ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ
Recommended Video
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ನಂತರ 'ಗಿಮಿಕ್' ಎಂಬ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಅದಾದ ಬಳಿಕ 'ಗೀತಾ' ಸಿನಿಮಾನೂ ಚಿತ್ರೀಕರಣ ಮಾಡ್ತಿದ್ದು ಸದ್ಯದಲ್ಲೇ ಆ ಚಿತ್ರವೂ ರಿಲೀಸ್ ಆಗುತ್ತೆ.
ಹೀಗೆ, ಗಣೇಶ್ ಅವರ ಸಿನಿಮಾಗಳಿಗಾಗಿ ಕಾಯ್ತಿರುವ ಅಭಿಮಾನಿಗಳು ಮುಂದಿನ ತಿಂಗಳು ಗಣೇಶ್ ಉತ್ಸವ ಮಾಡಲು ಪ್ಲಾನ್ ಮಾಡ್ತಿದ್ರು. ಆದರೆ, ಆ ಉತ್ಸವಕ್ಕೆ ಸ್ವತಃ ಗೋಲ್ಡನ್ ಸ್ಟಾರ್ ಅವರೇ ಬ್ರೇಕ್ ಹಾಕಿದ್ದಾರೆ.

ಹೌದು, ಜುಲೈ 2 ರಂದು ಗಣೇಶ್ ಅವರ ಹುಟ್ಟುಹಬ್ಬ. ಈ ವರ್ಷ ಗಣೇಶ್ ಬರ್ತಡೇ ಆಚರಿಸಿಕೊಳ್ಳಲ್ಲ ಎಂದು ತಿಳಿಸಿದ್ದಾರೆ. ಯಾಕೆ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಿರುವ ಗಣಿ, ಕಾರಣವನ್ನ ಕೂಡ ಬಹಿರಂಗಪಡಿಸಿದ್ದಾರೆ.
''ನನ್ನ ಅಚ್ಚು ಮೆಚ್ಚಿನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ಒಂದು ಕಳಕಳಿಯ ವಿನಂತಿ. ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಕಾರಣ ಕೆಲವು ತಿಂಗಳ ಹಿಂದೆಯಷ್ಟೇ ನನ್ನ ತಂದೆಯವರನ್ನು ಅಗಲಿದ್ದೇನೆ ಅಲ್ಲದೇ ಈ ಸಂದರ್ಭದಲ್ಲಿ ಮನೆಯಲ್ಲಿ ನ್ಯಾವಾರೂ ಇರುವುದಿಲ್ಲ. ಆದ್ದರಿಂದ ದೂರದ ಊರುಗಳಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ. ನನ್ನ ಹುಟ್ಟುಹಬ್ಬ ಆಚರಿಸಲು ದೂರದಿಂದ ಹಲವು ಸಿದ್ಧತೆಗಳೊಂದಿಗೆ ಬಂದು ಶುಭಕೋರಿ ಸಂಭ್ರಮಿಸುವ ನಿಮ್ಮ ಪ್ರೀತಿಗೆ ನಾನೆಂದೂ ಋಣಿ''

''ಆದ್ದರಿಂದ ಅಭಿಮಾನಿಗಳು ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗಾಗಿ ಹಣ ಖರ್ಚು ಮಾಡದೇ ಹತ್ತಿರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದೇ ನನಗೆ ನೀವು ಕೊಡುವ ಅತ್ಯುತ್ತಮ ಉಡಗೊರೆ, ಇಷ್ಟು ಪ್ರೀತಿ, ಅಭಿಮಾನ ಹೊಂದಿರುವ ನೀವು ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ಸಂಪೂರ್ಣ ವಿಶ್ವಾಸವಿದೆ. ದಯವಿಟ್ಟು ಸಹಕರಿಸಿ. ನಿಮ್ಮ ಪ್ರೀತಿ ಸದಾ ಇರಲಿ'' ಎಂದು ಗಣೇಶ್ ವಿನಂತಿಸಿಕೊಂಡಿದ್ದಾರೆ.


Click it and Unblock the Notifications











