್ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ: ಗಣಿ ಹೇಳಿದ ಕೋಟಿ ಕಥೆಯೇನು?ಗಣೇಶ್ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ: ಗಣಿ ಹೇಳಿದ ಕೋಟಿ ಕಥೆಯೇನು?

  14 ವರ್ಷಗಳ ಹಿಂದೆ 'ಗಾಳಿಪಟ' ಸಿನಿಮಾ ರಿಲೀಸ್ ಆಗಿ 175 ದಿನ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು. ಅದೇ ಟೈಟಲ್‌ನಲ್ಲಿ ಹೊಸ ಕಥೆ ಹೆಣೆದು ಮೂವರು ಸ್ನೇಹಿತರ ಸ್ನೇಹ ಪ್ರೀತಿ ಗೀತಿ ಇತ್ಯಾದಿ ಕಥೆ ಹೇಳಲು ಯೋಗರಾಜ್ ಭಟ್ ಬರ್ತಿದ್ದಾರೆ. ಓವರ್‌ಸೀಸ್‌ನಲ್ಲೂ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಕೊನೆ ಕ್ಷಣದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

  Recommended Video

  ಮತ್ತೊಂದು ವಿವಾದದಲ್ಲಿ ಚಾಲೆಂಜಿಂಗ್ ಸ್ಟಾರ್, ದರ್ಶನ್ ಯಾಕ್ಹೀಗೆ ಎಡವಟ್ಟು ಮಾಡ್ಕೋತಾರೆ..? | Filmibeat Kannada
   ದೇಶಾದ್ಯಂತ ಸಿನಿಮಾ ಗ್ರ್ಯಾಂಡ್ ರಿಲೀಸ್

  ದೇಶಾದ್ಯಂತ ಸಿನಿಮಾ ಗ್ರ್ಯಾಂಡ್ ರಿಲೀಸ್

  ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ 'ಗಾಳಿಪಟ-2' ಸಿನಿಮಾ ರಿಲೀಸ್‌ಗೆ ಈಗಾಗಲೇ ಸ್ಕ್ರೀನ್‌ಗಳು ಸಿದ್ಧವಾಗಿದೆ. ಸದ್ಯ 150ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಹಾಗೂ 60ಕ್ಕೂ ಹೆಚ್ಚು ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ರಿಲೀಸ್ ಪಕ್ಕಾ ಆಗಿದೆ. ಇನ್ನೆರಡು ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.

   ವಿದೇಶಗಳಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್ಸ್

  ವಿದೇಶಗಳಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್ಸ್

  ಕನ್ನಡ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಓವರ್‌ಸೀಸ್‌ನಲ್ಲೂ ಸಖತ್ ಸದ್ದು ಮಾಡ್ತಿವೆ. ಏಕಕಾಲಕ್ಕೆ ವಿದೇಶಗಳಲ್ಲೂ 'ಗಾಳಿಪಟ-2' ಸಿನಿಮಾ ತೆರೆಗಪ್ಪಳಿಸಲಿದೆ. ಯುಎಸ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಸಿಂಗಾಪುರದ 100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ಈಗಾಗಲೇ ಓವರ್‌ಸೀಸ್ ಥಿಯೇಟರ್‌ಗಳ ಲಿಸ್ಟ್‌ ಕೂಡ ಸಿಕ್ಕಿದ್ದು, ಯುಎಸ್‌ನಲ್ಲಿ 4 ದಿನ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

   ಗುರುವಾರವೇ ಪ್ರೀಮಿಯರ್ ಶೋ

  ಗುರುವಾರವೇ ಪ್ರೀಮಿಯರ್ ಶೋ

  ಇನ್ನು ವಿದೇಶದಲ್ಲಿ ಒಂದು ದಿನ ಮೊದಲೇ 'ಗಾಳಿಪಟ-2' ಸಿನಿಮಾ ಪ್ರೀಮಿಯರ್ ಶೋಗೆ ಪ್ಲ್ಯಾನ್ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆದರೆ ವಾಷಿಂಗ್ಟನ್‌ನಲ್ಲಿ ಗುರುವಾರವೇ ಸಿನಿರಸಿಕರು ಹೊಸ 'ಗಾಳಿಪಟ' ಹಾರಾಡೋದನ್ನು ಕಣ್ತುಂಬಿಕೊಳ್ಳಲಿದ್ದಾರೆ.

   ಅನುಪಮಾ ಮೇನ್ ಥಿಯೇಟರ್

  ಅನುಪಮಾ ಮೇನ್ ಥಿಯೇಟರ್

  ಅಂದು 'ಗಾಳಿಪಟ' ಚಿತ್ರ ಕೆಜಿ ರಸ್ತೆಯ ಅಪರ್ಣ(ಅನುಪಮಾ) ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಈ ವಾರ ಅದೇ ಥಿಯೇಟರ್‌ನಲ್ಲಿ 'ಗಾಳಿಪಟ-2' ಸಿನಿಮಾ ಕೂಡ ತೆರೆಗಪ್ಪಳಿಸುತ್ತಿರುವುದು ವಿಶೇಷ. ಈಗಾಗಲೇ ರಾಜ್ಯದಲ್ಲೂ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

  English summary
  Ganesh Diganth Starrer Yogaraj Bhat Directed Gaalipata 2 To Have A Grand Release In Overseas. Know More.
  Tuesday, August 9, 2022, 21:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X