For Quick Alerts
  ALLOW NOTIFICATIONS  
  For Daily Alerts

  15 ವರ್ಷದ ಜರ್ನಿಯಲ್ಲಿ ಮೊದಲ ಸಲ ವಿಶೇಷ ಪಾತ್ರದಲ್ಲಿ ಗಣೇಶ್ ನಟನೆ

  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಖತ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಇಂದಿನಿಂದ (ಮಾರ್ಚ್ 22) ಮತ್ತೆ ಶೂಟಿಂಗ್ ಪ್ರಾರಂಭಿಸಿದೆ.

  Ganesh first time playing a blind person character in Suni Directional Sakath Movie.

  ಇಷ್ಟು ವರ್ಷದ ಜರ್ನಿಯಲ್ಲಿ ನಟ ಗಣೇಶ್ ಮೊಟ್ಟ ಮೊದಲ ಸಲ ವಿಶೇಷವಾದ ಹಾಗೂ ಇಂತಹದೊಂದು ಸವಾಲಿನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಸ್ವತಃ ಗಣಿ ಟ್ವಿಟ್ಟರ್‌ ಮೂಲಕ ಮಾಹಿತಿ ನೀಡಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ 'ಸಖತ್'ಗೆ ಸಿಕ್ಕಳು ನಾಯಕಿಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ 'ಸಖತ್'ಗೆ ಸಿಕ್ಕಳು ನಾಯಕಿ

  ''ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ.. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ. ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ..'' ಎಂದು ತಮ್ಮ ಪಾತ್ರದ ಬಗ್ಗೆ ಗಣೇಶ್ ಬಹಿರಂಗಪಡಿಸಿದ್ದಾರೆ.

  ಹೌದು, ಸಖತ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಪೂರ್ತಿ ಇದೇ ಪಾತ್ರ ಇರುತ್ತಾ ಅಥವಾ ಕೆಲವು ದೃಶ್ಯಕ್ಕೆ ಮಾತ್ರ ಸೀಮಿತನಾ ಎನ್ನುವುದು ಸದ್ಯಕ್ಕೆ ಕುತೂಹಲ.

  'ಸಖತ್' ಸಿನಿಮಾದಲ್ಲಿ ನಟಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ಹೊರಬಿದ್ದಿತ್ತು. ಮೊದಲ ಬಾರಿಗೆ ಗಣೇಶ್ ಜೊತೆ ನಿಶ್ವಿಕಾ ತೆರೆ ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ.

  ಈ ಹಿಂದೆ ಚಮಕ್ ಸಿನಿಮಾದಲ್ಲಿ ಸಿಂಪಲ್ ಸುನಿ ಮತ್ತು ಗಣೇಶ್ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಸಖತ್ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ.

  ಇನ್ನುಳಿದಂತೆ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ-2'' ಸಿನಿಮಾ, ತ್ರಿಬಲ್ ರೈಡಿಂಗ್' ಚಿತ್ರಗಳಲ್ಲಿಯೂ ಗಣೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಪ್ರಶಾಂತ್ ರಾಜ್ ಜೊತೆ ಒಂದು ಸಿನಿಮಾ ಹಾಗೂ ಸ್ಟೋರಿ ಆಫ್ ರಾಯಗಢ್ ಚಿತ್ರಗಳು ಕೈಯಲ್ಲಿವೆ.

  English summary
  Kannada actor Ganesh first time playing a blind person character in Suni Directional Sakath Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X