ಪ್ರಥಮ್ 'ಎಂಎಲ್ಎ' ನೋಡಿ ಥ್ರಿಲ್ ಆದ ಗೋಲ್ಡನ್ ಸ್ಟಾರ್
Recommended Video

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ದಿನದಂದು ಒಳ್ಳೆ ಹುಡುಗ ಖ್ಯಾತಿ ಪ್ರಥಮ್ ಅಭಿನಯದ 'ಎಂಎಲ್ಎ' ಚಿತ್ರದ ಟ್ರೈಲರ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ.
ಗಣೇಶ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಹೋಗಿದ್ದ ಪ್ರಥಮ್, ತಮ್ಮ 'ಎಂಎಲ್ಎ' ಚಿತ್ರದ ಟ್ರೈಲರ್ ನ್ನ ಗಣೇಶ್ ಅವರಿಗೆ ತೋರಿಸಿದ್ದಾರೆ. ಟ್ರೈಲರ್ ನೋಡಿ ಪ್ರಥಮ್ ಹಾಗೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, 'ಎಂಎಲ್ಎ' ಟ್ರೈಲರ್ ಇದೇ ತಿಂಗಳು 5ನೇ ತಾರೀಖು ಬಿಡುಗಡೆಯಾಗುತ್ತಿದ್ದು, ಖುದ್ದು ಗಣೇಶ್ ಅವರೇ ರಿಲೀಸ್ ಮಾಡಲಿದ್ದಾರೆ.

ಇನ್ನುಳಿದಂತೆ ಈಗಾಗಲೇ 'ಎಂಎಲ್ಎ' ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ನಡೆಸಿದ್ದು ಅಲ್ಲಿಯವರೇ ಆದ ವೆಂಕಟೇಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಥಮ್ ನಾಯಕನಾಗಿರುವ ಚಿತ್ರದಲ್ಲಿ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತ್ತರರು ಅಭಿನಯಿಸಿದ್ದಾರೆ. ಇನ್ನು ಹಾಡುಗಳು ಬಿಡುಗಡೆಯಾಗಿದ್ದು, ಹಾಡುಗಳು ಗಮನ ಸೆಳೆದಿದೆ.


Click it and Unblock the Notifications











